Advertisement

ಕಡಲ ವಿಜ್ಞಾನ ಸಂಶೋಧನಾ ಹಡಗು

12:48 PM Sep 29, 2019 | Suhan S |

ಕಾರವಾರ: ನಗರದ ಬಂದರಿಗೆ ಶನಿವಾರ ಬಂದ ಮೀನುಗಾರಿಕೆ ಕಡಲವಿಜ್ಞಾನ ಸಂಶೋಧನಾ ಹಡಗು (ಎಫ್‌ಒಆರ್‌ವಿ) ಸಾಗರ ಸಂಪದವನ್ನು ವಿವಿಧ ಕಾಲೇಜಿನ ವಿದ್ಯಾರ್ಥಿಗಳು ವೀಕ್ಷಣೆ ಮಾಡಿದರು. ಸ್ವಚ್ಛತೆಯೇ ಸೇವೆ ಅಭಿಯಾನದ ಅಂಗವಾಗಿ ಕೊಚ್ಚಿಯ ಭೂ ವಿಜ್ಞಾನ ಸಚಿವಾಲಯದ ಕಡಲಜೀವ ಸಂಪನ್ಮೂಲ ಮತ್ತು ಪರಿಸರ ವಿಜ್ಞಾನ ಕೇಂದ್ರ (ಸಿಎಂಎಲ್‌ಆರ್‌ಇ) ವಿವಿಧ ಬಂದರಿನಲ್ಲಿ ಕಾರ್ಯಕ್ರಮ ಆಯೋಜಿಸುತ್ತಿದೆ.

Advertisement

ಅದರಂತೆಯೇ, ನಗರದ ಬಂದರಿಗೆ ಬಂದ ಹಡಗು, ಭಾನುವಾರ ಮಧ್ಯಾಹ್ನದವರೆಗೆ ಇಲ್ಲಿಯೇ ಇರಲಿದೆ. ಅರಗಾದ ಕೇಂದ್ರೀಯ ವಿದ್ಯಾಲಯ ಹಾಗೂ ಕೋಡಿಬಾಗದ ಕಡಲ ಜೀವವಿಜ್ಞಾನ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಮಧ್ಯಾಹ್ನ ಭೇಟಿ ನೀಡಿ, ಹಡಗಿನ ವಿಶೇಷತೆ ಬಗ್ಗೆ ಮಾಹಿತಿ ಪಡೆದರು. ಸಮುದ್ರ ಹಾಗೂ ಕಡಲ ಜೀವರಾಶಿಗಳ ಮೇಲೆ ಪ್ಲಾಸ್ಟಿಕ್‌ನಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಸ್ವಚ್ಛತೆಯೇ ಸೇವೆ ಅಭಿಯಾನದ ಅಡಿ ಹಮ್ಮಿಕೊಳ್ಳುತ್ತಿದ್ದೇವೆ. ಗುಜರಾತ್‌ನ ಓಖಾದಿಂದ ಪ್ರಾರಂಭಿಸಿ, ಪೋರ್‌ಬಂದರಿನಲ್ಲಿ ಕಾರ್ಯಕ್ರಮ ನಡೆಸಿ ಇಲ್ಲಿಗೆ ಬಂದಿದ್ದೇವೆ.

ಅ.2ಕ್ಕೆ ಈ ಅಭಿಯಾನವನ್ನು ಕೊಚ್ಚಿಯಲ್ಲಿ ಸಮಾಪ್ತಿಗೊಳಿಸುತ್ತೇವೆ ಎಂದು ಸಿಎಂಎಲ್‌ಆರ್‌ಇನ ಭೌತಿಕ ಕಡಲವಿಜ್ಞಾನಿ (ಫಿಸಿಕಲ್‌ ಓಶಿಯನೋಗ್ರಾಫರ್‌) ಡಾ| ಸ್ಮಿತಾ ಹೇಳಿದರು. ರಸಾಯನ ವಿಜ್ಞಾನಿ ಡಾ| ಎಂ.ಸುಬ್ರಮಣಿಯನ್‌, ಮೀನುಗಾರಿಕಾ ವಿಜ್ಞಾನಿ ಡಾ| ಹಾಶಿಂ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next