ಮುಂಬಯಿ: ಬಾಂಬೆ ಷೇರುಪೇಟೆಯಲ್ಲಿ ಸಂವೇದಿ ಸೂಚ್ಯಂಕ ಬುಧವಾರವೂ (ಡಿಸೆಂಬರ್ 09, 2020) ಮತ್ತೆ ದಾಖಲೆ ಸೃಷ್ಟಿಸಿದೆ. ಜಾಗತಿಕ ಮಟ್ಟದಲ್ಲಿ ಸಕಾರಾತ್ಮಕ ಬೆಳವಣಿಗೆ ಹಿನ್ನೆಲೆಯಲ್ಲಿ ಹೂಡಿಕೆದಾರರು ಐಟಿ, ಬ್ಯಾಂಕಿಂಗ್ ಹಾಗೂ ಫೈನಾಶ್ಶಿಯಲ್ ಶೇರುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿರುವುದು ಷೇರು ಪೇಟೆ ಚೇತರಿಕೆಗೆ ಕಾರಣವಾಗಿದೆ.
ಬಿಎಸ್ ಇ ಸೆನ್ಸೆಕ್ಸ್ ಸೂಚ್ಯಂಕ 273.22 ಅಂಕಗಳಷ್ಟು ಏರಿಕೆ ಕಂಡಿದ್ದು, 45,881.73 ಅಂಕಗಳೊಂದಿಗೆ ವಹಿವಾಟು ಆರಂಭಗೊಂಡಿದೆ. ನಿಫ್ಟಿ ಕೂಡಾ 78.25 ಅಂಕಗಳಷ್ಟು ಏರಿಕೆಯಾಗಿದ್ದು, 13,471.20 ಅಂಕಗಳೊಂದಿಗೆ ದಾಖಲೆಯ ವಹಿವಾಟು ಕಂಡಿದೆ.
ಮಂಗಳವಾರವೂ ಕೂಡಾ ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸಾರ್ವಕಾಲಿಕ ಏರಿಕೆ ಕಂಡಿತ್ತು. ಬಿಎಸ್ ಇ ಸೂಚ್ಯಂಕ 181.54ರಷ್ಟಿ ಏರಿಕೆಯಾಗಿದ್ದು, ಮಧ್ಯಾಂತರದಲ್ಲಿ 45,742.23ಕ್ಕೆ ಸೂಚ್ಯಂಕ ಏರಿಕೆಯಾಗಿದ್ದು ದಿನಾಂತ್ಯಕ್ಕೆ 45,608.1 ಅಂಕಗಳಲ್ಲಿ ಮುಕ್ತಾಯಗೊಂಡಿತ್ತು. ನಿಫ್ಟಿ ಕೂಡಾ 13,392.95 ಅಂಕಗಳಿಗೆ ಜಿಗಿದಿತ್ತು.
ಇದನ್ನೂ ಓದಿ:ಮಧ್ಯಪ್ರದೇಶ : ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದವರ ಕಾರು ಬಾವಿಗೆ ಬಿದ್ದು 6 ಸಾವು, 3 ಗಂಭೀರ
ಬುಧವಾರವೂ ಷೇರುಪೇಟೆ ಸೂಚ್ಯಂಕ ದಾಖಲೆಯ ಏರಿಕೆ ಕಂಡ ಪರಿಣಾಮ ಐಟಿಸಿ, ಇಂಡಸ್ ಲ್ಯಾಂಡ್ ಬ್ಯಾಂಕ್, ಒಎನ್ ಜಿಸಿ, ಎಚ್ ಡಿಎಫ್ ಸಿ, ಆ್ಯಕ್ಸಿಸ್ ಬ್ಯಾಂಕ್, ಬಜಾಜ್ ಫಿನ್ ಸರ್ವ್, ಏಷ್ಯನ್ ಪೇಯಿಂಟ್, ಐಸಿಐಸಿಐ ಬ್ಯಾಂಕ್, ಆರ್ ಐಎಲ್, ಬಜಾಜ್ ಆಟೋ, ಎನ್ ಟಿಪಿಸಿ ಮತ್ತು ಟಿಸಿಎಸ್ ಷೇರು ಶೇ.1.70ರಷ್ಟು ಏರಿಕೆ ಕಂಡಿವೆ.