Advertisement

ಗಂಗಾವತಿಯಲ್ಲಿ ಲಾಕ್ ಡೌನ್ ಉಲ್ಲಂಘಿಸಿ ಮಧ್ಯರಾತ್ರಿಯಿಂದ ಬೆಳಗಿನವರೆಗೂ ಮಾರ್ಕೆಟ್ ಓಪನ್

09:03 AM Apr 17, 2020 | keerthan |

ಗಂಗಾವತಿ: ಕೋವಿಡ್-19 ರೋಗದ ಹಿನ್ನೆಲೆಯಲ್ಲಿ ಲಾಕ್ ಡೌನ್ ಇದ್ದು ಕರ್ಪ್ಯೂ ಹೇರಲಾಗಿದೆ. ಮಾರುಕಟ್ಟೆಯ ಎಲ್ಲಾ ಅಂಗಡಿ ಮುಂಗಟ್ಟಗಳನ್ನು ಸಂಪೂರ್ಣ ಮುಚ್ಚಲಾಗಿದೆ. ಜನರು ಸೇರುವುದರಿಂದ ಜನಸಂದಣಿಯಲ್ಲಿ ಸೋಂಕು ಹರಡುತ್ತದೆ ಎಂಬ ಕಾರಣಕ್ಕೆ ಈ ನಿರ್ಧಾರ ಮಾಡಲಾಗಿದೆ.

Advertisement

ಆದರೆ ಗಂಗಾವತಿಯಲ್ಲಿ ಮಧ್ಯರಾತ್ರಿಯಿಂದ ಬೆಳಗಿನ ಜಾವ 5 ಗಂಟೆಯವರೆಗೆ ಗಾಂಧಿ ಚೌಕ್, ಮಹಾವೀರ ಸರ್ಕಲ್, ಇಸ್ಲಾಂಪೂರ ಹಾಗು ವಾರದ ಸಂತೆ ಬಯಲು ಪ್ರದೇಶದಲ್ಲಿ ದಿನಸಿ, ಬಟ್ಟೆ, ಮೊಬೈಲ್,ಎಲೆಕ್ಟ್ರಿಕಲ್ ಅಂಗಡಿಗಳು ತೆರೆದು ವ್ಯವಹಾರ ನಡೆಸಲಾಗುತ್ತಿದೆ.

ಪೊಲೀಸರು ರಾತ್ರಿ ಪಹರೆ ಇಲ್ಲದ ವೇಳೆ ಲಾಕ್ ಡೌನ್ ಉಲ್ಲಂಘನೆ ಮಾಡಿ ಇಲ್ಲಿ ವ್ಯಾಪಾರ ನಡೆಸಲಾಗುತ್ತಿದೆ. ಆದರೆ ಯಾವುದೇ ಮುಂಜಾಗ್ರತಾ ಕ್ರಮವಿಲ್ಲದೆ, ಸೋಂಕು ಹರಡುವ ಭೀತಿಯ ನಡುವೆ ಇಲ್ಲಿ ವ್ಯಾಪಾರ ವ್ಯವಹಾರ ನಡೆಯುತ್ತಿದೆ.

ಜಿಲ್ಲಾಧಿಕಾರಿ ಹಾಗು ಪೊಲೀಸ್ ಅಧಿಕಾರಿಗಳ ಮುತುವರ್ಜಿಯಿಂದ ಜಿಲ್ಲೆಯಲ್ಲಿ ಇದುವರೆಗೂ ಕೋವಿಡ್-19  ವೈರಸ್ ಹರಡದಂತೆ ಜಿಲ್ಲಾಡಳಿತದ ಕೆಲಸ ಸಫಲವಾಗಿದೆ. ಆದರೆ ವ್ಯಾಪಾರದ ಆಸೆಗಾಗಿ ಅಂಗಡಿ ಮಾಲೀಕರ ಮಧ್ಯ ರಾತ್ರಿ ವ್ಯವಹಾರದಿಂದ ಅನಾಹುತ ನಡೆಯುವ ಮೊದಲು ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕಾದ ಅವಶ್ಯಕತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next