Advertisement

ಎಡಿಟಿಂಗ್‌ನಲ್ಲಿ ‘ಮಾರಾಯ’

03:30 PM Sep 28, 2021 | Team Udayavani |

“ಮಾರಾಯ’ ಎಂಬ ಸಿನಿಮಾವೊಂದು ಸದ್ದಿಲ್ಲದೇ ಚಿತ್ರೀಕರಣ ಮುಗಿಸಿದ್ದು, ಈಗ ಚಿತ್ರ ಡಬ್ಬಿಂಗ್‌ ಹಂತಕ್ಕೆ ಬಂದಿದೆ. ಈಗಾಗಲೇ ಎಡಿಟಿಂಗ್‌, ಸಿ.ಜಿ ಕೆಲಸ ಮುಗಿಸಿಕೊಂಡಿರುವ ಚಿತ್ರ ಶೀಘ್ರದಲ್ಲಿ ಬಿಡುಗಡೆಯಾಗಲಿದೆ.

Advertisement

ಇತ್ತೀಚೆಗೆ ಈ ಚಿತ್ರದ ಲಿರಿಕಲ್‌ ವಿಡಿಯೋ ಬಿಡುಗಡೆಯಾಗಿದೆ. ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಎರಡು ಲಕ್ಷಕ್ಕೂ ಹೆಚ್ಚಿನ ವೀಕ್ಷಣೆ ಪಡೆದಿದೆ. ಈ ಚಿತ್ರವನ್ನು ಶ್ರೀ ಹೊನ್ನಾದೇವಿ ಗಂಗಾಧರೇಶ್ವರ ಪ್ರೊಡಕ್ಷನ್ಸ್‌ನಡಿ ಎನ್‌.ಜಿ.ಸುಜಾತಾ ನಂದನ್‌ ತುಮಕೂರು ನಿರ್ಮಿಸಿದ್ದಾರೆ.

ಚಿತ್ರವನ್ನು ಉದಯ್‌ ಪ್ರೇಮ್‌ ನಿರ್ದೇಶಿಸಿದ್ದಾರೆ. ಬಿಡುಗಡೆಯಾಗಿರುವ ಲಿರಿಕಲ್‌ ವಿಡಿಯೋನಲ್ಲಿ ನಿರ್ದೇಶಕರದ್ದೇ ಸಾಹಿತ್ಯವಿದೆ. ರಾಜೇಶ್‌ ಕೃಷ್ಣನ್‌ ಈ ಹಾಡನ್ನು ಹಾಡಿದ್ದಾರೆ.

ಇದೊಂದು ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾವಾಗಿದ್ದು, ಇವತ್ತಿನ ಟ್ರೆಂಡ್‌ಗೆ ತಕ್ಕಂತೆ ಮಾಡಲಾಗಿದೆ. ಚಿತ್ರದಲ್ಲಿ ಕುಮಾರ್‌ ದೇವ್‌, ಶ್ರೇಯಾ, ಪೂಜಾ, ಸ್ನೇಹ, ವಿನಯ ಪ್ರಸಾದ್‌, ದಿವಾಕರ್‌, ಮಜಾ ಭಾರತದ ಕಲಾವಿದರು, ಡಿಂಗ್ರಿ ನಾಗರಾಜ್‌ ಸೇರಿದಂತೆ ಅನೇಕರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next