Advertisement

ಮಾರ್ಚ್‌ 8, 9: ಮಂಗಳೂರಿನಲ್ಲಿ ಮಾತಾ ಅಮೃತಾನಂದಮಯಿ ದೇವಿ

01:00 AM Feb 06, 2019 | Team Udayavani |

ಮಂಗಳೂರು: ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿ ಅವರು ಮಾರ್ಚ್‌ 8 ಮತ್ತು 9ರಂದು ಮಂಗಳೂರಿನ ಬ್ರಹ್ಮಸ್ಥಾನ ಮಹೋತ್ಸವ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಅನುಗ್ರಹ ದರ್ಶನ ನೀಡಲಿದ್ದಾರೆ.
ಬೋಳೂರು ಸುಲ್ತಾನ್‌ ಬತ್ತೇರಿ ರಸ್ತೆಯ ಅಮೃತ ವಿದ್ಯಾಲಯದ ಮೈದಾನದಲ್ಲಿ ಜರಗುವ ಈ ಕಾರ್ಯಕ್ರಮಕ್ಕೆ ದೇಶ ವಿದೇಶಗಳ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ. ಬ್ರಹ್ಮಸ್ಥಾನ  ಮಹೋತ್ಸವ ಪ್ರಯುಕ್ತ ವಿವಿಧ ಪೂಜೆ, ಹೋಮ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಎರಡೂ ದಿನಗಳಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದ ತನಕ ಜರಗಲಿವೆ.

Advertisement

ಫೆ. 10- ಮಹಾಸಭೆ 
ಅಮ್ಮನವರ ಮಂಗಳೂರು ಭೇಟಿಯ ಪ್ರಯುಕ್ತ ಜರಗಲಿರುವ ಅಮೃತ ಸಂಗಮ-2019 ಹಾಗೂ ಬ್ರಹ್ಮಸ್ಥಾನ ಮಹೋತ್ಸವ ಕಾರ್ಯಕ್ರಮದ ಸಿದ್ಧತೆಗಾಗಿ ಭಕ್ತರ ಮಹಾಸಭೆ ಫೆ. 10ರಂದು ಅಮೃತ ವಿದ್ಯಾಲಯ ಸಭಾಂಗಣದಲ್ಲಿ ಜರಗಲಿದೆ. 

ಅಂದು ಬೆಳಗ್ಗೆ 6ಕ್ಕೆ ಮಹಾಗಣಪತಿ ಹೋಮ, ಬೆಳಗ್ಗೆ 9ಕ್ಕೆ ಮೃತ್ಯುಂಜಯ ಹೋಮ, 11ಕ್ಕೆ ಮಹಾಸಭೆ ನಡೆಯಲಿದೆ ಎಂದು ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಅಧ್ಯಕ್ಷ ಪ್ರಸಾದ್‌ ರಾಜ್‌ ಕಾಂಚನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next