Advertisement

ಉಕ್ರೇನಿಯನ್ ಬಂದರು ನಗರ ಮರಿಯುಪೋಲ್ ನ್ನು ವಶಕ್ಕೆ ಪಡೆದ ರಷ್ಯಾ!

09:07 AM Mar 05, 2022 | Team Udayavani |

ಕೀವ್: ಉಕ್ರೇನಿಯನ್ ಬಂದರು ನಗರವಾದ ಮರಿಯುಪೋಲ್‌ ನ್ನು ರಷ್ಯಾದ ಪಡೆಗಳು ‘ನಿರ್ಬಂಧಿಸಿದೆ’ ಎಂದು ಸ್ಥಳೀಯ ಮೇಯರ್ ಹೇಳಿದ್ದಾರೆ. ಯುದ್ಧವು ಎರಡನೇ ವಾರಕ್ಕೆ ಪ್ರವೇಶಿಸಿದ್ದು, ರಷ್ಯಾದ ಪಡೆದಗಳು ಉಕ್ರೇನ್ ನ ಒಂದೊಂದೇ ನಗರವನ್ನು ಆಕ್ರಮಿಸುತ್ತಿದೆ.

Advertisement

ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶನಿವಾರ ಯುಎಸ್ ಸೆನೆಟರ್‌ಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ಕರೆಯಲ್ಲಿ ಮಾತನಾಡಲಿದ್ದಾರೆ ಎಂದು ಉಕ್ರೇನಿಯನ್ ರಾಯಭಾರ ಕಚೇರಿಯ ಮೂಲಗಳು ಮಾಹಿತಿ ನೀಡಿದೆ.

ಕೈವ್ ಇಂಡಿಪೆಂಡೆಂಟ್‌ನ ವರದಿಯ ಪ್ರಕಾರ, ರಷ್ಯಾದ ಪಡೆಗಳು ಪೊಕ್ರೊವ್ಸ್ಕ್‌ ನಲ್ಲಿ ಕ್ಲಸ್ಟರ್ ಮದ್ದುಗುಂಡುಗಳನ್ನು ಹಾರಿಸಿದವು. ಕ್ಲಸ್ಟರ್ ಬಾಂಬ್‌ಗಳು ಮತ್ತು ವ್ಯಾಕ್ಯೂಮ್ ಬಾಂಬ್‌ ಗಳನ್ನು ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಮತ್ತು ಹ್ಯೂಮನ್ ರೈಟ್ಸ್ ವಾಚ್ ಸೇರಿದಂತೆ ವಿವಿಧ ಅಂತಾರಾಷ್ಟ್ರೀಯ ಸಂಸ್ಥೆಗಳು ಖಂಡಿಸಿವೆ.

ಉದ್ವಿಗ್ನತೆ ಸೃಷ್ಟಿಸಬೇಡಿ: ಪರಮಾಣು ಸ್ಥಾವರದ ಮೇಲೆ ದಾಳಿ ಬಳಿಕ ರಷ್ಯಾಗೆ ಮತ್ತಷ್ಟು ದಿಗ್ಬಂಧನ ಹೇರಬೇಕು ಎಂಬ ಒತ್ತಾಯಗಳು ಕೇಳಿಬಂದ ಬೆನ್ನಲ್ಲೇ ಮಾತನಾಡಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌, “ಉಕ್ರೇನ್‌ ಬಿಕ್ಕಟ್ಟಿಗೆ ಸಂಬಂಧಿಸಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಬೇಡಿ’ ಎಂದು ನೆರೆರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:ಸಿಡಿಯುತ್ತಿದೆ ಕ್ಷಿಪಣಿ; ಪಾರು ಮಾಡಿ ಪ್ಲೀಸ್‌ ಭಾರತೀಯ ವಿದ್ಯಾರ್ಥಿಗಳ ಅಳಲು

Advertisement

ಟಿವಿ ಮೂಲಕ ಮಾತನಾಡಿದ ಅವರು, “ನಮಗೆ ನೆರೆಹೊರೆಯವರೊಂದಿಗೆ ಯಾವುದೇ ದ್ವೇಷ ಇಲ್ಲ. ಇನ್ನಷ್ಟು ನಿರ್ಬಂಧ ಹೇರುವ ಮೂಲಕ ಸುಖಾಸುಮ್ಮನೆ ಪ್ರಚೋದನೆ ಮಾಡಬೇಡಿ. ನಾವು ಕೈಗೊಳ್ಳುತ್ತಿರುವ ಪ್ರತಿಯೊಂದು ಕ್ರಮವೂ ರಷ್ಯಾದ ಒಕ್ಕೂಟದ ವಿರುದ್ಧ ನಡೆದ ಕ್ರಿಯೆಗಳಿಗೆ ಪ್ರತಿಕ್ರಿಯೆಯಾಗಿದೆಯೇ ಹೊರತು ಅಪ್ರಚೋದಿತ ಕ್ರಮವಲ್ಲ’ ಎಂದೂ ಸ್ಪಷ್ಟಪಡಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next