Advertisement

March 1.78 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ: 2ನೇ ಗರಿಷ್ಠ

12:41 AM Apr 02, 2024 | Team Udayavani |

ಹೊಸದಿಲ್ಲಿ: ಕಳೆದ ತಿಂಗಳು ಜಿಎಸ್‌ಟಿ ಸಂಗ್ರಹದಲ್ಲಿ ಶೇ.11.5ರಷ್ಟು ಏರಿಕೆಯಾಗಿದ್ದು, 1.78 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ. ಇದು ಸಾರ್ವಕಾಲಿಕವಾಗಿ 2ನೇ ಗರಿಷ್ಠ ಸಂಗ್ರಹವಾಗಿದೆ. 2023ರ ಎಪ್ರಿಲ್‌ನಿಂದ 2024ರ
ಮಾರ್ಚ್‌ವರೆಗೆ 20.14 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದ್ದು, ಇದರ ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ.11.7ರಷ್ಟು ಏರಿಕೆಯಾಗಿದೆ. ಅಲ್ಲದೇ ಕಳೆದ ಆರ್ಥಿಕ ವರ್ಷದಲ್ಲಿ ಜಿಎಸ್‌ಟಿ ಸಂಗ್ರಹದ ತಿಂಗಳ ಸರಾಸರಿ 1.68 ಲಕ್ಷ ಕೋಟಿ ರೂ.ನಷ್ಟಿದೆ. 2023ರ ಎಪ್ರಿಲ್‌ನಲ್ಲಿ 1.87 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದ್ದು, ಈವರೆಗಿನ ಗರಿಷ್ಠವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next