ರಾಮನಗರ: ಅರಣ್ಯ ಕೃಷಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮತ್ತು ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣದ ಉದ್ದೇಶದಿಂದ ಯೆಲ್ಲೋ ಆಂಡ್ ರೆಡ್ ಸಂಸ್ಥೆ ಹಮ್ಮಿಕೊಂಡಿದ್ದ ರಾಮನಗರ ಮ್ಯಾರಾಥಾನ್ ಯಶಸ್ವಿಯಾಯಿತು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಪೊಲೀಸ್, ಗೈಲ್ ಲಿಮಿಟೆಡ್ ಮತ್ತು ಮಹಾರಾಷ್ಟ್ರ ನ್ಯಾಷನಲ್ ಗ್ಯಾಸ್ ಲಿಮಿಟೆಡ್, ಕೆಂಗಲ್ ಹುನುಮಂತಯ್ಯ ಕ್ರೀಡಾ ಮತ್ತು ಸಾಂಸ್ಕೃತಿಕ ಕೇಂದ್ರ, ರೋಟರಿ ಸಿಲ್ಕ್ ಸಿಟಿ, ಶಾಂತಿ ನಿಕೇತನ ಸಮೂಹ ಶಿಕ್ಷಣ ಸಂಸ್ಥೆ, ಗ್ರೀನ್ ಡೈಮಂಡ್ ಸಂಸ್ಥೆಗಳು ಮ್ಯಾರಾಥಾನ್‌ಗೆ ಸಹಯೋಗ ನೀಡಿದ್ದವು.
ಶ್ಲಾಘನೀಯ: ನಗರದ ಹೊರವಲಯದ ಬಸವನಪುರದಲ್ಲಿ ಮ್ಯಾರಾಥಾನ್‌ಗೆ ಚಾಲನೆ ನೀಡಿ ಮಾತ ನಾಡಿದ ಜಿಪಂ ಸಿಇಒ ಇಕ್ರಂ, ಜಿಲ್ಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಮತ್ತು ಅರಣ್ಯ ಕೃಷಿ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಓಟ ಹಮ್ಮಿಕೊಂಡಿರುವುದು ಶ್ಲಾಘನೀಯ. ಪ್ರತಿ ವರ್ಷ ವಿಶಿಷ್ಟವಾದ ಒಂದು ವಿಷಯದಲ್ಲಿ ಮ್ಯಾರಾಥಾನ್ ಹಮ್ಮಿಕೊಳ್ಳುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಶೆಟ್ಟಿ, ರಾಜ್ಯ ಬಿಜೆಪಿ ವಕ್ತಾರ ಅಶ್ವತ್ಥನಾರಾಯಣಗೌಡ, ಮ್ಯಾರ ಥಾನ್ ಓಟದಲ್ಲಿ ಭಾಗಿಯಾಗಿದ್ದರು.
ಸಾವಯವ ಕೃಷಿ ಮಾಡಿ:ಸಾವಯವ ಕೃಷಿಯಿಂದ ಬೆಳೆದ ಆಹಾರ ಪದಾರ್ಥ ಸೇವಿಸುವುದರಿಂದ ಕ್ಯಾನ್ಸರ್‌ನಂತಹ ಖಾಯಿಲೆಗಳಿಗೆ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ, ಸಾವಯವ ಆಹಾರಕ್ಕಾಗಿ ವಿಶ್ವದಲ್ಲಿ ಇಂದು ಶೇ.30 ಬೇಡಿಕೆ ಹೆಚ್ಚಾಗಿದೆ. ಸಾಂಪ್ರದಾಯಿಕ ಕೃಷಿಗೆ ಹೋಲಿಸಿದರೆ ಅರಣ್ಯ ಕೃಷಿಯಿಂದ 7 ವರ್ಷಗಳಲ್ಲಿ 3 ಪಟ್ಟು ಹೆಚ್ಚು ಲಾಭಗಳಿಸಬಹುದು. ಹೆಕ್ಟೇರ್‌ಗೆ 450 ಉದ್ಯೋಗ ದಿನಗಳನ್ನು ಸೃಷ್ಟಿಸುವ ಸಾಮರ್ಥ್ಯ ಈ ಪದ್ಧತಿಗಿದೆ. ಭಾರತ ಈ ನೀತಿಯನ್ನು 2015ರಲ್ಲೇ ಅಳವಡಿಸಿ ಕೊಂಡಿದೆ. ಸುಸ್ಥಿರ ಆಹಾರ ಸುರಕ್ಷತೆ, ಅಪಾಯಕಾರಿ ಕಾಯಿಲೆಗಳಿಂದ ಮುಕ್ತ, ಪ್ರಾಣಿ ಪಕ್ಷಿಗಳ ಆವಾಸ ಸ್ಥಾನಗಳ ರಕ್ಷಣೆ, ನೀರಿನ ಸಂಪನ್ಮೂಲ ಹೆಚ್ಚಿಸಲು ಅರಣ್ಯ ಕೃಷಿ ಪದ್ಧತಿಯಿಂದ ಮಾತ್ರ ಸಾಧ್ಯ. ಆದರೆ ಈ ಬಗ್ಗೆ ಜಾಗೃತಿ ಅಗತ್ಯವಿದ್ದರಿಂದ ತಮ್ಮ ಸಂಸ್ಥೆ ಈ ಬಾರಿ ಇದೇ ವಿಷಯವನ್ನು ಇರಿಸಿ ಕೊಂಡು ಮ್ಯಾರಥಾನ್ ಆಯೋಜಿಸಿರುವುದಾಗಿಯೆ ಲ್ಲೋ ಅಂಡ್ ರೆಡ್ ಪದಾಧಿಕಾರಿಗಳು ತಿಳಿಸಿದರು.
ಎಂದಿನಂತೆ ಈ ಬಾರಿಯೂ ರೂರಲ್ 7 ಕಿ. ಮೀ. ಓಟ, ವಿದ್ಯಾರ್ಥಿ 7 ಕಿ.ಮೀ. ಓಟ, ಹಿರಿಯರ 7 ಕಿ.ಮೀ. ಓಟ, ರಾಕ್ 11 ಕಿ.ಮೀ ಓಟ, ರೀಡಿಫೈನ್ 21.1 ಕಿ.ಮೀ ಓಟ ನಡೆಯಿತು. ಬಸವನಪು ರದಲ್ಲಿ ಆರಂಭ ವಾದ ಮ್ಯಾರಥಾನ್ ಓಟ, ವಡೇರ ಹಳ್ಳಿ, ರಾಂಪುರ ದೊಡ್ಡಿ, ಗೋಪಾಲಪುರ, ದಾಸೇಗೌ ಡನ ದೊಡ್ಡಿ ಮಾರ್ಗವಾಗಿ ಹುಣಸನಹಳ್ಳಿ ತಲುಪಿ ವಾಪ ಸ್‌ಅದೇ ಮಾರ್ಗ ದಲ್ಲಿ ಬಸವನಪುರದಲ್ಲಿ ಅಂತ್ಯವಾಯಿತು.