Advertisement

Marijuana: ಮನೆ ಮುಂಭಾಗ ಕುಂಡದಲ್ಲಿ ಗಾಂಜಾ ಬೆಳೆದಿದ್ದ ಪೇಂಟರ್‌ ಸೆರೆ

10:56 AM Oct 26, 2023 | Team Udayavani |

ಬೆಂಗಳೂರು: ಮನೆ ಮುಂಭಾಗವೇ ಗಾಂಜಾ ಗಿಡ ಬೆಳೆದಿದ್ದ ಪೇಂಟರ್‌ನನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಭೈರತಿ ನಿವಾಸಿ ರಾಮ್‌ ಆಶೀಶ್‌(30) ಬಂಧಿತ ಆರೋಪಿ. ಈತನ ವಿರುದ್ಧ ಎನ್‌ಡಿಪಿಎಸ್‌ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು. ಆರೋಪಿ ಪೇಂಟಿಗ್‌ ಕೆಲಸ ಮಾಡಿಕೊಂಡಿದ್ದು, ಮನೆಯ ಮುಂಭಾಗದ ಪಾಟ್‌ನಲ್ಲಿ 6 ಅಡಿ ಎತ್ತರದ ಗಾಂಜಾ ಗಿಡ ಬೆಳೆದಿದ್ದ. ಅಲ್ಲದೆ, ಮನೆಯಲ್ಲಿ ಗಾಂಜಾ ಎಲೆ, ಹೂವು, ಮೊಗ್ಗಗಳು, ಕಾಂಡ, ರೆಂಬೆಗಳು ಹಾಗೂ ಸಣ್ಣ ಗಿಡಗಳನ್ನು ಇಟ್ಟುಕೊಂಡಿದ್ದ. ಈ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಕೊತ್ತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next