ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯು ಸರಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಹಿತ ಶಿಕ್ಷಕರು ಮತ್ತು ಸರಕಾರಿ ಪ್ರೌಢ ಶಾಲಾ ಶಿಕ್ಷಕರು, ತತ್ಸಮಾನ ವೃಂದದ ಶಿಕ್ಷಕರು ಹಾಗೂ ಅಧಿಕಾರಿಗಳಿಗೆ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಯ ಮಾರ್ಗಸೂಚಿ ಒಳಗೊಂಡ ವೇಳಾಪಟ್ಟಿ ಪ್ರಕಟಿಸಿದೆ.
2020ರ ಶಿಕ್ಷಕರ ವರ್ಗಾವಣೆ ಕಾಯ್ದೆಯ ಪ್ರಕಾರ ವರ್ಗಾ ವಣೆಗೆ ಅರ್ಜಿ ಸಲ್ಲಿಸಲು ಶಿಕ್ಷಕರಿಗೆ ಸೂಚಿಸಿದೆ.
ಪ್ರಕ್ರಿಯೆ ಮಾ. 18ರಿಂದ ಆರಂಭಗೊಳ್ಳ ಲಿದೆ. ಆದರೆ ಕೌನ್ಸಿಲಿಂಗ್ ಪ್ರಕ್ರಿಯೆ ದಿನ ನಿಗದಿ ಆಗಿಲ್ಲ. ಸಕ್ಷಮ ಪ್ರಾಧಿಕಾರ ನಿಯಮ ಪ್ರಕಾರ ವರ್ಗಾ ವಣೆ ಪ್ರಕ್ರಿಯೆ ನಡೆಸಬೇಕು. ಇಲಾಖಾ ಮಾರ್ಗಸೂಚಿ ಉಲ್ಲಂಘಿ ಸಿ ಅರ್ಜಿಗಳ ಅನುಮೋದನೆ ಮತ್ತು ವರ್ಗಾವಣ ಕೌನ್ಸೆಲಿಂಗ್‌ನಲ್ಲಿ ಅಕ್ರಮಗಳು ಕಂಡು ಬಂದಲ್ಲಿ ಅಂಥ ಸಕ್ಷಮ ಪ್ರಾಧಿಕಾರದ ವಿರುದ್ಧ ಶಿಸ್ತು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಇಲಾಖೆಯ ಆದೇಶ ತಿಳಿಸಿದೆ.
ಆದರೆ ಶನಿವಾರ ಚುನಾವಣೆ ವೇಳಾಪಟ್ಟಿ ಪ್ರಕಟಗೊಳ್ಳಲಿದ್ದು, ನೀತಿ ಸಂಹಿತೆ ಅವಧಿಯಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆಯ ಬಹುದೇ ಎಂಬ ಪ್ರಶ್ನೆ ಮೂಡಿದೆ.