Advertisement

ಮರವಂತೆ ಗ್ರಾಮಸಭೆ: ಜನಜಾಗೃತಿ ಅವ್ಯವಹಾರಕ್ಕೆ ಅಂಕುಶ

04:31 PM Mar 28, 2017 | Team Udayavani |

ಮರವಂತೆ: ಗ್ರಾಮ ಸಭೆಯಲ್ಲಿ ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಜಾಗೃತರಾಗಿದ್ದರೆ ಊರಿನಲ್ಲಿ ನಡೆ ಯುವ ಕಳಪೆ ಕಾಮಗಾರಿ, ಅವ್ಯವಹಾರ ತಡೆಯಲು ಸಾಧ್ಯವಾಗುತ್ತದೆ ಎಂದು ಜಿ.ಪಂ. ಸದಸ್ಯ ಕೆ. ಬಾಬು ಶೆಟ್ಟಿ ಹೇಳಿದರು.

Advertisement

ಅವರು ಮರವಂತೆ ಗ್ರಾ.ಪಂ. ಸುವರ್ಣ ಸೌಧದ ಅಟಲ್‌ಬಿಹಾರಿ ವಾಜಪೇಯಿ ವೇದಿಕೆಯಲ್ಲಿ ನಡೆದ ಎರಡನೇ ಸುತ್ತಿನ ಗ್ರಾಮಸಭೆಯಲ್ಲಿ ಮಾತನಾಡಿದರು. ಗ್ರಾ.ಪಂ. ಅಧ್ಯಕ್ಷೆ ಅನಿತಾ ಆರ್‌. ಕೆ. ಅಧ್ಯಕ್ಷತೆ ವಹಿಸಿದ್ದರು. ಪಶು ವೈದ್ಯಾಧಿಕಾರಿ ಡಾ| ಅರುಣ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸವಿತಾ ಶೆಟ್ಟಿ ಇಲಾಖೆಯ ಯೋಜನೆಗಳ ಮಾಹಿತಿ ನೀಡಿದರು.

ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಸಮ್ಮಾನ್‌ ಶೆಟ್ಟಿ ಗ್ರಾಮಸಭೆಯಲ್ಲಿ ಮಾತನಾಡುವಾಗ ಜನರು ಸಂಯಮ ವಹಿಸಿದರೆ ಚರ್ಚೆಯ ಗುಣಮಟ್ಟ ಹೆಚ್ಚುವುದೆಂದು ಸಲಹೆಯಿತ್ತರು. ಅಹವಾಲುಗಳನ್ನು ಮುಂದಿಟ್ಟ ಸಂಜೀವ ಖಾರ್ವಿ ಪಂ. ನೀಡಬೇಕಾದ ದೃಢೀಕರಣಗಳು ಸರಿಯಾಗಿ ಸಿಗುತ್ತಿಲ್ಲ ಎಂದು ದೂರಿದರು. ಚಂದ್ರಶೇಖರ ಖಾರ್ವಿ ನಂದಿಕೇಶ್ವರ ಮಾರ್ಗದಲ್ಲಿ ನಡೆಯುತ್ತಿರುವ ಕಾಮಗಾರಿಯ ಗುಣಮಟ್ಟವನ್ನು ಪ್ರಶ್ನಿಸಿದರು. ಮಂಜು ಪೂಜಾರಿ ಅರ್ಧಕ್ಕೆ ನಿಂತ ಹರಿಶ್ಚಂದ್ರ ಮಾರ್ಗದ ಡಾಮರೀಕರಣ ಮುಂದುವರಿಯಬೇಕು ಎಂದು ಆಗ್ರಹಿಸಿದರು. ವಿಜಯ ಕ್ರಾಸ್ತಾ ಸೋಲಾರ್‌ ಬೀದಿದೀಪ ದುಬಾರಿ ಆಗುವುದರಿಂದ ವಿದ್ಯುತ್‌ ದೀಪಗಳಿಗೆ ಆದ್ಯತೆ ನೀಡಬೇಕು ಎಂದರು. ವೀರೇಶ್‌ ಬಿಲ್ಲವ ಸಾಧನಾ ಮಾರ್ಗ, ಗೋರಿಕೆರೆ ಬಳಿ ಸೋಲಾರ್‌ ದೀಪಗಳ ಅಳವಡಿಕೆಗೆ, ಉದಯ ಪೂಜಾರಿ ಮಹಾತ್ಮ ಗಾಂಧಿ ಮಾರ್ಗದ ದುರಸ್ತಿಗೆ ಬೇಡಿಕೆ ಮುಂದಿಟ್ಟರು.

ಮಾಜಿ ಅಧ್ಯಕ್ಷ ಎಸ್‌. ಜನಾರ್ದನ ವರದಿಯ ಗುಣಮಟ್ಟ ಹೆಚ್ಚಿಸಬೇಕು, ಅನುಪಾಲನಾ ವರದಿ ನೀಡಬೇಕು, ವಾರ್ಡುವಾರು ಕಾಮಗಾರಿ ವಿವರ ಕೊಡಬೇಕು ಎಂದು ಸಲಹೆಯಿತ್ತರು. ಅಭಿವೃದ್ಧಿ ಅಧಿಕಾರಿ ಹರಿಶ್ಚಂದ್ರ ಆಚಾರ್ಯ ಸ್ವಾಗತಿಸಿ, ಪ್ರಥಮ ಸುತ್ತಿನ ಗ್ರಾಮಸಭೆಯ ವರದಿ ಮಂಡಿಸಿದರು. ಕರ ಸಂಗ್ರಾಹಕ ಶೇಖರ್‌ ಮರವಂತೆ ವಾರ್ಡ್‌ಸಭೆಯ ನಡಾವಳಿ, ಪ್ರಸಕ್ತ ಸಾಲಿನ ಕ್ರಿಯಾಯೋಜನೆ ಹಾಗೂ ಪ್ರಗತಿಯ ವಿವರ ನೀಡಿದರು.ಉಪಾಧ್ಯಕ್ಷ ಗಣೇಶ‌ ಪೂಜಾರಿ, ಸದಸ್ಯರು, ಸಿಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next