Advertisement

ಮರ್ದಾಳ ಜಂಕ್ಷನ್‌: ಹೊಟೇಲಿಗೆ ನುಗ್ಗಿದ ಜೀಪ್‌ 

07:25 AM Aug 06, 2017 | Team Udayavani |

ಕಡಬ:  ಜೀಪೊಂದು ಎರಡು ಬೈಕ್‌ಗಳಿಗೆ ಢಿಕ್ಕಿ ಹೊಡೆದು ಹೊಟೇಲೊಂದಕ್ಕೆ ನುಗ್ಗಿದ ಪರಿಣಾಮ ಬೈಕ್‌ ನಜ್ಜುಗುಜ್ಜಾಗಿದ್ದು, ಹೊಟೇಲಿನ ಕಂಬಗಳೆರಡು ಹಾನಿಯಾಗಿವೆ. ಈ  ಘಟನೆ ಶನಿವಾರ ಸಂಜೆ ಸುಬ್ರಹ್ಮಣ್ಯ   ಧರ್ಮಸ್ಥಳ ರಾಜ್ಯ ಹೆದ್ದಾರಿಯ ಮರ್ದಾಳ ಜಂಕ್ಷನ್‌ನಲ್ಲಿ ಸಂಭವಿಸಿದೆ.

Advertisement

ಜೀಪು ಚಲಾಯಿಸಲು ಕಲಿಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿದ್ದು, ಬೈಕಿಗೆ ಢಿಕ್ಕಿ ಹೊಡೆದು ಹೊಟೇಲಿನ 
ಕಂಬಕ್ಕೆ ಢಿಕ್ಕಿಯಾಗಿ ಜೀಪು ನಿಂತಿತ್ತು.  ಸಂಜೆ ಸಮಯದಲ್ಲಿ ಶಾಲಾ ಮಕ್ಕಳು ಇದೇ ಹೊಟೇಲಿನ ಮುಂಭಾಗದಲ್ಲಿ ಬಸ್‌ಗೆ ಕಾಯುತ್ತಿದ್ದು, ಅಪಘಾತದ ಸಮಯದಲ್ಲಿ ಸ್ಥಳದಲ್ಲಿ ಯಾರೂ ಇಲ್ಲದೆ ಇದ್ದುದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next