Advertisement

ಕಸ ಮುಕ್ತವಾಗಲಿ ಸಂತೆ ಮೈದಾನ

02:21 PM Jan 23, 2022 | Team Udayavani |

ಬಾಗೇಪಲ್ಲಿ: ಪಟ್ಟಣದ ಸಂತೆತೋಪು ಕಸದಿಂದ ತುಂಬಿ ತುಳುಕುತ್ತಿದೆ. ಕೊಳಚೆ ನೀರು ಮೈದಾನದಲ್ಲೇ ಹರಿಯುತ್ತಿರುವುದರಿಂದ ಓಡಾಡಲು ಸಹ ಆಗದಂತಹಪರಿಸ್ಥಿತಿ ನಿರ್ಮಾಣವಾಗಿದೆ. ವ್ಯಾಪಾರಿಗಳು, ಗ್ರಾಹಕರು,ರೈತರು ಕೊಳಚೆ ನೀರಿನಲ್ಲೇ ವ್ಯಾಪಾರ ವಹಿವಾಟು ನಡೆಸಬೇಕಾಗಿದೆ.

Advertisement

ಕೊಳಚೆ ನೀರು ಹರಿಯುತ್ತಿರುವುದರಿಂದ ನೊಣ, ಸೊಳ್ಳೆ, ಹೆಗ್ಗಣ, ವಿಷ ಜಂತುಗಳ ಕಾಟ ಹೆಚ್ಚಾಗಿದೆ.ವ್ಯಾಪಾರ ಮಾಡಲು ಎಲ್ಲಾ ವ್ಯವಸ್ಥೆಗಳನ್ನು ಮಾಡಬೇಕಾದ ಪುರಸಭೆ, ಸ್ಥಳೀಯ ಜನಪ್ರತಿನಿಧಿಗಳು ನಿರ್ಲಕ್ಷ್ಯ ಮಾಡುತ್ತಿರುವುದರಿಂದ ರೈತರು, ವ್ಯಾಪಾರಿಗಳುಪರದಾಡುವಂತಾಗಿದೆ. ತಾಲೂಕಿನ ರೈತರು ಬೆಳೆಯುತ್ತಿದ್ದ ತರಕಾರಿ, ದವಸ ಧಾನ್ಯವನ್ನು ಇಲ್ಲಿಗೆ ತಂದು ಮಾರಾಟ ಮಾಡುತ್ತಿದ್ದಾರೆ. ಹಿಂದೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು, ವ್ಯಾಪಾರಿಗಳು, ರೈತರು ಇಲ್ಲಿ ನಡೆಯುವ ಸಂತೆಗೆಆಗಮಿಸುತ್ತಿದ್ದರು. ಅವ್ಯವಸ್ಥೆಗಳಿಂದ ಈಗ ಆ ಸಂಸ್ಕೃತಿ ನಿಧನವಾಗಿ ಕಡಿಮೆ ಆಗುತ್ತಿದೆ.

ಅಸ್ತಿತ್ವ ಕಳೆದುಕೊಳ್ಳುತ್ತಿರುವ ಸಂತೆ: ಈ ಭಾಗದ ಕುಂಬಾರರು ಮಡಿಕೆ-ಕುಡಿಕೆ, ಕಮ್ಮಾರರು ಕಬ್ಬಿಣದ ಕೃಷಿ ಸಲಕರಣೆಗಳು, ಕಟ್ಟಿಗೆ ಸಾಮಾನು, ಪೂಸಲ ಸಮು ದಾಯ ತಯಾರಿಸಿದ ಮಣಿ ಸರಗಳು, ಬಳೆಗಾರರುಹೊತ್ತು ತರುತ್ತಿದ್ದ ರಂಗು ರಂಗಿನ ಬಳೆಗಳು, ಉಪ್ಪಾರರುತಯಾರಿಸುವ ಸುಣ್ಣಕಲ್ಲುಗಳು, ಉಪ್ಪು ಮಾರಾಟಗಾರರುಹೀಗೆ ಅನೇಕ ವೃತ್ತಿಪರರು ತಾವು ತಯಾರಿಸುತ್ತಿದ್ದವಸ್ತುಗಳನ್ನು ಹೊತ್ತು ತಂದು ಇಲ್ಲಿ ಮಾರಾಮಾಡುತ್ತಿದ್ದರು. ವೈಭವಯುತವಾಗಿ ನಡೆಯುತ್ತಿದ್ದ ಸಂತೆ ಇಂದು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ.

ಪುರಸಭೆಯಿಂದ ನಿರ್ಲಕ್ಷ್ಯ: ಇತ್ತೀಚಿನ ದಿನಗಳಲ್ಲಿ ಊರು ಅಭಿವೃದ್ಧಿಯಾಗಿ, ಪ್ರತಿಯೊಂದು ವಸ್ತುವಿಗೂಸಂತೆಗಳ ಮೇಲೆ ಅವಲಂಬಿತವಾಗುವ ಕಾಲಇಲ್ಲದಿರುವುದು ಒಂದು ಕಾರಣವಾದರೆ, ಈ ಸಂತೆಯಬಗ್ಗೆ ಗಮನ ನೀಡದ ಪುರಸಭೆಯು ಸಹ ಈ ಸಂತೆಹೀನಾಯ ಸ್ಥಿತಿಗೆ ತಲುಪಲು ಕಾರಣವಾಗಿದೆ.

ಶೆಡ್‌ಗಳು ನಿರುಪಯುಕ್ತ: ಸದಾ ತಿಪ್ಪೆಗುಂಡಿಗಳಿಂದ ಕೊಳೆತು ನಾರುವ ಸಂತೆ ಪ್ರದೇಶ, ಮಳೆ ಬಂದಾಗಮತ್ತಷ್ಟು ರಾಡಿಯಾಗುತ್ತದೆ. ಅದರಲ್ಲೇ ವ್ಯಾಪಾರಮಾಡಬೇಕಾದ ಸ್ಥಿತಿ ವ್ಯಾಪಾರಸ್ಥರದ್ದಾಗಿದೆ. ಗ್ರಾಹಕರು ಈ ರಾಡಿಯಲ್ಲಿಯೇ ಓಡಾಡಬೇಕಾಗುತ್ತದೆ. ಸಂತೆಮೈದಾನವನ್ನು ಅಭಿವೃದ್ಧಿ ಪಡಿಸಲು, ಮಳೆ ಮತ್ತುಬಿಸಿಲಿನ ರಕ್ಷಣೆಯಲ್ಲಿ ವ್ಯಾಪಾರ ಮಾಡಲು ಶೆಡ್‌ನಿರ್ಮಿಸಲಾಗಿದೆ. ಆದರೆ, ಇಲ್ಲಿ ಹರಡಿರುವ ಕೊಳಚೆ,ಕಸದಿಂದ ವ್ಯಾಪಾರ ಮಾಡಲು ಸಾಧ್ಯವಾಗದೆ ಈ ಶೆಡ್‌ಗಳು ನಿರುಪಯುಕ್ತವಾಗಿವೆ. ಎತ್ತು ಎಮ್ಮೆಗಳನ್ನು ಕಟ್ಟಲು, ಕಾರು ಮತ್ತಿತರೆ ವಾಹನಗಳನ್ನು ನಿಲ್ಲಿಸಿಕೊಳ್ಳಲು ಸುತ್ತಮುತ್ತಲಿರುವ ಜನರು ಈ ಶೆಡ್‌ಗಳನ್ನು ಬಳಸಿಕೊಳ್ಳುತ್ತಿದ್ದಾರೆ.

Advertisement

ಕೊರೊನಾ ಸೋಂಕು ಹೆಚ್ಚು ಹರಡುತ್ತಿರುವ ಹಿನ್ನೆಲೆಯಲ್ಲಿ ಈಗ ಸಂತೆ ನಿಲ್ಲಿಸಲಾಗಿದೆ.ಇದೇ ಸಮಯದಲ್ಲಿ ಸಂತೆ ತೋಪಿನಲ್ಲಿರುವ ಎಲ್ಲಾ ಕಸವನ್ನು ಬೇರೆಡೆಗೆ ಸಾಗಿಸಿ, ಸ್ಟತ್ಛವಾತಾವರಣ ನಿರ್ಮಾಣ ಮಾಡಬೇಕು. ಸಂತೆ ಮೈದಾನ ಒತ್ತುವರಿ ತೆರವು ಮಾಡಬೇಕು. ಕಸಹಾಕುವುದನ್ನು ತಡೆಗಟ್ಟಲು ಸುತ್ತಲು ರಕ್ಷಣಾ ಗೋಡೆಯನ್ನು ನಿರ್ಮಾಣ ಮಾಡಬೇಕು. ರೈತರು, ವ್ಯಾಪಾರಿಗಳು ಮುಕ್ತವಾಗಿ ಸಂತೆ ನಡೆಸಲು ಅನುವು ಮಾಡಿಕೊಡಬೇಕು. ಬಹು ವರ್ಷಗಳಿಂದ ನಡೆಯುತ್ತಿರುವ ಸಂತೆ ಸಂಸ್ಕೃತಿಯನ್ನು ಉಳಿಸಿ ಬೆಳಸಬೇಕು. ರಾಣಾ ಗೋಪಾಲರೆಡ್ಡಿ, ನಾಗರಿಕರು, ಬಾಗೇಪಲ್ಲಿ.

ಪಟ್ಟಣದಲ್ಲಿನ ಸಂತೆ ತೋಪಿನಲ್ಲಿ ಕಸವಿರುವುದು ತಮ್ಮ ಗಮನಕ್ಕೆ ಬಂದಿದೆ. ಆದಷ್ಟು ಬೇಗ ಸ್ವಚ್ಛ ಮಾಡಿಸಿ, ಕಸ ಮುಕ್ತ ಸಂತೆ ಮೈದಾನ ಮಾಡಲು ಕ್ರಮಕೈಗೊಳ್ಳಲಾಗುವುದು. ಮಧುಕರ್‌, ಪುರಸಭೆ ಮುಖ್ಯಾಧಿಕಾರಿ, ಬಾಗೇಪಲ್ಲಿ.

Advertisement

Udayavani is now on Telegram. Click here to join our channel and stay updated with the latest news.

Next