Advertisement

ಜನ್ಮ ಕುಂಡಲಿಯಲ್ಲಿ ವೈವಾಹಿಕ ವೈಫ‌ಲ್ಯ ಏಕೆ ಗೊತ್ತಾ?

11:56 AM Apr 29, 2017 | |

ಶ್ರೀ ಭಗವದ್ಗೀತೆಯ ಜ್ಞಾನಯೋಗ ಅಧ್ಯಾಯನದಲ್ಲಿ 39 ನೇ ಶ್ಲೋಕ ಬಹು ಮುಖ್ಯವಾದ ವಿಚಾರವೊಂದನ್ನು ಪರಮಶಾಂತಿಯನ್ನು ಪಡೆಯುವ ನಿಟ್ಟಿನಲ್ಲಿ ಬೆಳಕು ಚೆಲ್ಲುತ್ತದೆ. 

Advertisement

 ಶ್ರದ್ಧಾವಲಂಬತೇ ನಂ ತತ್ಪರಃ ಸಂಯತೇಂದ್ರಿಯ  ಜ್ಞಾನಂ ಲಬ್ಧಾಪರಾಂ ಶಾಂತಿಚಿರೇಣಾನಿಗಚ್ಛತಿ    ಇದರ ಅರ್ಥ ಸರಳವಾಗಿದೆ. ಶ್ರದ್ಧೆ ಎಂಬುದು ಯಾರಿಗಿದೆಯೋ ಶ್ರದ್ಧೆಯಲ್ಲಿ ನಿರತನೂ, ತತ್ಪರನೂ ಆಗುತ್ತಾನೋ, ಅವನು ಜಿತೇಂದ್ರಿಯನಾಗಿ ಜ್ಞಾನವನ್ನು ಸಂಪಾದಿಸುತ್ತಾನೆ. ಜ್ಞಾನವನ್ನು ಪಡೆದಾಗ ಪರಮ ಅನುಭೂತಿಯನ್ನು ಹೊಂದುವ ದಿವ್ಯಶಾಂತಿಯನ್ನು ಅವನು ಪಡೆಯುತ್ತಾನೆ. 

 ಗೀತೆಯನ್ನು ಓದಿಯೇ ಈ ಮೇಲಿನ ವಿಚಾರವನ್ನು ತಿಳಿಯಬೇಕಾಗಿಲ್ಲ. ನಮ್ಮ ನಮ್ಮ ಅನುಭವಗಳ ನೆಲೆಯಲ್ಲಿ ಯಾವಾಗಲೂ ನಮ್ಮ ಕ್ರಿಯಾಶೀಲತೆಗಳ ಸೋಲಿಂದ ನಾವು ನಾವೇ ಪಾರ್ಥರಾದಾಗ, ಅರ್ಜುನರಾದಾಗ ವಿವೇಕ ಎಂಬ ನಮ್ಮೊಳಗಿನ ದ್ರವ್ಯ ಶ್ರೀಕೃಷ್ಣನಾಗಿ ಗೀತೆಯನ್ನು ನಿರಂತರವಾಗಿ ನಮ್ಮ ಜೀವನ ಸಂಗ್ರಾಮದ ಸಂದರ್ಭದಲ್ಲಿ ಬೋಧಿಸುತ್ತಲೇ ಇರುತ್ತದೆ.

 ಒಂದು ಕಾಲವಿತ್ತು ಹೆಣ್ಣುಗಂಡು ಒಂದಾಗಿ ಬಾಳದಾರಿಯಲ್ಲಿ ಸಪ್ತಪದಿ ತುಳಿದು ಅಗ್ನಿಸಾಕ್ಷಿಯಾಗಿ  ಸತಿಪತಿಗಳಾದ ಮೇಲೆ ಈ ಬಂಧನವನ್ನು ಪರಮ ಪಾವಿತ್ರ್ಯದಿಂದ ಕಾಣುವ ವಿಚಾರ. ನಮ್ಮಗಳ ಮೇಲೆ ನಾವೇ ಹೇರಿಕೊಂಡ ಒಂದು ಸೂಕ್ಷ್ಮ ಹಾಗೂ ಜವಾಬ್ದಾರಿಯುತ ಕರ್ತವ್ಯವಾಗಿತ್ತು. ಈ ನಿಟ್ಟಿನಲ್ಲಿ ಹೆಣ್ಣು ಹಾಗೂ ಗಂಡಿನ ನಕ್ಷತ್ರಗಳ ವಿಶ್ಲೇಷಣೆಯಲ್ಲಿ ರಚಿತವಾದ ಕೋಷ್ಟಕದ ಪ್ರಕಾರ ಅಂಕಗಳ ಮೇಲಿಂದ ಈ ಮದುವೆಯನ್ನು ನಡೆಸಬಹುದು. ಈ ವಿಚಾರವನ್ನು ಮನೆಯ ಹಿರಿಯರು ಜೋತಿಷಿ ಹಾಗೂ ಪುರೋಹಿತರ ಸನ್ನಿಧಿಯಲ್ಲಿ ನಡೆಸುತ್ತಿದ್ದರು. 

 ಆದರೆ ಇಂದು ಈ ವಿಧಾನ ಸರಿಯೇ?
 ಇಂದು ಇಂಥದೊಂದು ಕೋಷ್ಟಕದ ಪರಿಣಾಮವಾಗಿ ದೊರೆತ ಅಂಕಗಳು ಒಂದು ವಿವಾಹದ ಗಟ್ಟಿತನವನ್ನು, ತನ್ನ ಅರಿಕೆಗೆ ಒಳಪಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಹು ಪುರಾತನವಾದ ವೈವಾಹಿಕ ಪಾವಿತ್ರ್ಯ ಬಸವಳಿದಿದೆ. ಅಂದರೆ ಈ ಕೋಷ್ಟಕ ತಪ್ಪಿದೆ. ಒಂದು ನಮ್ಮದಾದ ಸಂಸ್ಕೃತಿಯ ಬೇರುಗಳಿಗೆ ಬಂಧಕ್ಕೆ ಇನ್ನೊಂದು ಹೆಣ್ಣು ಹಾಗೂ ಗಂಡು ಸಮಾನ ಎಂಬ ಧೋರಣೆ. ನಾವು ಬಹುವಾಗಿ ನಂಬಿಕೆ ಇಟ್ಟ ಋತುಮಾನಗಳಲ್ಲೇ ಏರುಪೇರುಗಳು ಸಂಭವಿಸುತ್ತಿರುವಾಗ, ಸರಿಯಾದ ಕಾಲದಲ್ಲಿ, ಸರಿಯಾದ ಮಳೆಗಾಳಿ ಚಳಿ ಹಾಗೂ ಬೇಸಿಗೆಯ ಕಾಲ ಧರ್ಮ ದಾರಿ ತಪ್ಪಿರುವಾಗ ವೈವಾಹಿಕ ಜೀವನದ ಪಾವಿತ್ರ್ಯ ಹಾಗೂ ಸಂಯಮ ದಾರಿ ತಪ್ಪಬಾರದು ಎಂದರೆ ಹೇಗೆ? ಹೀಗಾಗಿ ನಕ್ಷತ್ರಗಳ ವಿಶ್ಲೇಷಣೆಯೊಂದಿಗೆ ಬಳಸಿಕೊಂಡ ಕೋಷ್ಟಕದ ಮೂಲಕವಾದ ಅಂಕಗಳನ್ನು ಪಡೆದು ಹಾಂ, ಇದು ಸರಿಹೊಂದಿತು ಎಂಬ ವಿಚಾರವನ್ನು ಮೀರಿ ಇನ್ನೂ ಇತರ ಅಂಶಗಳನ್ನು ಸೂಕ್ಷ್ಮವಾಗಿ ಹೆಣ್ಣುಗಂಡುಗಳ ಜಾತಕದ ಹೊಂದಾಣಿಕೆಗಾಗಿ ಅನುಸರಿಸುವುದು ಈಗ ಈ ಬದಲಾದ ಕಾಲಕ್ಕೆ ಅನಿವಾರ್ಯವಾಗಿದೆ. 

Advertisement

 ಹಾಗಾದರೆ ಮಿಕ್ಕಿದ್ದು ಯಾವ ದಾರಿ, ಯಾವ ವಿಧಾನ?
 ಹೆಣ್ಣು ಗಂಡು ಸಮಾನರು ಎಂಬುದು ಈಗಿನ ವರ್ತಮಾನದಲ್ಲಿ ಹೌದು. ಇದು ಸತ್ಯ ಎಂಬಠಸ್ಸೆ
 ಒತ್ತಿಬಿಟ್ಟಿದೆ. ಈ ವಿಚಾರದಲ್ಲೀಗ ಚರ್ಚೆ, ಅಸಹನೆ, ವಿರೋಧ, ಗೊಣಗುವಿಕೆಗಳಿಗೆ ಅರ್ಥವಿಲ್ಲ. ಕೆಲವು ಬಾರಿ ಆಖೈರಾದ ಸತ್ಯವನ್ನು ಹೇಳಲಿಕ್ಕೆ ಆಗುವುದಿಲ್ಲ. ಈ ಹಿಂಜರಿಕೆಯಿಂದ ನಮ್ಮ ವೇದ ಹಾಗೂ ಸುಭಾಷಿತಗಳು ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾ ಎಂಬ ಮಾತನ್ನು ಉದ್ಘೋಷಿಸಿದೆ. ಅಂತೆಯೇ ನಸ್ತ್ರೀ ಸ್ವಾತಂತ್ರ್ಯ ಮರ್ಹತಿ ಎಂಬ ಮಾತೂ ಇದೆ. ಈ ವಿಭಿನ್ನ ಮಾತುಗಳು ಕೇವಲ ಸ್ತ್ರೀಯರನ್ನು ದೇವರೆಂದು ಉಬ್ಬಿಸಿ, ಅವರಿಂದ ಕೆಲಸ ಮಾಡಿಸಿಕೊಳ್ಳಲಾಗಲೀ, ಮಹಿಳೆಯರನ್ನು ಗೌಣವಾಗಿ ಕಾಣುವುದಕ್ಕಾಗಲೀ ಬಂದ ಮಾತುಗಳಲ್ಲ. ನಿಜಕ್ಕೂ ಈ ಮಾತುಗಳು ಬೇರೆ ಬೇರೆ ನೆಲೆಯಲ್ಲಿ ಬಂದ ಮಾತುಗಳು. ಒಂದರ್ಥದಲ್ಲಿ ನಮ್ಮ ಸಂಸ್ಕೃತಿಯಲ್ಲಿ ಪುರುಷರು ಸ್ವಲ್ಪ ಶ್ರೇಷ್ಠ. ಮಹಿಳೆಯರು ತಗ್ಗಿ ನಡೆಯುವ ಸೂಕ್ಷ್ಮ ಅರಿಯಬೇಕು ಎಂಬುದನ್ನು ಶಾಸನ ಎಂದಲ್ಲದಿದ್ದರೂ ಒಳನಿಯಮವನ್ನಾಗಿ ಸ್ವೀಕರಿಸಿಬಿಟ್ಟಿತ್ತು. ಅದೇ ಈಗ ಕಾಲ ಬದಲಾಗಿದೆ. ಸಂವಿಧಾನದ ಚೌಕಟ್ಟುಗಳು ಬೇರೆಯಾಗಿವೆ. ಆಧುನಿಕತೆ ಜಗತ್ತಿನ ವ್ಯಾಖ್ಯೆಯನ್ನು ಬದಲಾಯಿಸಿದೆ. 

 ಜಾತಕದ ಮೊದಲ ಹಾಗೂ ಎರಡನೇ ಮನೆ ಪರಿಶೀಲನೆ ಮುಖ್ಯ
 ಜಾತಕ ಕುಂಡಲಿಯಲ್ಲಿ ಮೊದಲ ಮನೆ ಒಬ್ಬರ ಮನೋಭಾವಗಳನ್ನು, ಎರಡನೇ ಮನೆ ತಾಳ್ಮೆ ಹಾಗೂ ಸೂಕ್ಷ್ಮತೆಗಳೊಂದಿಗೆ ಮಾತನಾಡುವ ವಿಧಾನಗಳನ್ನು ಸೂಚಿಸುತ್ತದೆ.  ಮನೋಭಾವದಲ್ಲಿ, ಮಾತಿನ ಮೃದುತ್ವ ಹಾಗೂ ಕಟುತನಗಳಲ್ಲಿ ಚಂದ್ರನ ಅಪಾರವಾದ ಪ್ರಭಾವವೂ ಸೇರ್ಪಡೆಗೊಳ್ಳುತ್ತದೆ. ಹೀಗಾಗಿ ಚಂದ್ರನ ಕಾರಣಕ್ಕಾಗಿ ಹೆಣ್ಣೂ ಗಂಡುಗಳ ನಕ್ಷತ್ರ ಜೋಡಣೆಗೆ ನಮ್ಮ ಹಿಂದಿನ ಕ್ರಮ ಯುಕ್ತವಾಗಿದೆಯಾದರೂ, ಈಗಿನ ಹೊಸ ಸಂವಿಧಾನಕ್ಕೂ ಗಮನ ನೀಡಬೇಕಾಗಿದೆ. ಹೊಸ ಸಂವಿಧಾನದಲ್ಲಿ ಹೆಣ್ಣು ಹಾಗೂ ಗಂಡು ಸಮಾನರು ಎಂಬ ನಿಯಮ ಪ್ರಧಾನವಾದುದರಿಂದ ಹೆಣ್ಣು ಹಾಗೂ ಗಂಡಿನ ಜಾತಕ ಜೋಡಣೆಯ ಸಂದಭದಲ್ಲಿ ಜೋತಿಷಿಯ ಜವಾಬ್ದಾರಿ ಹೆಚ್ಚಾಗಿದೆ. ಬರೇ ನಕ್ಷತ್ರ ಜೋಡಣೆಯೊಂದೇ ಅಲ್ಲದೆ ಒಬ್ಬರ ಮನೋವೇದಿಕೆಯ ಶಕ್ತಿ ಹಾಗೂ ಮಿತಿ ಅಂತೆಯೇ ಅಭಿವ್ಯಕ್ತಿಗೆ ಬೇಕಾದ ಮಾತಿನ ಶಕ್ತಿ, ಅದರ ಮಿತಿಗಳನ್ನು ವಿಶ್ಲೇಷಿಸಲೇ ಬೇಕಾಗುತ್ತದೆ. ಮನೋವೈಜಾnನಿಕ ವಿಚಾರಗಳ ಕುರಿತಂತೆ ಜೋತಿಷಿ ಜಾತಕದಲ್ಲಿರುವ ಹೆಣ್ಣು ಹಾಗೂ ಗಂಡಿನ ಸೂಕ್ಷ್ಮಗಳನ್ನು ವಿಶ್ಲೇಷಿಸಿಯೇ ಜಾತಕಗಳನ್ನು ಹೊಂದಿಸಬೇಕಾಗುತ್ತದೆ. ಮನುಷ್ಯ ಧರ್ಮ, ಮಾನವೀಯತೆಗಳ ನಿಕ್ಷೇಪಕ್ಕೆ ಹೆಣ್ಣು ಗಂಡುಗಳಲ್ಲಿ ಒಂದು ಜೀವಂತಿಕೆ ದೊರೆತಾಗ ಅಹಂ ಕೆಲಸ ಮಾಡುವುದಿಲ್ಲ. ಅಹಂ ಎಂಬ ಘಟಕದ ಹೆಡೆ ನಾಗರ ವಿಷವನ್ನು ಕಕ್ಕಲು ಮುಂದಾಗದಿದ್ದರೆ ದಾಂಪತ್ಯ ಉಳಿಯುತ್ತದೆ.

 ಸಂಸ್ಕೃತಿ ಅವಶ್ಯ ಎಂದಾದರೆ ಸ್ವಂತಿಕೆ ಬೇಕು
 ಭಾರತೀಯ ಸಂಸ್ಕೃತಿಯ ಅಳಿವು ಉಳಿವಿನ ಪ್ರಶ್ನೆಗೆ ದಾಂಪತ್ಯದಲ್ಲಿನ ಸಂಪನ್ನತೆಗೆ ಶಕ್ತಿ ಬೇಕು. ಭಾರತದ ಮೇಲೆ ಅನ್ಯರ ದಾಳಿ, ಬ್ರಿಟೀಷರು ಹೇರಿದ ದಾಸ್ಯ ಎಲ್ಲಾ ಇತರ ಸಂಕಟಗಳು ಕಾಲಕಾಲಕ್ಕೆ ಎರಗಿ ನಮ್ಮನ್ನು ಘಾಸಿ ಗೊಳಿಸಿದ್ದರೂ, ಭಾರತೀಯ ಸಂಸ್ಕೃತಿಯ ಬೇರುಗಳು ಅದುರಿರಲಿಲ್ಲ. ಆದರೆ ಇಂದಿನ ಜಾಗತೀಕರಣದ ಕ್ರಿಯೆಯಲ್ಲಿ ಜಗತ್ತೆಲ್ಲಾ ಅಮೆರಿಕಾ ಆಗುತ್ತಿದೆ. ಕೇವಲ ಹಣ ಮಾತ್ರ ಮುಖ್ಯವಾಗಿದೆ. ಹಣಕ್ಕಾಗಿ ಪ್ರತಿಯೊಂದು ವಿದ್ಯೆಯನ್ನು, ಸಂಸ್ಕಾರವನ್ನು, ಭಾಷಾಶಕ್ತಿಯನ್ನು ಕೊಂಡುಕೊಳ್ಳುತ್ತಿದ್ದೇವೆ. ಹಿಂದೆ ವಿದ್ಯೆಎಂಬುದು ಭಾರತದಲ್ಲಿ ಮಾರಾಟದ ಸರಕಾಗಿರಲಿಲ್ಲ. ಆದರೆ ತಂದೆತಾಯಿಗಳು ವಿದ್ಯೆಯನ್ನು ಖರೀದಿಸುತ್ತಿದ್ದಾರೆ. ಟಿವಿ, ಮೋಬೈಲ್‌, ಕಂಪ್ಯೂಟರ್‌ಗಳು ಅನ್ಯವಾದ ಒಂದು ಮಾಯಾಜಾಲ ಬೀಸಿದೆ. ಮಾಯೆಯ ವಿನಾ ಜಗತ್ತಿಲ್ಲ. ಆದರೆ ಜಾnನಕ್ಕೆ ಸಮಾನವಾದುದು ಯಾವುದಿದೂ ಇಲ್ಲ ಹೀಗಾಗಿ ಮಾಯೆಯನ್ನೂ ಜಾnನವನ್ನೂ ಯುಕ್ತವಾಗಿ ಸಂಭಾಳಿಸಬೇಕಾಗಿದೆ. ಹೆಣ್ಣಿಗೆ ಗಂಡು ಗಂಡಿಗೆ ಹೆಣ್ಣು ಮಾಯೆಯಾಗಿರುವುದರಿಂದಲೇ ಜಾnನದ ಅಂಕುಶ ದಾಂಪತ್ಯಕ್ಕೆ ಬೇಕು.

ಅನಂತ ಶಾಸ್ತ್ರಿ 

Advertisement

Udayavani is now on Telegram. Click here to join our channel and stay updated with the latest news.

Next