Advertisement
ಈ ಎರಡೂ ಕಟ್ಟಡಗಳ ಪೈಕಿ ಒಂದು ಕಟ್ಟಡ ಪಟ್ಟಣ ಪಂಚಾಯತಿಗೆ ಸಂಬಂಧಿಸಿದರೆ ಮತ್ತೂಂದು ಕಟ್ಟಡ ಸರಕಾರಿ ಆಸ್ಪತ್ರೆಗೆ ಸಂಬಂಧಪಡುತ್ತದೆ. ಕಳೆದ ವರ್ಷ ಮಳೆಗೆ ಎರಡೂ ಕಟ್ಟಗಳ ಮೇಲ್ಚಾವಣಿಗಳು ಕುಸಿದು ಬಿದ್ದಿವೆ. ಈಗ ಗೋಡೆಗಳೂ ಸಹ ಬೀಳುವ ಹಂತದಲ್ಲಿವೆ. ಕಲ್ಲಿನ ಗೋಡೆಗಳು ಆಗಿರುವುದರಿಂದ ಮಕ್ಕಳು ಶಾಲೆಯ ಹೊರಭಾಗದಲ್ಲಿ ಆಟವಾಡಲು ಬಿಡಲು ಕಾರ್ಯಕರ್ತೆಯರು ಅಂಜುತ್ತಿದ್ದಾರೆ. ಯಾವ ವೇಳೆಯಲ್ಲಾದರೂ ಈ ಗೋಡೆಗಳು ಕುಸಿದು ಬೀಳುವ ಹಂತದಲ್ಲಿರುವುದರಿಂದ ಪೋಷಕರೂ ತಮ್ಮ ಮಕ್ಕಳ ಬಗ್ಗೆ ಆತಂಕಕ್ಕೊಳಗಾಗಿದ್ದಾರೆ.
Related Articles
Advertisement
ಶೌಚಾಲಯ ಕೊರತೆ: ಅಂಗನವಾಡಿ ಕೇಂದ್ರಕ್ಕೆ ಶೌಚಾಲಯ ನಿರ್ಮಿಸಲಾಗಿತ್ತಾದರೂ ಅದರ ನಿರ್ವಹಣೆ ಮಾಡದೇ ಹಾಳುಬಿದ್ದಿದೆ. ಮಕ್ಕಳು ಅಂಗನವಾಡಿ ಕೇಂದ್ರದ ಆಸುಪಾಸಿನಲ್ಲೆ ಬಹಿರ್ದೆಸೆ ಮಾಡುವುದರಿಂದ, ನೊಣಗಳ ಹಾವಳಿ ಹೆಚ್ಚಾಗಿ ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ ಎಂದು ಕೆಲ ಪೋಷಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ನಿರುಪಯುಕ್ತ ಶುದ್ಧೀಕರಣ ಯಂತ್ರ:ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಮಕ್ಕಳಿಗೆ ಕುಡಿಯಲು ಶುದ್ಧ ನೀರು ಕೊಡುವ ಉದ್ದೇಶದಿಂದ ನೀರು ಶುದ್ಧೀಕರಣದ ಯಂತ್ರಗಳನ್ನು ಅಳವಡಿಸಲಾಗಿತ್ತಾದರೂ ಅವುಗಳ ಬಳಕೆ ಸಮರ್ಪಕವಾಗುತ್ತಿಲ್ಲ. ಪಪಂನವರು ಸಮರ್ಪಕವಾಗಿ ನೀರು ಬಿಡದೇ ಇರುವುದರಿಂದ, ಶುದ್ಧೀಕರಣ ಯಂತ್ರಗಳು ಪದೇ ಪದೇ ರಿಪೇರಿಗೆ ಅವುಗಳು ಹಾಳಾಗಿ ಹೋಗಿವೆ. ಹೀಗಾಗಿ ಮಕ್ಕಳು ತಮ್ಮ ಮನೆಗಳಿಂದ ಬಾಟಲಿಯಲ್ಲಿ ನೀರು ತರುವಂತಹ ಸ್ಥಿತಿ ತಲುಪಿದೆ.