ಮುಂಬಯಿ : ಭಾರತೀಯ ರಿಸರ್ವ್ ಬ್ಯಾಂಕ್ ಇಂದು ತನ್ನ ದ್ವೆ„ಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಲಿದ್ದು ಆ ಬಗ್ಗೆ ತೀವ್ರ ಕುತೂಹಲ ತಳೆದಿರುವ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 69 ಅಂಕಗಳ ಮುನ್ನಡೆಯನ್ನು ಸಾಧಿಸಿ ಮೂರು ದಿನಗಳ ಸೋಲಿಗೆ ಬ್ರೇಕ್ ಹಾಕಿತು.
ಇಂದು ಎಫ್ಎಂಸಿಜಿ, ಆಟೋ, ಮೆಟಲ್, ಐಟಿ, ಕ್ಯಾಪಿಟಲ್ ಗೂಡ್ಸ್ ಕ್ಷೇತ್ರದ ಶೇರುಗಳು ಶೇ.0.30 ಮುನ್ನಡೆಯನ್ನು ಕಂಡವು. ಮುಂಬಯಿ ಶೇರು ಪೇಟೆ ಕಳೆದ ಮೂರು ದಿನಗಳ ನಿರಂತರ ಸೋಲಿನ ಹಾದಿಯಲ್ಲಿ ಒಟ್ಟು 419.17 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು.
ಇಂದು ಬುಧವಾರ ಬೆಳಗ್ಗೆ 11.00 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ 125.23 ಅಂಕಗಳ ಮುನ್ನಡೆಯೊಂದಿಗೆ 35,028.44 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 39.20 ಅಂಕಗಳ ಮುನ್ನಡೆಯೊಂದಿಗೆ 10,632.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ವೇದಾಂತ, ಟಿಸಿಎಸ್, ಬಜಾಜ್ ಫಿನಾನ್ಸ್, ರಿಲಯನ್ಸ್, ಐಸಿಐಸಿಐ ಬ್ಯಾಂಕ್ ಇಂದು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಐಡಿಯಾ ಸೆಲ್ಯುಲರ್, ಬಜಾಜ್ ಆಟೋ, ಭಾರ್ತಿ ಏರ್‌ಟೆಲ್, ಸನ್ ಫಾರ್ಮಾ, ಬಜಾಜ್ ಫಿನಾನ್ಸ್; ಟಾಪ್ ಲೂಸರ್‌ಗಳು : ಟೆಕ್ ಮಹೀಂದ್ರ, ಎಚ್‌ಪಿಸಿಎಲ್, ಏಶ್ಯನ್ ಪೇಂಟ್ಸ್, ಗೇಲ್, ವೇದಾಂತ.
ಡಾಲರ್ ಎದುರು ರೂಪಾಯಿ ಇಂದು 11 ಪೈಸೆಯಷ್ಟು ಸದೃಢಗೊಂಡು 67.04 ರೂ. ಮಟ್ಟಕ್ಕೆ ಏರಿರುವುದು ಮುಂಬಯಿ ಶೇರು ಪೇಟೆಗೆ ಸಮಾಧಾನ ತಂದಿತು.