Advertisement
ಕಾಪು ಶ್ರೀ ಹಳೇ ಮಾರಿಗುಡಿ ದೇವಸ್ಥಾನ, ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಮತ್ತು ಶ್ರೀ ಮೂರನೇ ಮಾರಿಗುಡಿ (ಕಲ್ಯ) ದೇವಸ್ಥಾನದಲ್ಲಿ ಮಂಗಳವಾರ ಸಂಜೆಯಿಂದ ಬುಧವಾರ ಸಂಜೆಯವರೆಗೆ ನಡೆಯುವ ಸುಗ್ಗಿ ಮಾರಿಪೂಜೆಗಾಗಿ ವಿವಿಧೆಡೆಗಳಿಂದ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಬಿಗು ಪೊಲೀಸ್ ಬಂದೋಬಸ್ತ್ ಸಹಿತವಾಗಿ ವಿಶೇಷ ವ್ಯವಸ್ಥೆಗಳು ಜೋಡಣೆಯಾಗಿವೆ. ಸುಗ್ಗಿ ಮಾರಿಪೂಜೆಯ ಪ್ರಯುಕ್ತ ಗುಡಿಗಳು ವಿದ್ಯುತ್ ದೀಪಾಲಂಕಾರ ಮತ್ತು ಪುಷ್ಪಾಲಂಕಾರದೊಂದಿಗೆ ಎಲ್ಲರ ಕಣ್ಮನ ಸೆಳೆಯುತ್ತಿವೆ.
ಮೂರು ಮಾರಿಗುಡಿಗಳ ಪರಿಸರದಲ್ಲಿ ವಿವಿಧ ರೀತಿಯ ಮಾರಾಟ ಮಳಿಗೆಗಳು, ಅಂಗಡಿ – ಸ್ಟಾಲ್‌ಗಳು ತೆರೆದುಕೊಂಡಿವೆ. ದೇವಿಗೆ ಅತ್ಯಂತ ಪ್ರಿಯವಾಗಿರುವ ಮಲ್ಲಿಗೆ, ಹಿಂಗಾರ, ಹಣ್ಣು ಕಾಯಿ ಸಮರ್ಪಣೆಗೆ ಸಹಿತ ವಿವಿಧ ಅಂಗಡಿಗಳು ಮಂಗಳವಾರ ಬೆಳಗ್ಗಿನಿಂದಲೇ ವ್ಯಾಪಾರ ಪ್ರಾರಂಭಿಸಿವೆ. ಕಾಪು ಸಂತೆ ಮಾರ್ಕೆಟ್‌ನ ಒಳಗೆ ಸೀಮಿತ ಸಂಖ್ಯೆಯ ಕೋಳಿ ಅಂಗಡಿಗಳಿಗೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
Related Articles
ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪುರಸಭೆ ಯು ಇಬ್ಬರು ಉಸ್ತುವಾರಿಗಳ ಸಹಿತವಾಗಿ 15 ಮಂದಿ ಪೌರ ಕಾರ್ಮಿರನ್ನೊಳಗೊಂಡ ತಂಡವನ್ನು ರಚಿಸಲಾಗಿದ್ದು ಅವರು 24ಗಿ7 ಮಾದರಿಯಲ್ಲಿ ಕಾರ್ಯ ನಿರ್ವ ಹಿಸಲಿದ್ದಾರೆ. ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜಾಗೃತಿಯೂ ನಡೆಯುತ್ತಿದೆ.
Advertisement
ಭದ್ರತೆಗೆ 200 ಪೊಲೀಸರುಭದ್ರತೆಗೆ 200ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದು, ಚೆಕ್‌ಪೋಸ್ಟ್ ಅಳವಡಿಸಲಾಗಿದೆ. ನೂಕು ನುಗ್ಗಲು ನಿಯಂತ್ರಣಕ್ಕೆ ಕ್ರಮವಹಿಸಲಾಗಿದೆ.
ಕೊರೊನಾ ಮುನ್ನೆಚ್ಚರಿಕಾ ಕ್ರಮಗಳ ಪಾಲನೆಯ ಪರಿಶೀಲನೆಗಾಗಿ ಕಾಪು ತಹಶೀಲ್ದಾರ್ ಪ್ರತಿಭಾ ಆರ್. ಮತ್ತು ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವು ಅವರು ಸ್ವತಃ ಫೀಲ್ಡಿಗಿಳಿದಿದ್ದು, ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಕಾಯಕದಲ್ಲಿ ತೊಡಗಿದ್ದಾರೆ. ಪುರಸಭಾ ವ್ಯಾಪ್ತಿಯಲ್ಲಿ ಆರೋಗ್ಯ ನಿರೀಕ್ಷಕರ ನೇತೃತ್ವದಲ್ಲಿ ಪ್ರತ್ಯೇಕ ತಂಡವನ್ನು ರಚಿಸಲಾಗಿದ್ದು ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವುದರ ಸಹಿತವಾಗಿ ಜನರಲ್ಲಿ ಸಾಮಾಜಿಕ ಅಂತರ ಪಾಲನೆಯ ಕುರಿತಾಗಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ.