Advertisement

ಮಾರ್ಗೋಳಿ: ಪಾಳುಬಿದ್ದ ಸಮಾಜ ಮಂದಿರ

05:36 PM Dec 19, 2022 | Team Udayavani |

ಬಸ್ರೂರು: ಪ. ಜಾತಿ, ಪಂಗಡದವರಿಗೆ ಸಭೆ, ಸಮಾರಂಭಗಳನ್ನು ಆಯೋಜಿಸಲು ಅನುಕೂಲವಾಗುವಂತೆ ಸರಕಾರದಿಂದ ನಿರ್ಮಿಸಿದ ಸಮಾಜ ಮಂದಿರವೊಂದು ಈಗ ನಿರುಪಯುಕ್ತ ಗೊಂಡು ಪಾಳು ಬಿದ್ದಿದೆ. ಸರಕಾರದ ಅನುದಾನದಲ್ಲಿ ನಿರ್ಮಾಣಗೊಂಡ ಕಟ್ಟಡವೊಂದು ಹೀಗೆ ವ್ಯರ್ಥವಾಗುತ್ತಿರುವುದಕ್ಕೆ ಇದೊಂದು ಜ್ವಲಂತ ನಿದರ್ಶನ.

Advertisement

ಬಸ್ರೂರು ಗ್ರಾಮದ ಮಾರ್ಗೋಳಿಯಲ್ಲಿ ಸುಮಾರು 25 ವರ್ಷಗಳ ಹಿಂದೆ ಸರಕಾರ ಸಮಾಜ ಮಂದಿರವನ್ನು ನಿರ್ಮಿಸಿತ್ತು. ಈ ಭಾಗದ ಪರಿಶಿಷ್ಟ ಜಾತಿ, ಪಂಗಡದ ಸಮುದಾಯದವರಿಂದ ಆಗ ಕೆಲವೊಂದು ಕಾರ್ಯಕ್ರಮನಡೆಯುತ್ತಿದ್ದವು. ಆದರೆ ಅನಂತರದ ವರ್ಷಗಳಲ್ಲಿ ಈ ಸಮಾಜ ಮಂದಿರದ ಬಳಿ ಯಾರೂ ಸುಳಿಯದೇ ಈಗ ಪಾಳು ಬಿದ್ದಿದೆ.

ಸಮಸ್ಯೆಗೆ ಸಿಗದ ಸ್ಪಂದನೆ ಇದು ಸುಮಾರು 36 ಸೆಂಟ್ಸ್‌ ಜಾಗವನ್ನು ಹೊಂದಿದೆ. ಎರಡು ವರ್ಷಗಳ ಹಿಂದೆಯೇ ಪರಿಶಿಷ್ಟ ಜಾತಿ, ಪಂಗಡ ದವರು ಈ ಸ್ಥಳದಲ್ಲಿ ಒಂದು ಅಂಬೇಡ್ಕರ್‌ ಭವನ ನಿರ್ಮಿಸುವಂತೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಗೆ ಜಿಲ್ಲಾಧಿಕಾರಿಗೆ, ಕುಂದಾಪುರ ಉಪ ವಿಭಾಗಾಧಿಕಾರಿಗಳಿಗೆ, ತಹಶೀಲ್ದಾರ್‌, ಶಾಸಕರಿಗೆ, ಬಸ್ರೂರು ಗ್ರಾ.ಪಂ.ಗೆ ಮನವಿ ಸಲ್ಲಿಸಿತ್ತು. ಆದರೆ ಇದುವರೆಗೂ ಈ ಸಮಸ್ಯೆ ಪರಿಹಾರಕ್ಕೆ ಯಾರೂ ಯತ್ನಿಸ ದಿರುವುದು ವಿಷಾದನೀಯ. ಹಾಳು ಬಿದ್ದ ಈ ಸಮಾಜ ಮಂದಿರಕ್ಕೆ ಶೀಘ್ರ ಕಾಯಕಲ್ಪ ಅಗತ್ಯ ಎಂದು ಸಾರ್ವಜನಿಕರ ಆಗ್ರಹವಾಗಿದೆ.

ಪ್ರಸ್ತಾವನೆ ಸಲ್ಲಿಸಲಾಗಿದೆ
ಈಗಾಗಲೇ ಮನವಿ ಬಂದಿದ್ದು ಇಲ್ಲಿ ಒಂದು ಅಂಬೇಡ್ಕರ್‌ ಭವನ ನಿರ್ಮಿಸಬೇಕೆಂದು ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ.
ನಾಗೇಂದ್ರ ಜೆ., ಪಿಡಿಒ, ಗ್ರಾ.ಪಂ.ಬಸ್ರೂರು

ಮನವಿಗೆ ಸಿಗದ ಸ್ಪಂದನೆ
ಎಷ್ಟೇ ಮನವಿ ಸಲ್ಲಿಸಿದರೂ ನಮ್ಮ ಮನವಿಗೆ ಯಾರೂ ಸ್ಪಂದಿಸಿಲ್ಲ. ಇನ್ನಾದರೂ ಈ ಸ್ಥಳದಲ್ಲಿ ಒಂದು ಅಂಬೇಡ್ಕರ್‌ ಭವನ ನಿರ್ಮಿಸಿದಲ್ಲಿ ನಮಗೆ ಅನುಕೂಲವಾಗುತ್ತದೆ.
– ಗೋವಿಂದ ಮಾರ್ಗೋಳಿ,
ಮಾಜಿ ಕಾರ್ಯದರ್ಶಿ, ದಲಿತ ಶ್ರೇಯಾಭಿವೃದ್ಧಿ ಸಮಿತಿ ಬಸ್ರೂರು

Advertisement

ದಯಾನಂದ ಬಳ್ಕೂರು

Advertisement

Udayavani is now on Telegram. Click here to join our channel and stay updated with the latest news.

Next