Advertisement

ಶರಪೋವಾ ನನ್ನ ಮದುವೆ ಆಗ್ತೀಯಾ?: ಅಭಿಮಾನಿಯ ಆಸೆ 

07:55 AM Dec 01, 2017 | Team Udayavani |

ಇಸ್ತಾಂಬುಲ್‌: ರಷ್ಯಾ ಸುಂದರಿ, 5 ಬಾರಿಯ ಮಹಿಳಾ ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ವಿಜೇತೆ ಮರಿಯಾ ಶರಪೋವಾ ಯಾರಿಗೆ ಗೊತ್ತಿಲ್ಲ ಹೇಳಿ? ಸೋಲಲಿ ಗೆಲ್ಲಲಿ ಮರಿಯಾ ಇದ್ದಾಳೆ ಎಂದರೆ ಅಲ್ಲಿ ಜನ ಮುಗಿ ಬೀಳುವುದು ಖಚಿತ. ಅದಕ್ಕೆ ಪ್ರತ್ಯಕ್ಷ ಸಾಕ್ಷಿಯೊಂದು ಟರ್ಕಿಯ ಇಸ್ತಾಂಬುಲ್‌ನಲ್ಲಿ ಲಭಿಸಿದೆ. ಪ್ರದರ್ಶನ ಪಂದ್ಯವೊಂದರಲ್ಲಿ ಆಡಲು ಇಸ್ತಾಂಬುಲ್‌ಗೆ ತೆರಳಿದ್ದ ಮರಿಯಾ ಅವರು ಸ್ಥಳೀಯ ಆಟಗಾರ್ತಿ ಕಾಗ್ಲಾ ಬುಯುಕ್ಯಾಕ್ಕೆಯನ್ನು ಎದುರಿಸುತ್ತಿದ್ದರು. ಆಗಷ್ಟೇ ಪಂದ್ಯದ ಮಧ್ಯಭಾಗ, ಪ್ರೇಕ್ಷಕರ ನಡುವಿನಿಂದ ಎದ್ದು ನಿಂತ ಅಭಿಮಾನಿಯೊಬ್ಬ ಎಲ್ಲರೆದುರು, ಮರಿಯಾ ನನ್ನ ಮದುವೆಯಾಗ್ತೀಯಾ ಎಂದು ಕೇಳಿಬಿಟ್ಟ.

Advertisement

ಅಷ್ಟಕ್ಕೆ ಎಲ್ಲೆಡೆ ನಗೆಯ ಬುಗ್ಗೆ ಎದ್ದಿತು. ಅದಕ್ಕೆ ಅಷ್ಟೇ ಚಾಕಚಕ್ಯತೆಯಿಂದ “ಬಹುಶಃ’ ಎಂದು ಮರಿಯಾ ದಿಢೀರ್‌ ಉತ್ತರಿಸಿದರು. ಇದನ್ನು ಕೇಳಿದ ಪ್ರೇಕ್ಷಕ ಗಣ ಮತ್ತೂಮ್ಮೆ ನಗೆಯಲ್ಲಿ ಮುಳುಗಿತು. ಮರಿಯಾಗೆ ಇಂತಹ ಪ್ರೇಮ ನಿವೇದನೆಗಳು ಹೊಸತಲ್ಲವೆನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.ಆಕೆ ತನ್ನ ಸೌಂದರ್ಯದಿಂದಲೇ ಜಾಹೀರಾತು ಜಗತ್ತಿನ ಕಣ್ಮಣಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next