ಮುಂಬಯಿ: ಸತತ ನಾಲ್ಕು ದಿನಗಳ ಕಾಲ ಜಾಗತಿಕ ಷೇರುಮಾರುಕಟ್ಟೆ ಸಕಾರಾತ್ಮಕ ಬೆಳವಣಿಗೆಯ ಹಿನ್ನೆಲೆಯಲ್ಲಿ ಏರುಗತಿ ಕಂಡಿದ್ದ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ ಶುಕ್ರವಾರ(ಏ.30) 400 ಅಂಕ ಕುಸಿತ ಕಂಡಿದೆ. ನಿಫ್ಟಿ ಕೂಡಾ 15ಸಾವಿರಕ್ಕಿಂತ ಕೆಳಕ್ಕೆ ಕುಸಿದಿದೆ.
ಇದನ್ನೂ ಓದಿ:ಒಂದು ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆ ಆರ್ಡರ್ ಮಾಡಲಾಗಿದೆ: ಸಚಿವ ಸುಧಾಕರ್
ಮುಂಬಯಿ ಷೇರುಪೇಟೆಯಲ್ಲಿ ಇಂದಿನ ಆರಂಭಿಕ ವಹಿವಾಟಿನಲ್ಲಿ ಬ್ಯಾಂಕ್ಸ್, ಫೈನಾಶ್ಶಿಯಲ್ಸ್ ಮತ್ತು ಮೆಟಲ್ ಷೇರುಗಳು ಮಾರಾಟ ಕಡಿಮೆ ಪ್ರಮಾಣದಲ್ಲಿ ನಡೆದ ಪರಿಣಾಮ ಸೆನ್ಸೆಕ್ಸ್ ಇಳಿಕೆಗೆ ಕಾರಣವಾಗಿದೆ.
ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 405.05 ಅಂಕ ಕುಸಿತ ಕಂಡಿದ್ದು, 49,360.89 ಅಂಕಗಳ ವಹಿವಾಟು ನಡೆಸಿದೆ. ಅದೇ ರೀತಿ ನಿಫ್ಟಿ ಕೂಡಾ 147.55ಅಂಕ ಕುಸಿತವಾಗಿದ್ದು, 14,747.35ರ ಗಡಿ ತಲುಪಿದೆ.
ಸೆನ್ಸೆಕ್ಸ್ ಕುಸಿತದಿಂದ ಎಚ್ ಡಿಎಫ್ ಸಿ ಬ್ಯಾಂಕ್, ಎಚ್ ಡಿಎಫ್ ಸಿ ಮತ್ತು ಹಿಂದೂಸ್ತಾನ್ ಯೂನಿಲಿವರ್ ಷೇರುಗಳು ನಷ್ಟ ಅನುಭವಿಸಿದ್ದು, ಒಎನ್ ಜಿಸಿ, ಎನ್ ಟಿಪಿಸಿ ಮತ್ತು ಡಾ.ರೆಡ್ಡೀಸ್ ಲ್ಯಾಬೋರೇಟರೀಸ್ ಷೇರುಗಳು ಲಾಭಗಳಿಸಿದೆ.