Advertisement

ಸಂಜೀವ ಶೆಟ್ಟಿ ಅಸಾಧಾರಣ ಸಾಮಾಜಿಕ ಶಕ್ತಿ: ಡಿ.ವಿ

03:44 PM Nov 12, 2018 | |

ನಗರ: ಜವುಳಿ ಉದ್ಯಮಿಯಾಗಿ ಮಾತ್ರ ಉಳಿಯದೆ ಸಮಾಜ ಸೇವಕರಾಗಿ, ಕೊಡಗೈ ದಾನಿಯಾಗಿ ಸಮಾಜದಲ್ಲಿ ತನ್ನನ್ನು ತೊಡಗಿಸಿಕೊಂಡ ಅಸಾಧಾರಣ ವ್ಯಕ್ತಿ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು. ನೆಹರೂ ನಗರದ ಸುದಾನ ವಸತಿಯುತ ಶಾಲಾ ಆವರಣದಲ್ಲಿ ರವಿವಾರ ನಡೆದ ಜವುಳಿ ಉದ್ಯಮಿ ಎಂ. ಸಂಜೀವ ಶೆಟ್ಟಿ ಅವರ ಶ್ರದ್ದಾಂಜಲಿ ಸಭೆಯಲ್ಲಿ ಅವರು ನುಡಿನಮನ ಸಲ್ಲಿಸಿದರು.

Advertisement

ರಾಜಕೀಯ ಜೀವನದ ಪ್ರಾರಂಭದಲ್ಲಿ ನಾನು ಪ್ರಥಮ ಭೇಟಿ ನೀಡಿದ್ದು ಸಂಜೀವ ಶೆಟ್ಟಿ ಅವರ ಮನೆಗೆ. ಅವರು ಆಶೀರ್ವಾದ ಪಡೆದು ನಾನು ರಾಜಕೀಯ ಜೀವನ ಪ್ರಾರಂಭಿಸಿದ್ದೇನೆ. ಅವರ ಆಶೀರ್ವಾದದಿಂದ ಶಾಸಕ, ಸಂಸದ, ರಾಜ್ಯಾಧ್ಯಕ್ಷ, ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವನಾಗುವ ಅವಕಾಶ ದೊರೆತಿದೆ. ನನ್ನ ರಾಜಕೀಯ ಜೀವನದ ಬೆಳವಣಿಗೆಯ ಪ್ರತಿ ಹಂತದಲ್ಲೂ ಸಂಜೀವ ಶೆಟ್ಟಿಯವರ ಆಶೀರ್ವಾದವಿದೆ. ರಾಜಕೀಯ ಜೀವನದ ಆರಂಭದಲ್ಲಿ ಸಂಜೀವ ಶೆಟ್ಟಿ ಅವರ ಆಶೀರ್ವಾದ ಪಡೆದುಕೊಂಡೇ ತೆರಳುತ್ತಿದ್ದೆ ಎಂದು ನೆನಪಿಸಿಕೊಂಡರು. ಆದರ್ಶ ಜೀವನದ ಮೂಲಕ ಪ್ರೇರಣೆಯಾಗಿರುವ ಸಂಜೀವ ಶೆಟ್ಟಿ ಅವರ ಆತ್ಮಕ್ಕೆ ಚಿರಶಾಂತಿಗಾಗಿ ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.

ಶಾಸಕ ಸಂಜೀವ ಮಠಂದೂರು ಮಾತನಾಡಿ, ಅಪಾರ ದೇಶಭಕ್ತಿ, ಸಾಮಾಜಿಕ ಕಳಕಲಿ, ಉದಾತ್ತ ಮನೋಭಾವ, ಕೊಡುಗೈ ದಾನಿಯಾಗಿದ್ದ ಸಂಜೀವ ಶೆಟ್ಟಿಯ ವರಂತಹ ವ್ಯಕ್ತಿತ್ವವನ್ನು ಇನ್ನೊಬ್ಬರಲ್ಲಿ ಕಾಣುವುದು ಸಾಧ್ಯ ವಿಲ್ಲ. ಅವರ ಜೀವನ ವಿಧಾನಕ್ಕೆ ಅವರೇ ಉದಾಹರಣೆ ಎಂದರು.

ಜವುಳಿ ಉದ್ಯಮಿ ಯೋಗೀಶ್‌ ಭಟ್‌ ಹೆಬ್ರಿ, ಸುಳ್ಯದ ಜವುಳಿ ಉದ್ಯಮಿ, ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಎಂ.ಬಿ. ಸದಾಶಿವ ನುಡಿನಮನ ಸಲ್ಲಿಸಿದರು. ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯ ಎನ್‌.ಕೆ. ಜಗನ್ನಿವಾಸ ರಾವ್‌, ಸ್ವರ್ಣೋದ್ಯಮಿ ಬಲರಾಮ ಆಚಾರ್ಯ, ಆನಂದಾಶ್ರಮ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ಡಾ| ಗೌರಿ ಪೈ, ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ, ತಾ.ಪಂ. ಸದಸ್ಯ ಸಾಜ ರಾಧಾಕೃಷ್ಣ ಆಳ್ವ, ನಗರ ಸಭಾ ಸದಸ್ಯರಾದ ಗೌರಿ ಬನ್ನೂರು, ವಿದ್ಯಾ ಗೌರಿ, ಪ್ರೇಮಲತಾ, ಯಶೋಧ ಹರೀಶ್‌, ಮಾಜಿ ಸದಸ್ಯ ರಾಜೇಶ್‌ ಬನ್ನೂರು ಸಹಿತ ಸಾವಿರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next