Advertisement

ಮಾ. 21 – 22 ಕಾಪು ಹೊಸ ಮಾರಿಗುಡಿಯಲ್ಲಿ ಶಿಲಾಸೇವೆ ಸಮರ್ಪಣೆ

12:17 AM Mar 20, 2023 | Team Udayavani |

ಕಾಪು: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಮಾ. 21 ಮತ್ತು 22ರಂದು ಜರಗಲಿರುವ ಸುಗ್ಗಿ ಮಾರಿಪೂಜೆಯ ಸಂದರ್ಭದಲ್ಲಿ ಮಾರಿಯಮ್ಮ ದೇವಿ ಮತ್ತು ಉಚ್ಚಂಗಿ ದೇವಿಯ ಗರ್ಭಗುಡಿ ನಿರ್ಮಾಣಕ್ಕೆ ಬಳಸುವ ಶಿಲಾ ಸೇವೆ ಸಮರ್ಪಣೆಗೆ ಅವಕಾಶ ಒದಗಿಸಲಾಗಿದೆ.

Advertisement

ಇಳಕಲ್‌ ಕೆಂಪು ಶಿಲೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಪ್ರಥಮ ಹಂತದಲ್ಲಿ ನಡೆಯುತ್ತಿರುವ ಗರ್ಭಗುಡಿ ಮತ್ತು ಸುತ್ತುಪೌಳಿ ನಿರ್ಮಾಣ ಸಹಿತ ವಿವಿಧ ಜೀರ್ಣೋದ್ದಾರ ಕಾರ್ಯಗಳಿಗೆ ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕಾಗಿ ಎರಡು ವರ್ಷಗಳಿಂದ ಭಕ್ತರಿಂದ ನಿರಂತರ ಶಿಲಾ ಸೇವೆ – ಶಿಲಾ ಪುಷ್ಪ ಸಮರ್ಪಣ ಕಾರ್ಯಕ್ರಮ ನಡೆಯುತ್ತಿದೆ.

ಒಂದು ಶಿಲಾ ಸೇವೆಗೆ 999 ರೂ., 9 ಶಿಲಾ ಸೇವೆಗೆ 9,999 ರೂ., 99 ಶಿಲಾಸೇವೆಗೆ 99,999 ರೂ., 999 ಶಿಲಾ ಸೇವೆಗೆ 9,99,999 ರೂ., 9,999 ಶಿಲಾ ಸೇವೆಗೆ 99,99,999 ರೂ. ನಿಗದಿ ಪಡಿಸಲಾಗಿದ್ದು 9ಕ್ಕಿಂತ ಹೆಚ್ಚಿನ ಶಿಲಾ ಸೇವೆ ಸಮರ್ಪಿಸುವ ಭಕ್ತರನ್ನು ಕಾಪುವಿನ ಅಮ್ಮನ ಭಕ್ತರು ತಂಡದಲ್ಲಿ ಸೇರಿಸಿಕೊಳ್ಳಲಾಗುತ್ತಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಶಿಲಾ ಸೇವೆ ಸಮರ್ಪಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಕಾರ್ಯಾಧ್ಯಕ್ಷ ಸುರೇಶ್‌ ಪಿ. ಶೆಟ್ಟಿ ಗುರ್ಮೆ, ಪ್ರಧಾನ ಕಾರ್ಯದರ್ಶಿ ರಮೇಶ್‌ ಹೆಗ್ಡೆ ಕಲ್ಯ, ಕೋಶಾಧಿಕಾರಿ ಪ್ರಶಾಂತ್‌ ಕುಮಾರ್‌ ಶೆಟ್ಟಿ ಹಾಗೂ ಪದಾಧಿಕಾರಿಗಳು ವಿನಂತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next