Advertisement
ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಅಭಿವೃದ್ಧಿ ಹಂತದಲ್ಲಿ ರುವ ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ನಾಗುರಿಯಿಂದ ಕೆಲವು ವರ್ಷಗಳ ಹಿಂದೆಯೇ ರಸ್ತೆ ನಿರ್ಮಿ ಸಲಾಗಿದೆ. ನಾಗುರಿ ಭಾಗದಲ್ಲಿ ಅಗಲವಾ ಗಿರುವ ಈ ರಸ್ತೆಯು ನಿಲ್ದಾಣಕ್ಕೆ ಪ್ರವೇಶ ಪಡೆಯುವಲ್ಲಿ ತುಂಬಾ ಕಿರಿದಾಗಿದ್ದು, ಇದರಿಂದ ಘನ ವಾಹನಗಳಿಗೆ ಸಂಚರಿ ಸುವುದು ಕಷ್ಟವಾಗಿದೆ. ಕೇವಲ ದ್ವಿಚಕ್ರ ವಾಹನ, ಆಟೋಗಳು ಮತ್ತು ಕಾರು ಸಂಚರಿಸಬಹುದಾಗಿದೆ.
Related Articles
ಪ್ರಸ್ತುತ ನಿಲ್ದಾಣಕ್ಕೆ ಬಜಾಲ್ ಕಡೆ ಯಿಂದ ಸುಸಜ್ಜಿತ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದ್ದು, ಬಹುತೇಕ ವಾಹನಗಳು ಇದೇ ರಸ್ತೆಯಾಗಿ ರೈಲು ನಿಲ್ದಾಣದ ಆವರಣಕ್ಕೆ ಪ್ರವೇಶಿಸುತ್ತವೆ. ಬಸ್ ಕೂಡ ಇದೇ ರಸ್ತೆಯಲ್ಲಿ ನಿಲ್ದಾಣದ ವರೆಗೆ ಬರುತ್ತದೆ. ನಾಗುರಿ ಕಡೆಯಿಂದಲೂ ನಿಲ್ದಾಣಕ್ಕೆ ಸಂಪರ್ಕ ಸಾಧ್ಯವಾದರೆ ನಿಲ್ದಾಣ ಪ್ರವೇಶ ಇನ್ನಷ್ಟು ಸುಲಭವಾಗಲಿದೆ.
Advertisement
ನಿಲ್ದಾಣ ಅಭಿವೃದ್ಧಿನಿಲ್ದಾಣ ಅಭಿವೃದ್ಧಿ ಕಾರ್ಯಕವೂ ವೇಗವಾಗಿ ನಡೆಯುತ್ತಿದೆ. ಪಾರ್ಕಿಂಗ್ ಸ್ಥಳ, ಪ್ರವೇಶ ದ್ವಾರ, ಪ್ರಯಾಣಿಕರು ರೈಲಿ ಗಾಗಿ ಕಾಯುವ ಕೊಠಡಿ ಸಹಿತ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ವರ್ಷಾಂತ್ಯದೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.