Advertisement
ಎರಡೂ ಸಾರ್ವಜನಿಕ ಸಂಸ್ಥೆಗಳು ಪ್ರಕರಣ ಬಗೆಹರಿಸಿಕೊಂಡಿವೆ. ಈ ಕುರಿತು ಬುಧವಾರ ಜಂಟಿ ಸುದ್ದಿಗೋಷ್ಠಿ ನಡೆಸಿದ ಮಾರಿಗುಡಿ ಅಧ್ಯಕ್ಷ ವೆಂಕಟೇಶ ನಾಯ್ಕ, ಪ್ರೋಗ್ರೆಸ್ಸೀವ್ ಅಧ್ಯಕ್ಷ, ಮಾಜಿ ಸಚಿವ ಪಿ.ಎಸ್. ಜಯವಂತ, ಮಾರಿಕಾಂಬಾ ದೇಗುಲದ ಕಾರ್ಯಕ್ಕೆ, ಶಿಕ್ಷಣ ಸಂಸ್ಥೆ ಅಭಿವೃದ್ಧಿಗೆ ಪರಸ್ಪರ ಸಹಕಾರದ ಮಾದರಿಯಲ್ಲಿ ಪ್ರಕರಣಕ್ಕೆ ಇತಿಶ್ರೀ ಹಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.1961ರಿಂದ ಮಾರಿಗುಡಿ ಪ್ರದೇಶ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕು ಎಂಬ ಕಾರಣದಿಂದ ಮಾರಿಕಾಂಬಾ ದೇಗುಲದ
ಕಟ್ಟಡದಲ್ಲಿ ಶಾಲೆ ಆರಂಭವಾಗಿತ್ತು. ಆದರೆ ಕಳೆದ 15 ವರ್ಷಗಳಿಂದ ಈ ಕಟ್ಟಡ ಸಂಬಂಧದ ಪ್ರಕರಣ ನ್ಯಾಯಾಲಯದ ಮೆಟ್ಟಿಲೂ ಏರಿತ್ತು. ಆದರೆ ದೇಗುಲಕ್ಕೆ ಸಂಬಂಧಪಟ್ಟ ಸ್ಥಳವನ್ನು ಸಮಾಧಾನದಿಂದ ಇತ್ಯರ್ಥ ಮಾಡಿಕೊಳ್ಳಬೇಕು ಎಂಬ ಕಾರಣದಿಂದ ರಾಜೀ ಮಾಡಿಕೊಳ್ಳಲಾಗಿದೆ. ಕಟ್ಟಡದಲ್ಲಿನ ಐದು ಕೊಠಡಿಯಲ್ಲಿ ನಡೆಯುತ್ತಿದ್ದ ಶಾಲಾ ಪೀಠೊಪಕರಣ ಸೇರಿದಂತೆ ಅವರು
ವಾಪಸ್ ಒಯ್ದಿದ್ದು, ಕೀಲಿ ನೀಡಿದ್ದಾರೆ ಎಂದು ಮಾರಿಗುಡಿ ಅಧ್ಯಕ್ಷ ವೆಂಕಟೇಶ ನಾಯ್ಕ ವಿವರಿಸಿದರು.
ಬನವಾಸಿ ರಸ್ತೆಯಲ್ಲಿ 4 ಗುಂಟೆ ಸ್ಥಳಕ್ಕೆ ಶಿಕ್ಷಣ ಸಂಸ್ಥೆ ಬೇಡಿಕೆ ಇಟ್ಟಿದ್ದು, ಅದನ್ನು ಒಪ್ಪಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಕಳಿಸಿದ್ದಾರೆ. ಅಲ್ಲಿಂದ ಅನುಮೋದನೆ ಪಡೆದು ಕಟ್ಟಡ ಕಟ್ಟುವ ಕಾರ್ಯದಲ್ಲಿ ಮಾರಿಗುಡಿ ಕೂಡ ನೆರವಾಗಬೇಕು ಎಂದರು. ನಮಗೆ ಮಿತಿ
ಇರುವುದರಿಂದ ಜಿಲ್ಲಾ ನ್ಯಾಯಾಧೀಶರ ಗಮನಕ್ಕೆ ಯಥಾವತ್ ಪ್ರಸ್ತಾವನೆ ಕಳಿಸಲಾಗುತ್ತದೆ. ಬಾಕಿ ಇರುವ ಇನ್ನೂ ನಾಲ್ಕು ಪ್ರಕರಣವನ್ನು ಶೀಘ್ರ ಇತ್ಯರ್ಥಗೊಳಿಸಿಕೊಳ್ಳುವ ವಿಶ್ವಾಸ ಇದೆ ಎಂದು ವೆಂಕಟೇಶ ತಿಳಿಸಿದರು. ಮಾರಿಗುಡಿ ಉಪಾಧ್ಯಕ್ಷ ಮನೋಹರ ಮಲ್ಮನೆ, ಲಕ್ಷ್ಮಣ ಕಾನಡೆ, ಶಾಂತಾರಾಮ ಹೆಗಡೆ, ಪ್ರೋಗ್ರೆಸ್ಸೀವ್‌ನ ಎನ್.ವಿ.ಜಿ. ಭಟ್ಟ,
ಜಿ.ಜಿ. ಹೆಗಡೆ ಕಡೇಕೋಡಿ, ಸೂರಜ್‌ರಾಣಿ ಪ್ರಭು, ಎಂ.ಎನ್. ಹೆಗಡೆ ಹಲಸಿನಳ್ಳಿ, ರಮೇಶ ದುಭಾಶಿ, ಪರಮಾನಂದ ಹೆಗಡೆ, ಮೋಹಿನಿ ಬೆ„ಲೂರು, ಶಶಿಕಲಾ ಜಯವಂತ ಇತರರು ಇದ್ದರು. ಮಾರಿಗುಡಿ ವ್ಯವಸ್ಥಾಪಕ ನರೇಂದ್ರ ಜಾಧವ್ ಸ್ವಾಗತಿಸಿದರು.