Advertisement

ಮಾರಿಯೊ

01:07 AM Mar 15, 2020 | mahesh |

ಇಂದು ಸ್ಮಾರ್ಟ್‌ಫೋನಿನಲ್ಲಿ ಆಂಡ್ರಾಯ್ಡ ಗೇಮ್‌ಗಳು ಬಹಳಷ್ಟಿವೆ. ಅಲ್ಲದೆ ದೊಡ್ಡ ಪ್ರಮಾಣದಲ್ಲಿ ಗೇಮಿಂಗ್‌ ಗೀಳು ಇರುವವರಿಗಾಗಿ ಪ್ಲೇಸ್ಟೇಷನ್ನುಗಳು, ಕಂಪ್ಯೂಟರ್‌ ಗೇಮ್‌ಗಳು ಇವೆ. ಪಬ್‌ಜಿ ನಮ್ಮನ್ನು ಆವರಿಸಿಕೊಂಡಿರುವ ಕಾಲವಿದು. ಒಂದೇ ಗೇಮನ್ನು ಜಗತ್ತಿನ ಆವುದೋ ಮೂಲೆಯಲ್ಲಿ ಕುಳಿತವರು ಒಟ್ಟಿಗೆ ಆಡುವ ಕಾಲವಿದು. ಈ ಸಮಯದಲ್ಲಿ ಪಿ.ಸಿ(ಪರ್ಸನಲ್‌ ಕಂಪ್ಯೂಟರ್‌) ಜಮಾನಾ ಶುರುವಾಗುತ್ತಿದ್ದ ಕಾಲಘಟ್ಟದಲ್ಲಿ ಚಾಲ್ತಿಯಲ್ಲಿದ್ದ ಗೇಮುಗಳಲ್ಲಿ ಇಂದಿಗೂ ಜನಪ್ರಿಯತೆಯನ್ನು ಉಳಿಸಿಕೊಂಡಿರುವುದು ಮಾರಿಯೊ ಗೇಮ್‌ನ ಹೆಗ್ಗಳಿಕೆ. ತುಂಬಾ ಸರಳವಾದ ಆಟವಾಗಿತ್ತು ಅದು. ಮಾರಿಯೊ ಎನ್ನುವುದು ಆ ಗೇಮಿನಲ್ಲಿ ಬರುವ ಪ್ರಮುಖ ಪಾತ್ರದ ಹೆಸರು. ಕೀಬೋರ್ಡಿನ ಸಹಾಯದಿಂದ ನಿಯಂತ್ರಿಸಬಹುದು. ಆತನ ಹಾದಿಯಲ್ಲಿ ಎದುರಾಗುವ ಚಿತ್ರವಿಚಿತ್ರ ಜೀವಿಗಳಿಂದ ಆತನನ್ನು ಕಾಪಾಡಿಕೊಳ್ಳುವುದು ಆಟಗಾರನ ಎದುರಿದ್ದ ಸವಾಲು. ಅಪಾಯ ಎದುರಾದಾಗ ಆತನನ್ನ ಮೇಲಕ್ಕೆ ನೆಗೆಸಬೇಕಾಗಿತ್ತು. ತುಂಬಾ ಸರಳವಾದ ಆ ಗೇಮ್‌ನ ಖ್ಯಾತಿ ಎಷ್ಟಿತ್ತೆಂದರೆ ಹಾಲಿವುಡ್‌ನ‌ಲ್ಲಿ ಅದರದ್ದೇ ಅನಿಮೇಷನ್‌ ಸಿನಿಮಾ ಕೂಡಾ ತಯಾರಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next