Advertisement
ಕಂಬದಕೋಣೆ ನಿವಾಸಿ ಕರುಣಾಕರ್‌ನನ್ನು ಗಂಗೊಳ್ಳಿ ಪೊಲೀಸರ ತಂಡ ಕಂಬದಕೋಣೆ ಸಮೀಪ ಬಂಧಿಸಿದ್ದರು. ಆರೋಪಿಯನ್ನು ಬೈಂದೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಬಂಧಿತನಿಗೆ ನ್ಯಾಯಾಧೀಶರು 6 ದಿನಗಳ ಪೊಲೀಸ್ ಕಸ್ಟಡಿ ವಿಧಿಸಿದ್ದಾರೆ.
ಕರುಣಾಕರ್ ಮತ್ತು ಆತನ ಅಪ್ರಾಪ್ತ ವಯಸ್ಕ ಪತ್ನಿ ಆ. 9ರಂದು ಮರವಂತೆ ದೇಗುಲಕ್ಕೆ ಭಕ್ತರಂತೆ ಬಂದು ಗರ್ಭಗುಡಿಯೊಳಗೆ ನುಗ್ಗಿ ಕಳ್ಳತನಕ್ಕೆ ಪ್ರಯತ್ನಿಸಿದ್ದರು. ಈ ಸಂಬಂಧ ಬಂಧಿತ ಆರೋಪಿ ಕರುಣಾಕರ್‌ನನ್ನು ವಿಚಾರಣೆ ನಡೆಸಿದಾಗ ಇದರೊಂದಿಗೆ ತಗ್ಗರ್ಸೆ ಗ್ರಾಮದ ಚಂದಣ ಎನ್ನುವಲ್ಲಿನ ಸೋಮಲಿಂಗೇಶ್ವರ ದೇಗುಲ, ಕೊಲ್ಲೂರು ಠಾಣೆ ವ್ಯಾಪ್ತಿಯ ಹೊಸೂರಿನ ದೇವಸ್ಥಾನಕ್ಕೂ ನುಗ್ಗಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ವಿಚಾರಣೆ ಮುಂದುವರಿದಿದ್ದು, ತನಿಖೆಯಲ್ಲಿ ಇನ್ನಷ್ಟು ಹೊಸ ಪ್ರಕರಣಗಳು ಬೆಳಕಿಗೆ ಬಂದರೂ ಬರಬಹುದು. ಕರುಣಾಕರನ ಪತ್ನಿ ಅಪ್ರಾಪ್ತ ವಯಸ್ಕಳಾದ ಕಾರಣ ಆಕೆಯನ್ನು ರಿಮಾಂಡ್ ಹೋಮ್‌ಗೆ ದಾಖಲಿಸಲಾಗಿದೆ.
Related Articles
Advertisement
ಇದನ್ನೂ ಓದಿ : ಉಳ್ಳಾಲ : ಕಿಂಡರ್ ಗಾರ್ಟನ್ ಶಿಕ್ಷಕಿ ಮೃತದೇಹ ಆರೋಗ್ಯ ಕೇಂದ್ರದ ಬಾವಿಯಲ್ಲಿ ಪತ್ತೆ