Advertisement
ಕೆಲವೆಡೆ ಅಲೆಗಳು ತಡೆಗೋಡೆಯನ್ನು ಕೊರೆದು ಮುನ್ನುಗ್ಗುತ್ತಿವೆ. ಮೀನುಗಾರರು ವಿಶ್ರಾಂತಿಗೆಂದು ನಿರ್ಮಿಸಿಕೊಂಡಿರುವ ತಾತ್ಕಾಲಿಕ ಕಟ್ಟಡಗಳು ಕುಸಿದಿವೆ. ಕೆಲವು ತೆಂಗಿನ ಮರಗಳು ಸಮುದ್ರಪಾಲಾಗುವ ಭೀತಿ ಎದುರಾಗಿದೆ.
ಇಲ್ಲಿ ಇಂತಹ ಸ್ಥಿತಿ ನಿರ್ಮಾಣವಾ ಗಲು ಇನ್ನೂ ಪೂರ್ಣಗೊಳ್ಳದ ಬಂದರು ಕಾಮಗಾರಿ ಕಾರಣ ಎನ್ನುವುದು ಮೀನುಗಾರರ ಅನಿಸಿಕೆ. ಅದರೊಂದಿಗೆ ಇಲ್ಲಿ ಹಿಂದಿನ ವರ್ಷ ರಚಿಸಿದ್ದ ತಾತ್ಕಾಲಿಕ ತಡೆಗೋಡೆಯ ಕಲ್ಲುಗಳನ್ನು ಕಾಮಗಾರಿಯ ಗುತ್ತಿಗೆದಾರರು ತೆಗೆದು ಬಂದರಿನ ಕಾಮಗಾರಿಗೆ ಬಳಸಿಕೊಂಡಿರುವುದೂ ಕಾರಣ ಎನ್ನುತ್ತಾರೆ ಕೆಲವು ಹಿರಿಯರು.ಕಳೆದ 2 ವರ್ಷ ಬಂದರು ಪ್ರದೇಶದ ದಕ್ಷಿಣ ಭಾಗದ ಭೂ ಪ್ರದೇಶ ಹಾನಿಗೀಡಾಗಿತ್ತಲ್ಲದೇ ಬೇಸಗೆಯಲ್ಲೂ ಕಡಲ್ಕೊರೆತದಿಂದ ಹಾನಿ ಸಂಭವಿಸಿತ್ತು. ಈ ಬಾರಿ ಬಂದರಿನ ಪಶ್ಚಿಮದ ತಡೆಗೋಡೆ ಕಾಮಗಾರಿ ಕೆಳಭಾಗ ಮುಂದುವರಿದ ಕಾರಣ ಅಲ್ಲಿ ಅಲೆಗಳ ಅಬ್ಬರ ಕಡಿಮೆಯಾಗಿ ಅಪಾಯ ಉತ್ತರಕ್ಕೆ ಸರಿದಿದೆ.
Related Articles
Advertisement
ಈ ಕುರಿತು ಮೀನುಗಾರರು ಕುಂದಾಪುರ ಉಪ ವಿಭಾಗಾ ಧಿಕಾರಿ ಶಿಲ್ಪಾ ನಾಗ್ ಅವರ ಗಮನ ಸೆಳೆದಿದ್ದು, ಅವರು ಇಲಾಖೆಯ ಎಂಜಿನಿಯರ್ ಮೂಲಕ ಪರಿಹಾರೋಪಾಯ ಕಲ್ಪಿಸುವ ಭರವಸೆ ನೀಡಿದ್ದಾರೆ.