Advertisement
ಗಣೇಶಪುರದಲ್ಲಿ ರವಿವಾರ ಮಾರುಕಟ್ಟೆ ಸಂಕೀರ್ಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಕಾಟಿಪಳ್ಳ, ಕೃಷ್ಣಾಪುರ, ಕೂಳೂರು, ಕಾವೂರು ಸಹಿತ ವಿವಿಧೆಡೆ ಮಾರುಕಟ್ಟೆ ಸಂಕೀರ್ಣಗಳು ತಲೆ ಎತ್ತಲಿವೆ. ಈಗಾಗಲೇ ಕಾವೂರು, ಕೃಷ್ಣಾಪುರದಲ್ಲಿ ಕಾಮಗಾರಿ ಆರಂಭವಾಗಿದೆ ಎಂದು ತಿಳಿಸಿದರು.
ಸಮಯ ಉಳಿತಾಯವಾಗಲಿದೆ ಹಾಗೂ ಗುಣಮಟ್ಟದ ಪರಿಕರಗಳನ್ನು ಖರೀದಿಸಬಹುದಾಗಿದೆ ಎಂದರು. ಉತ್ತರಕ್ಕೆ ಅತ್ಯಧಿಕ ಅನುದಾನ
ನಾಲ್ಕು ವರ್ಷಗಳ ಅವಧಿಯಲ್ಲಿ ಮಂಗಳೂರು ಉತ್ತರಕ್ಕೆ ವಿವಿಧ ಹಣಕಾಸು ಯೋಜನೆಯಡಿ, ಮುಖ್ಯಮಂತ್ರಿಗಳ
ವಿಶೇಷ ವಿವೇಚನೆಯಿಂದ ನೀಡಿದ ಅನುದಾನ ಸಹಿತ ಅಭಿವೃದ್ಧಿ ಕಾರ್ಯಗಳಿಗೆ ನೂರಾರು ಕೋಟಿ ಅನುದಾನ ಬಂದಿದೆ. ಮುಖ್ಯವಾಗಿ ಸುರತ್ಕಲ್ ಗಣೇಶಪುರ ಚತುಷ್ಪಥ ರಸ್ತೆಗೆ 62 ಕೋ.ರೂ., ಸುರತ್ಕಲ್ ಹೈಟೆಕ್ ಮಾರುಕಟ್ಟೆಗೆ 120 ಕೋ.ರೂ. ಸೇರಿದೆ. ನಗರ ಮತ್ತು ಗ್ರಾಮಾಂತರ ಮೂಲ ಸೌಕರ್ಯ ಯೋಜನೆಯಡಿ ರಸ್ತೆ ವಿಸ್ತರಣೆ, ಡಾಮರು ಕಾಮಗಾರಿಗಾಗಿ ಹೆಚ್ಚಿನ ಅನುದಾನ ಬಿಡುಗಡೆಯಾಗಿದೆ ಎಂದರು.
Related Articles
Advertisement
ಮನಪಾ ಹಣಕಾಸು ಸ್ಥಾಯೀ ಸಮಿತಿ ಅಧ್ಯಕ್ಷೆ ಪ್ರತಿಭಾ ಕುಳಾಯಿ ಮಾತನಾಡಿ, ಈ ಬಾರಿ ಸುರತ್ಕಲ್ ಕ್ಷೇತ್ರದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿಯೇ ಬೇಕಾಗುವ ಮಾರುಕಟ್ಟೆ, ಬಸ್ ನಿಲ್ದಾಣ, ರಸ್ತೆಗಳ ಅಭಿವೃದ್ಧಿಯಂತಹ ಕಾಮಗಾರಿಗಳಿಗೆ ದಾಖಲೆಯ ಅನುದಾನ ಬಿಡುಗಡೆ ಮಾಡಿಸುವಲ್ಲಿ ಶಾಸಕರು ಯಶಸ್ವಿಯಾಗಿದ್ದಾರೆ. ಸುರತ್ಕಲ್ ಬೀಚ್ ನಗರಿಯಾಗಿದ್ದು, ಪ್ರವಾಸೋದ್ಯಮದ ಅಭಿವೃದ್ಧಿಗೂ ಶಾಸಕರು ವಿಶೇಷ ಕ್ರಿಯಾಯೋಜನೆ ರೂಪಿಸಿ ಅನುದಾನ ಬಿಡುಗಡೆ ಮಾಡಿಸಬೇಕು ಎಂದು ಮನವಿ ಮಾಡಿದರು.
ಸ್ಥಳೀಯ ಕಾರ್ಪೊರೇಟರ್ ಬಶೀರ್ ಅಹ್ಮದ್, ಮಾಜಿ ಕಾರ್ಪೊರೇಟರ್ ಹರೀಶ್ ಕೆ., ಯುವ ಕಾಂಗ್ರೆಸ್‌ನ ಉತ್ತಮ್ ಆಳ್ವ, ಸುರತ್ಕಲ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಕುಂತಳಾ ಕಾಮತ್, ವೈ. ರಾಘವೇಂದ್ರ ರಾವ್, ನವೋದಯ ಸಂಘದ ಅಧ್ಯಕ್ಷ ಧರ್ಮೇಂದ್ರ, ಮುಖಂಡರಾದ ಪದ್ಮನಾಭ ಶೆಟ್ಟಿ, ಜೈಸನ್, ಹಬೀಬ್, ರೇಷ್ಮಾ,ಶಕೀನ, ರಘುರಾಂ, ಶಾಂತಾರಾಮ್, ರಾಜೇಶ್, ಶೇಖರ್ ಪೂಜಾರಿ, ಸಲೀಂ, ಹಮೀದ್ ಕಟ್ಲ, ಅಬೂಬಕರ್, ರವಿ ಶೆಟ್ಟಿ , ಪಾಲಿಕೆಯಸುರತ್ಕಲ್ ವಲಯಾಯುಕ್ತ ರವಿಶಂಕರ್, ಎಂಜಿನಿಯರ್ ಖಾದರ್ ಮತ್ತಿತರರು ಉಪಸ್ಥಿತರಿದ್ದರು.ಉಪಾಧ್ಯಕ್ಷ ಹುಸೈನ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು. ನೂತನ ಮಾರುಕಟ್ಟೆ ಸಂಕೀರ್ಣವು 3,800 ಚದರ ಅಡಿ ವಿಸ್ತೀರ್ಣ ಇರಲಿದೆ. ಮೊದಲ ಹಂತದಲ್ಲಿ 50 ಲ.ರೂ, ಬಿಡುಗಡೆಯಾಗಿದ್ದು, ನೆಲ ಅಂತಸ್ತು ಹಾಗೂ ಪ್ರಥಮ ಅಂತಸ್ತು ನಿರ್ಮಾಣವಾಗಲಿದೆ. 120 ಚದರ ಅಡಿಯ ಒಟ್ಟು 16 ಅಂಗಡಿಗಳು ಇರಲಿವೆ.