Advertisement

ಬಿಎಸ್‌ಎಫ್‌, ಆರ್‌ಎಎಫ್‌, ಪೊಲೀಸ್‌ ಪಥಸಂಚಲನ

02:32 PM Apr 21, 2018 | |

ಪುತ್ತೂರು: ಪುತ್ತೂರು ವಿಧಾನ ಸಭಾ ಕ್ಷೇತ್ರದ 44 ದುರ್ಬಲ ಮತಗಟ್ಟೆಗಳ ಬಂದೋಬಸ್ತ್ಗೆ ಕೊಯಂಮುತ್ತೂರಿನಿಂದ 130 ಆರ್‌ಎಎಫ್‌ ಸಿಬಂದಿ ಆಗಮಿಸಿದ್ದು, ಶುಕ್ರವಾರ ಸಂಜೆ ಪುತ್ತೂರು ಪೇಟೆಯಲ್ಲಿ ಪಥಸಂಚಲನ ನಡೆಸಿದರು. ಇವರಿಗೆ ಬಿಎಸ್‌ಎಫ್‌ನ 90 ಯೋಧರು, ನಗರ ಠಾಣೆ ಪೊಲೀಸರು ಜತೆಯಾದರು.

Advertisement

223 ಮತಗಟ್ಟೆಗಳ ಪೈಕಿ 40 ದುರ್ಬಲ ಮತಗಟ್ಟೆಗಳಲ್ಲಿ ಆರ್‌ಎಎಫ್‌ ಸಿಬಂದಿ ಬಂದೋಬಸ್ತ್ ನಡೆಸಲಿದ್ದಾರೆ. ಇತರ ಮತಗಟ್ಟೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ 90 ಮಂದಿ ಬಿಎಸ್‌ಎಫ್‌ ಯೋಧರು ಬಂದೋಬಸ್ತ್ ಕಾರ್ಯಕೈಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ದರ್ಬೆಯಿಂದ ಬೊಳುವಾರುವರೆಗೆ ಪಥಸಂಚಲನ ನಡೆಸಿ, ನಾಗರಿಕರಿಗೆ ಧೈರ್ಯ ತುಂಬಿದರು. ಪೊಲೀಸ್‌ ನಿರೀಕ್ಷಕ ಶರಣ ಗೌಡ, ಎಸ್‌ಐ ಅಜಯ್‌ ಕುಮಾರ್‌, ಚೆಲುವಯ್ಯ, ಗ್ರಾಮಾಂತರ ಠಾಣೆ ಎಸ್‌ಐ ಸಕ್ತಿವೇಲು ನೇತೃತ್ವದಲ್ಲಿ ಪೊಲೀಸರು ಪಾಲ್ಗೊಂಡಿದ್ದರು.

ಸುಗಮ ಮತದಾನ ಕಾರ್ಯನಡೆಯಲು ಈಗಾಗಲೇ ಪೊಲೀಸ್‌ ಇಲಾಖೆ ಸಕಲ ಸಿದ್ಧತೆ ನಡೆಸಿದೆ. 1 ಡೆಪ್ಯುಟಿ ಕಮಾಂಡರ್‌, 2 ಸಹಾಯಕ ಕಮಾಂಡರ್‌ ಹಾಗೂ 10 ಇನ್ಸ್‌ಪೆಕ್ಟರ್‌ ಗಳನ್ನು ನಿಯೋಜಿಸಲಾಗಿದೆ. ಪುತ್ತೂರಿನ ಪ್ರಮುಖ ಚೆಕ್‌ಪೋಸ್ಟ್‌, ಮತಗಟ್ಟೆಗಳ ಸಂಪೂರ್ಣ ಮಾಹಿತಿ ಕಲೆಹಾಕಲಾಗಿದ್ದು, ಚುನಾವಣಾ ನೀತಿ ಸಂಹಿತೆಯಾಗದಂತೆ ತಡೆಯಲು ಕ್ರಮ ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next