Advertisement

32,000 ಅಂಕಗಳ ಮಟ್ಟ ಪುನರ್‌ ಸಂಪಾದಿಸಿದ ಮುಂಬಯಿ ಶೇರು

11:21 AM Oct 11, 2017 | udayavani editorial |

ಮುಂಬಯಿ : ವಿಶ್ವ ಜಾಗತಿಕ ಮಾರುಕಟ್ಟೆಗಳಲ್ಲಿ ತೋರಿ ಬಂದಿರುವ ಧನಾತ್ಮಕ ಪ್ರವೃತ್ತಿಯನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 104 ಅಂಕಗಳ ಮುನ್ನಡೆಯನ್ನು ಸಾಧಿಸುವ ಮೂಲಕ 32,000 ಅಂಕಗಳ ಮಟ್ಟವನ್ನು ಪುನರ್‌ಸಂಪಾದಿಸಿತು.

Advertisement

ಬೆಳಗ್ಗೆ 11.15ರ ಹೊತ್ತಿಗೆ ಸೆನ್ಸೆಕ್ಸ್‌ 146.53 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 32,070.94 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 43.90 ಅಂಕಗಳ ಮುನ್ನಡೆಯೊಂದಿಗ 10,060.90 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.

ರಿಲಯನ್ಸ್‌, ಕೋಲ್‌ ಇಂಡಿಯಾ, ಮಾರುತಿ ಸುಜುಕಿ, ಎಕ್ಸಿಸ್‌ ಬ್ಯಾಂಕ್‌, ಇನ್‌ಫೋಸಿಸ್‌ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.

ಟಾಪ್‌ ಗೇನರ್‌ಗಳಾಗಿ ಭಾರ್ತಿ ಏರ್‌ಟೆಲ್‌, ಎಚ್‌ಪಿಸಿಎಲ್‌, ಐಡಿಯಾ ಸೆಲ್ಯುಲರ್‌, ಭಾರ್ತಿ ಇನ್‌ಫ್ರಾಟೆಲ್‌, ಬಜಾಜ್‌ ಆಟೋ ಶೇರುಗಳು ಮುನ್ನಡೆ ಕಂಡರೆ, ಟಾಪ್‌ ಲೂಸರ್‌ಗಳಾಗಿ ಅಲ್‌ಟ್ರಾ ಟೆಕ್‌ ಸಿಮೆಂಟ್‌, ಕೋಲ್‌ ಇಂಡಿಯಾ, ಝೀ ಎಂಟರ್‌ಟೇನ್‌ಮೆಂಟ್‌, ಲೂಪಿನ್‌ ಮತ್ತು ಡಾ. ರೆಡ್ಡಿ ಶೇರುಗಳು ಹಿನ್ನಡೆಗೆ ಗುರಿಯಾದವು. 

Advertisement

Udayavani is now on Telegram. Click here to join our channel and stay updated with the latest news.

Next