Advertisement

ಮಾರುಕಟ್ಟೆ ವಿಶ್ಲೇಷಕರಿಗೂ ಸಿಗಲಿದೆ ಎಚ್‌-1 ಬಿ ವೀಸಾ

06:56 PM Oct 29, 2021 | Team Udayavani |

ವಾಷಿಂಗ್ಟನ್‌: ಅಮೆರಿಕ ವೃತ್ತಿಪರರಿಗೆ ನೀಡುವ ಎಚ್‌-1ಬಿ ವೀಸಾ ಇನ್ನು ಮುಂದೆ ಮಾರುಕಟ್ಟೆ ಸಂಶೋಧನೆ ಕ್ಷೇತ್ರದ ವಿಶ್ಲೇಷಕ (ಮಾರ್ಕೆಟ್‌ ರಿಸರ್ಚ್‌ ಅನಲಿಸ್ಟ್‌)ರಿಗೂ ಲಭ್ಯವಾಗಲಿದೆ.

Advertisement

ಈ ಬಗ್ಗೆ ಸಲ್ಲಿಕೆಯಾಗಿದ್ದ ಹಲವು ಮನವಿ, ಆಗ್ರಹಗಳಿಗೆ ಅಮೆರಿಕದ ಪೌರತ್ವ ಮತ್ತು ವಲಸೆಗಳ ವಿಭಾಗ (ಯುಎಸ್‌ಸಿಐಎಸ್‌) ಕೊನೆಗೂ ಅಂಗೀಕಾರ ನೀಡಿದೆ.

ಈ ನಿರ್ಧಾರ, ಭಾರತದಲ್ಲಿನ ಮಾರುಕಟ್ಟೆ ಸಂಶೋಧನೆ ಕ್ಷೇತ್ರದ ಉದ್ಯೋಗಿಗಳಿಗೆ ಹೆಚ್ಚಿನ ರೀತಿಯಲ್ಲಿ ಲಾಭವಾಗಲಿದೆ.

ಇದುವರೆಗೆ ಮಾಹಿತಿ ತಂತ್ರಜ್ಞಾನ, ವಿಜ್ಞಾನ ಕ್ಷೇತ್ರದವರಿಗೆ ಮಾತ್ರ ಎಚ್‌-1ಬಿ ವೀಸಾ ನೀಡಲಾಗುತ್ತಿತ್ತು.

ಇದನ್ನೂ ಓದಿ:ಪುನೀತ್ ಸರ್ ಅತ್ಯಂತ ಸುಲಭವಾಗಿ ತಲುಪಬಹುದಾಗಿದ್ದ ಸೂಪರ್ ಸ್ಟಾರ್: ಮಣಿಕಾಂತ್ ಕದ್ರಿ

Advertisement

ಈ ಬಗ್ಗೆ ಅಮೆರಿಕದ ಉತ್ತರ ಕ್ಯಾಲಿಫೋರ್ನಿಯಾ ಜಿಲ್ಲೆಯ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿತ್ತು. ಮಾರುಕಟ್ಟೆ ಸಂಶೋಧನೆ ಕ್ಷೇತ್ರದವರಿಗೆ ಎಚ್‌-1ಬಿ ಏಕೆ ನೀಡಲಾಗುತ್ತಿಲ್ಲ ಎಂಬ ವಿಚಾರಕ್ಕೆ ವಾದ ಮಂಡನೆ ನಡೆದು, ಅಂತಿಮವಾಗಿ ಅರ್ಜಿದಾರರಿಗೆ ಜಯ ಸಿಕ್ಕಿದೆ.

ಹೀಗಾಗಿ, ಸದ್ಯ ವೀಸಾ ನಿರಾಕರಣೆಗೊಂಡವರ ಅರ್ಜಿಗಳನ್ನು ಮತ್ತೊಮ್ಮೆ ಪರಿಶೀಲಿಸಿ ಯುಎಸ್‌ಸಿಐಎಸ್‌ ಕ್ರಮ ಕೈಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next