Advertisement

ಪ್ರಸಾದ್‌ ಗೆಲುವಿನ ಅಂತರ 20 ಸಾವಿರಕ್ಕಿಂತ ಕಡಿಮೆಯಾದ್ರೆ ನಿವೃತ್ತಿ

12:41 PM Apr 08, 2017 | |

ನಂಜನಗೂಡು: ನಂಜನಗೂಡು ಉಪಚುನಾವಣೆಯಲ್ಲಿ ವಿ.ಶ್ರೀನಿವಾಸಪ್ರಸಾದ್‌ ಗೆಲುವು ನಿಶ್ಚಿತವಾಗಿದ್ದು, ಅವರ ಗೆಲುವಿನ ಅಂತರ 20 ಸಾವಿರಕ್ಕೆ ಕಡಿಮೆಯಾದಲ್ಲಿ ತಾವು ಇನ್ನು ಮುಂದೆ ಯಾವುದೇ ಉಪಚುನಾವಣೆಯಲ್ಲಿ ಭಾಗಿಯಾಗುವುದಿಲ್ಲ ಎಂದು ಬಿಜೆಪಿ ನಾಯಕ, ಉಪ ಚುನಾವಣೆ ಉಸ್ತುವಾರಿ ವಹಿಸಿಕೊಂಡಿರುವ ವಿ.ಸೋಮಣ್ಣ ಸವಾಲು ಹಾಕಿದರು.

Advertisement

ಬಹಿರಂಗ ಪ್ರಚಾರದ ಅಂತಿಮ ದಿನವಾದ ಶುಕ್ರವಾರ ಪಟ್ಟಣದ ಬಿಜೆಪಿ ಪ್ರಚಾರ ಕಾರ್ಯಾಲಯದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಇಲ್ಲಿನ ಜನತೆಯ ಪ್ರೀತಿ ವಿಶ್ವಾಸಕ್ಕೆ ಮಾರು ಹೋಗಿರುವ ತಾವಿಬ್ಬರೂ ಇದನ್ನು ಮಾದರಿ ಕ್ಷೇತ್ರವಾಗಿ ಅಭಿವೃದ್ ಪಡಿಸಲು ಪಣ ತೊಟ್ಟಿದ್ದೇವೆ ಎಂದ ಸೋಮಣ್ಣ, ಶಾಂತಿ ನೆಮ್ಮದಿಯನ್ನು ಕಾಪಾಡಿಕೊಂಡು ಚುನಾವಣಾ ಜವಾಬ್ದಾರಿಯನ್ನು ಮುಗಿಸಿ ತೆರಳುತ್ತಿರುವುದಾಗಿ ತಿಳಿಸಿದರು.

25 ದಿನಗಳಲ್ಲಿ ತಾವು 2.75 ಕೆ.ಜಿ. ತೂಕ ಹೆಚ್ಚಿಸಿಕೊಂಡಿದ್ದಕ್ಕೆ ಈ ಕ್ಷೇತ್ರದ ಆತಿಥ್ಯವೇ ಕಾರಣ ಎಂದು ತಿಳಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಹಾಗೂ ಶ್ರೀನಿವಾಸಪ್ರಸಾದ್‌ ಅವರ ಜೋಡಿಯನ್ನು ಇಲ್ಲಿನ  ಮತದಾರರು ಬೆಂಬಲಿಸಿದ್ದು, ಕ್ಷೇತ್ರದಲ್ಲಿ ಕಮಲದ ಅರಳುವಿಕೆ ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಬಿಜೆಪಿ ದಿಗ್ವಿಜಯ: ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಬಿಜೆಪಿ ನಾಯಕರು, ಕಾರ್ಯಕರ್ತರು ಹಾಗೂ ಅಭಿಮಾನಿಗಳ ಪರಿಶ್ರಮದಿಂದಾಗಿ ನಂಜನಗೂಡಿನಲ್ಲಿ ಬಿಜೆಪಿ ದಿಗ್ವಿಜಯ ಸಾಸಲಿದ್ದು, ಈ ವಿಜಯವನ್ನು ಏಪ್ರಿಲ್‌ 14ರಂದು ಸಂವಿಧಾನ ಶಿಲ್ಪಿ$ಡಾ|ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರಿಗೆ ಸಮರ್ಪಿಸುವುದಾಗಿ ತಿಳಿಸಿದರು.     

ಉಪಚುನಾವಣೆಯಲ್ಲಿ ಜಾತಿ ಜಾತಿಗಳಲ್ಲಿ ವಿಷಬೀಜ ಬಿತ್ತಿ ಕಲಹ ಉಂಟು ಮಾಡುವ ಕಾಂಗ್ರೆಸ್‌ ಪಕ್ಷದ ಪ್ರಯತ್ನವನ್ನು ಇಲ್ಲಿನ ಜನತೆ ವಿಫ‌ಲಗೊಳಿಸಿದ್ದಾರೆ. ಸಾಮಾನ್ಯ ಜನರಲ್ಲಿ ಉಂಟಾಗಿದ್ದ ಸಂಶಯವನ್ನು ನಿವಾರಿಸುವಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪಹಾಗೂ ನಮ್ಮ ಅಭ್ಯರ್ಥಿ ವಿ.ಶ್ರೀನಿವಾಸ್‌ ಪ್ರಸಾದ್‌ ಯಶಸ್ವಿಯಾಗಿದ್ದಾರೆ ಎಂದರು.

Advertisement

ಅಕಾರಿಗಳು ಆಡಳಿತ ಪಕ್ಷದ ಪರ ಶಾಮೀಲಾಗಿದ್ದಾರೆ. ಸಚಿವರು ಹಣ ಹಂಚುತ್ತಿರುವ ಕುರಿತು ಚುನಾವಣಾಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸಚಿವರಾದ ಮಹದೇವಪ್ಪ, ಜಾರಕಿಹೊಳಿ, ಇಂಧನಬಾಬು, ಸಂಸದ ಧ್ರುವನಾರಾಯಣ್‌ ನೇರವಾಗಿ ಹಣ ಹಂಚಿದ್ದಾರೆ ಎಂದು ಆರೋಪಿಸಿದರು.

ಮುಖ್ಯಮಂತ್ರಿಗಳ  ಮನೆಯಿಂದಲೇ ಹಣ ವಿಲೇವಾರಿ ಮಾಡಲಾಗುತ್ತಿದೆ. ಏಕಲವ್ಯ ತಾಂತ್ರಿಕ ವಿದ್ಯಾಲಯದ ಬಸ್‌ನಲ್ಲಿ ಜನರನ್ನು ಕರೆತಂದು ಮೈಸೂರಿನ ಮುಖ್ಯಮಂತ್ರಿಗಳ ಮನೆಯಿಂದಲೇ ಹಣ ವಿತರಣೆ ಮಾಡಲಾಗಿದೆ ಎಂದು ದೂರಿದರು.

ಸೋಲಿನ ಹತಾಶೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣಾ ಅಕ್ರಮದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ಇಲ್ಲಿನ ಜನರು ಪ್ರಸಾದ್‌ ಅವರನ್ನು ಗೆಲ್ಲಿಸಿ ಪಕ್ಷದ ರಾಜಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪಅವರಿಗೆ ಪ್ರಥಮ ವರ್ಷದ ವಾರ್ಷಿಕೋತ್ಸವದ ಉಡುಗೊರೆಯನ್ನು ನೀಡಲಿದ್ದಾರೆ. ಬಿಜೆಪಿ ಗೆಲುವಿನ ಅಂತರ 25 ಸಾವಿರ ದಾಟಲಿದೆ ಎಂದು ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next