Advertisement

ಮರವಂತೆ : ಶೀಘ್ರ CRZ ಅನುಮತಿಗೆ ಮನವಿ

11:04 PM Aug 04, 2023 | Team Udayavani |

ಕುಂದಾಪುರ: ಕೇಂದ್ರ ಬಂದರು ಮತ್ತು ಮೀನುಗಾರಿಕೆ ಸಚಿವ ಸರ್ಬಾನಂದ್‌ ಸೋನಾವಾಲ್‌ ಅವರನ್ನು ಹೊಸದಿಲ್ಲಿಯಲ್ಲಿ ಶುಕ್ರವಾರ ಸಂಸದ ಬಿ.ವೈ. ರಾಘವೇಂದ್ರ ಭೇಟಿಯಾಗಿದ್ದಾರೆ. ಈ ವೇಳೆ ಮರವಂತೆ ಹೊರ ಬಂದರಿನ ಎರಡನೇ ಹಂತದ ಕಾಮಗಾರಿಗೆ 85 ಕೋ.ರೂ. ಮಂಜೂರಾಗಿದ್ದು, ಆದರೆ ಸಿಆರ್‌ಝಡ್‌ ಅನುಮತಿ ಸಿಗದೇ, ವಿಳಂಬವಾಗಿದ್ದು, ಶೀಘ್ರ ಅನುಮತಿ ನೀಡಿ, ಕಾಮಗಾರಿ ಆರಂಭಿಸಲು ಅನುಕೂಲ ಮಾಡಿಕೊಡುವಂತೆ ಮನವಿ ಸಲ್ಲಿಸಿದರು.

Advertisement

ಇತ್ತೀಚೆಗೆ ದೋಣಿ ದುರಂತದಲ್ಲಿ ಇಬ್ಬರು ಮೀನುಗಾರರು ಮೃತಪಟ್ಟ ಉಪ್ಪುಂದದಲ್ಲಿ ದೋಣಿಗಳ ಸುರಕ್ಷಿತ ಇಳಿದಾಣಕ್ಕೆ ಬ್ರೇಕ್‌ ವಾಟರ್‌ ಹಾಗೂ ಕಿರು ಬಂದರು ಮಂಜೂರು ಮಾಡುವಂತೆ ಸಚಿವರನ್ನು ಇದೇ ವೇಳೆ ಅವರು ಒತ್ತಾಯಿಸಿದರು.

ಶೀಘ್ರ ಕೇಂದ್ರದ ಅನುಮೋದನೆ ?
ಇದಲ್ಲದೆ ಬೈಂದೂರಿನಲ್ಲಿ 228.78 ಕೋ.ರೂ. ವೆಚ್ಚದಲ್ಲಿ ಬಹು ಉದ್ದೇಶಿತ ಬಂದರು (ಮಲ್ಟಿ ಪರ್ಪಸ್‌ ಹಾರ್ಬರ್‌) ಅನ್ನು ನಿರ್ಮಾಣ ಮಾಡಲು ಖಾಸಗಿ (ಪಿಪಿಪಿ) ಸಹಭಾಗಿತ್ವದಲ್ಲಿ ಟೆಂಡರ್‌ ಕರೆಯಲಾದ್ದರೂ ಯಾವುದೇ ಕಂಪೆನಿ ಭಾಗವಹಿಸಲಿಲ್ಲ. ಹೀಗಾಗಿ ಕೇಂದ್ರ ಸರಕಾರವೇ ಈ ಯೋಜನೆಯನ್ನು ಕೈಗೆತ್ತಿಕೊಂಡು, ಸಂಪೂರ್ಣ 228.78 ಕೋ.ರೂ. ಅನುದಾನವನ್ನು ಭರಿಸಲು ಅವರು ವಿನಂತಿಸಿದರು. ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಕೂಡಲೇ ಅನುಮೋದನೆ ನೀಡುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next