Advertisement

ಪತಿ ಸಮಾಧಿ ಪಕ್ಕ ಮರಿಬಸಮ್ಮ ಕಂಠಿ ಅಂತ್ಯ ಸಂಸ್ಕಾರ

04:10 PM Dec 10, 2020 | sudhir |

ಇಳಕಲ್ಲ: ಬೆಳಗಾವಿಯ ಕಿತ್ತೂರಿನಲ್ಲಿ ಮಂಗಳವಾರ ನಿಧನರಾಗಿದ್ದ ಮಾಜಿ ಮುಖ್ಯಮಂತ್ರಿ ದಿ| ಎಸ್‌.ಆರ್‌. ಕಂಠಿ ಅವರ ಪತ್ನಿ ಮರಿಬಸಮ್ಮ ಕಂಠಿ (102) ಅವರ ಅಂತ್ಯಕ್ರಿಯೆ ಜಿಲ್ಲೆಯ ಇಳಕಲ್ಲ ನಗರದಲ್ಲಿ ಬುಧವಾರ ಸಂಜೆ ನೆರವೇರಿತು.

Advertisement

ಕಿತ್ತೂರಿನಿಂದ ಇಳಕಲ್ಲಕ್ಕೆ ಮಧ್ಯಾಹ್ನ ಪಾರ್ಥಿವ ಶರೀರ ಬುಧವಾರ ಮಧ್ಯಾಹ್ನ 3.15 ಗಂಟೆಗೆ ನಗರದ ಶ್ರೀ ಬಸವೇಶ್ವರ ವೃತ್ತಕ್ಕೆ ಆಗಮಿಸಿತು. ಬಸವೇಶ್ವರ ವೃತ್ತದಿಂದ ನೇರವಾಗಿ ಶ್ರೀ ವಿಜಯ ಮಹಾಂತೇಶ ಮಹಾವಿದ್ಯಾಲ ಆವರಣಕ್ಕೆ ತರಲಾಯಿತು. ಅಲ್ಲಿ ಸಂಘದ ಚೇರಮನ್‌ ಎಂ.ವಿ. ಪಾಟೀಲ ಹಾಗೂ ಸಂಘದ ಆಡಳಿತ ಮಂಡಳಿ ಸದಸ್ಯರು ಪಾರ್ಥಿವ ಶರೀರಕ್ಕೆ ಹೂಮಾಲೆ ಹಾಕಿ ಪುಷ್ಪ ನಮನ ಸಲ್ಲಿಸಿದರು. ರಸ್ತೆಯುದ್ದಕ್ಕೂ ನೂರಾರು ಜನರು ಅಂತಿಮ ನಮನ ಸಲ್ಲಿಸಿದರು.

ನಂತರ ದಿ| ಎಸ್‌.ಆರ್‌. ಕಂಠಿ ವೃತ್ತಕ್ಕೆ ಆಗಮಿಸಿದಾಗ ವಿಶೇಷ ಪೂಜೆಗೈದು ಬರಮಾಡಿಕೊಳ್ಳಲಾಯಿತು. ಶಾಸಕ ದೊಡ್ಡನಗೌಡ ಪಾಟೀಲ, ನಗರಸಭೆ ಅಧ್ಯಕ್ಷೆ ಶೋಭಾ ಆಮದಿಹಾಳ ಸಮಸ್ತ ಜನರ ಪರವಾಗಿ ಪಾರ್ಥಿವ ಶರೀರಕ್ಕೆ ಹೂಮಾಲೆ ಹಾಕಿ ಅಂತಿಮ ನಮನ ಸಲ್ಲಿಸಿದರು.

ದಿ|ಎಸ್‌.ಆರ್‌. ಕಂಠಿ ವೃತ್ತದಿಂದ ನಗರದ ಗುಬ್ಬಿಪೇಟ್‌, ಸಾಲಪೇಟ್‌, ಬಸವೇಶ್ವರ ದೇವಸ್ಥಾನದಿಂದ ಮುಖ್ಯ ಬಜಾರ್‌ ರಸ್ತೆ ಮೂಲಕ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠಕ್ಕೆ ಆಗಮಿಸಿತು. ಗುರುಮಹಾಂತ ಶ್ರೀಗಳು ಹಾಗೂ ಶಿರೂರದ ಬಸವತೀರ್ಥದ ಡಾ| ಬಸವಲಿಂಗ ಸ್ವಾಮಿಗಳು ಪುಷ್ಪವೃಷ್ಟಿಗೈದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ನಂತರ ಮಠದಲ್ಲಿ ಮಧ್ಯಾಹ್ನ ಸುಮಾರು ಎರಡು ಗಂಟೆಗಳ ಕಾಲ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕಾಗಿ ಅವಕಾಶ ನೀಡಲಾಯಿತು.

Advertisement

ನಂತರ ಮಠದಿಂದ ಇಳಕಲ್ಲ ನಗರ ಹೊರವಲಯದ ಶ್ರೀ ವಿಜಯ ಮಹಾಂತೇಶ ಕತೃì ಗದ್ದುಗೆಯವರೆಗೂ ಮೆರವಣಿಗೆ ನಡೆಸಿ, ವಿಜಯ ಮಹಾಂತೇಶ ಕತೃ ಗದ್ದುಗೆಗೆ ತಂದು ನುಡಿನಮನ ಸಲ್ಲಿಸಲಾಯಿತು. ನಂತರ ದಿ| ಎಸ್‌.ಆರ್‌. ಕಂಠಿ ಸಮಾಧಿ ಪಕ್ಕದಲ್ಲಿ ಲಿಂಗಾಯತ ವಿಧಿ-ವಿಧಾನಗಳಂತೆ ಮರಿಬಸಮ್ಮ ಕಂಠಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಕಂಠಿ ಅವರ ಪುತ್ರ ಮಹೇಂದ್ರ ಕಂಠಿ
ದಂಪತಿ ಸೇರಿ ಇಳಕಲ್ಲದ ಹಲವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next