ಮುಂಬಯಿ: ಜಾಗತಿಕ ಷೇರು ಮಾರುಕಟ್ಟೆಯ ಧನಾತ್ಮಕ ವಹಿವಾಟಿನ ಹಿನ್ನೆಲೆಯಲ್ಲಿ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಶುಕ್ರವಾರ(ಜೂನ್ 11) 174 ಅಂಕಗಳ ಏರಿಕೆಯೊಂದಿಗೆ ದಾಖಲೆಯ ಪ್ರಮಾಣದೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಇದನ್ನೂ ಓದಿ:ಜೂ.14 ರಿಂದ ಲಾಕ್ ಡೌನ್ ವಿನಾಯಿತಿ : ಇನ್ನೊಂದು 3-4 ದಿನ ಸಹಕರಿಸಿ ಎಂದ ಬೊಮ್ಮಾಯಿ
ಮುಂಬಯಿ ಷೇರುಪೇಟೆಯ ಬಿಎಸ್ ಇ ಸಂವೇದಿ ಸೂಚ್ಯಂಕ 174.29 ಅಂಕಗಳೊಂದಿಗೆ ಏರಿಕೆಯಾಗಿದ್ದು, 52,641.53ರ ದಾಖಲೆ ಅಂಕದೊಂದಿಗೆ ವಹಿವಾಟು ಮುಕ್ತಾಯಗೊಳಿಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 61.60 ಅಂಕಗಳ ಏರಿಕೆಯೊಂದಿಗೆ 15,799.35ರ ಗಡಿ ದಾಟಿದೆ.
ಸೆನ್ಸೆಕ್ಸ್ ಏರಿಕೆಯೊಂದಿಗೆ ಡಾ.ರೆಡ್ಡೀಸ್, ಪವರ್ ಗ್ರಿಡ್, ಟಿಸಿಎಸ್, ಎಚ್ ಸಿಎಲ್ ಟೆಕ್, ಇನ್ಫೋಸಿಸ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಲಾಭಗಳಿಸಿವೆ. ಮತ್ತೊಂದೆಡೆ ಎಲ್ ಆ್ಯಂಡ್ ಟಿ, ಇಂಡಸ್ ಇಂಡ್ ಬ್ಯಾಂಕ್, ಬಜಾಜ್ ಫಿನ್ ಸರ್ವ್ ಮತ್ತು ಭಾರ್ತಿ ಏರ್ ಟೆಲ್ ಷೇರುಗಳು ನಷ್ಟ ಅನುಭವಿಸಿದೆ.
ಶಾಂಘೈ ಮತ್ತು ಟೋಕಿಯೋ ಷೇರುಮಾರುಕಟ್ಟೆ ಇಂದು ಹೆಚ್ಚಿನ ವಹಿವಾಟು ಕಂಡಿಲ್ಲ. ಹಾಂಗ್ ಕಾಂಗ್ ಮತ್ತು ಸಿಯೋಲ್ ಮಾರುಕಟ್ಟೆಯಲ್ಲಿ ಧನಾತ್ಮಕ ವಹಿವಾಟು ನಡೆಸಿದೆ.