Advertisement

ವಿಂಬಲ್ಡನ್‌ ಅರ್ಹತಾ ಕೂಟ: ಟೆನಿಸ್‌ ತಾರೆ ಶರಪೋವಾ ಔಟ್‌

06:15 PM Jun 12, 2017 | Team Udayavani |

ಪ್ಯಾರಿಸ್‌: ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ಇತ್ತೀಚೆಗೆ ಶಿಕ್ಷೆ ಮುಗಿಸಿ ವಾಪಸ್‌ ಆಗಿದ್ದ ರಶ್ಯದ ಖ್ಯಾತ ಟೆನಿಸ್‌ ಆಟಗಾರ್ತಿ ಮರಿಯಾ ಶರಪೋವಾ ಗಾಯದ ಕಾರಣದಿಂದ ಮುಂಬರುವ ವಿಂಬಲ್ಡನ್‌ ಅರ್ಹತಾ ಕೂಟದಿಂದ ಹಿಂದೆ ಸರಿದಿದ್ದಾರೆ. 

Advertisement

ತೊಡೆ ಮಾಂಸಖಂಡದ ನೋವಿನ ಹಿನ್ನಲೆಯಲ್ಲಿ ಕೂಟದಿಂದ ಹಿಂದಕ್ಕೆ ಸರಿಯುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಇದಾದ ಬಳಿಕ ಹೆಚ್ಚುವರಿ ಸ್ಕ್ಯಾನಿಂಗ್‌ಗೆ ಶರಪೋವಾ ಒಳಗಾಗಿದ್ದಾರೆ. ಬಳಿಕ ಅವರು ಸಾಮಾಜಿಕ ಜಾಲತಾಣದಲ್ಲಿ ತಾನು ಚೇತರಿಸಿಕೊಳ್ಳುತ್ತಿದ್ದೇನೆ ಎಂದು ಪ್ರಕಟಿಸಿದ್ದಾರೆ. ಅಲ್ಲದೆ ನನಗೆ ಸಂಘಟಕರು ಆಡಲು ಅವಕಾಶ ನೀಡಿಲ್ಲ. ಆದರೆ ಸಂಪೂರ್ಣ ಚೇತರಿಕೆಗೊಳ್ಳುವತ್ತ ಪ್ರಯತ್ನ ನಡೆಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಮೆಲ್ಡೋನಿಯಂ ಉದ್ದೀಪನ ಸೇವನೆ ಪ್ರಕರಣದಲ್ಲಿ ಶರಪೋವಾ 15 ತಿಂಗಳು ನಿಷೇಧಕ್ಕೆ ಒಳಗಾಗಿದ್ದರು. ಕೆಲ ದಿನಗಳ ಹಿಂದಷ್ಟೇ ಇವರು ನಿಷೇಧದಿಂದ ವಾಪಸ್‌ ಆಗಿದ್ದರು. ಶರಪೋವಾಗೆ ಫ್ರೆಂಚ್‌ ಓಪನ್‌ನಲ್ಲಿ ವೈಲ್ಡ್‌ಕಾರ್ಡ್‌ ಪ್ರವೇಶ ನೀಡುವ ಕುರಿತು ಚೆರ್ಚೆ ನಡೆದಿತ್ತು. ಇದಕ್ಕೆ ಕೆಲ ಆಟಗಾರ್ತಿಯರಿಂದ ಪ್ರಬಲ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next