ಮೈಸೂರು: ಕ್ಯಾನ್ಸರ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನೂರಾರು ಯುವಕ-ಯುತಿಯರು ಭಾನುವಾರ ಮುಂಜಾನೆ ನಗರದಲ್ಲಿ ಜಾಗೃತಿ ಜಾಥಾ ಹಾಗೂ ಮ್ಯಾರಥಾನ್ ಮೂಲಕ ಹೆಜ್ಜೆಹಾಕಿದರು.
ಅಮೆರಿಕಾದ ಅಕ್ಕ ಸಂಸ್ಥೆಯು ನಗರದ ರೋಟರಿ ಸಂಸ್ಥೆ, ನಾರಾಯಣ ಹೃದಯಾಲಯ, ಜಿಎಸ್‌ಎಸ್ ಸಂಸ್ಥೆ ಸಹಯೋಗದಲ್ಲಿ ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ರೋಟರಿ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು. ಜಾಗೃತಿ ಜಾಥಾದಲ್ಲಿ ಪಾಲ್ಗೊಂಡ ಯುವ ಜನರು, ಕ್ಯಾನ್ಸರ್‌ಗೆ ಹೆದರ ಬೇಕಿಲ್ಲ, ಆತ್ಮಸ್ಥೆçರ್ಯದಿಂದ ಬದುಕಿ ತೋರಿಸಬಹುದು ಎಂಬ ಸಂದೇಶ ಸಾರುತ್ತಾ, ನಗರದ ಪ್ರಮುಖ ಕಡೆಗಳಲ್ಲಿ ಸಂಚರಿಸಿದರು.
ಮನುಷ್ಯ ಸಂಕುಲಕ್ಕೆ ಮಾರಕ: ಇದೇ ವೇಳೆ ಮಾತನಾಡಿದ ಯದುವೀರ್ ಒಡೆಯರ್, ಕ್ಯಾನ್ಸರ್ ಮನುಷ್ಯನ ಸಂಕುಲಕ್ಕೆ ಮಾರಕವಾಗಿದ್ದು, ಉತ್ತಮ ಚಿಕಿತ್ಸೆ ಕೊಡಿಸುವ ಜತೆಗೆ ಅವರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕಿದೆ. ಇದರಿಂದ ಕ್ಯಾನ್ಸರ್‌ನಿಂದ ಬಳಲುವವರಿಗೆ ಧೈರ್ಯ ಮತ್ತು ಆತ್ಮಸ್ಥೆçರ್ಯ ತುಂಬಬೇಕಿದ್ದು, ಇದಕ್ಕಾಗಿ ಇಂತಹ ಜಾಗೃತಿ ಜಾಥಾ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಜೆಎಲ್‌ಬಿ ರಸ್ತೆಯಲ್ಲಿರುವ ರೋಟರಿ ಸಂಸ್ಥೆ ಆವರಣದಿಂದ ಆರಂಭಗೊಂಡ ಜಾಗೃತಿಜಾಥಾ ಹಾಗೂ ವಾಕ್‌ಥಾನ್ ವೀವೆಕಾನಂದ ಸ್ಮಾರಕ, ನಾರಾಯಣ ಶಾಸಿŒ ರಸ್ತೆ, ಶಾಂತಲ ಚಿತ್ರಮಂದಿರ ರಸ್ತೆ, 100 ಅಡಿ ರಸ್ತೆ, ಚಾಮರಾಜ ಜೋಡಿರಸ್ತೆ, ರಾಮಸ್ವಾಮಿ ವೃತ್ತ, ಮಹಾರಾಜ ಕಾಲೇಜು ಮೈದಾನ, ಕೌಟಿಲ್ಯ ವೃತ್ತ ಮೂಲಕ ಮುಡಾ ವೃತ್ತದಲ್ಲಿ ಮುಕ್ತಾಯಗೊಂಡಿತು.
ಈ ಸಂದರ್ಭದಲ್ಲಿ ಅಕ್ಕ ಸಂಸ್ಥೆ ಅಧ್ಯಕ್ಷ ಶಿವಮೂರ್ತಿ ಕಿಲಾರ, ಸಂಸದ ಪ್ರತಾಪ್ ಸಿಂಹ, ಶಾಸಕ ಜಿ.ಟಿ.ದೇವೇಗೌಡ, ರಾಜ್ಯಮಟ್ಟದ ಬ್ಯಾಡ್ಮಿಂಟನ್ ಆಟಗಾರ ದರ್ಶನ್ ಪುಟ್ಟಣಯ್ಯ, ಭಾರತ್ ಕ್ಯಾನ್ಸರ್ ಆಸ್ಪತ್ರೆ ವೈದ್ಯ ಡಾ. ಅಜಯ್‌ಕುಮಾರ್ ಸೇರಿದಂತೆ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸೇರಿದಂತೆ 350ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
ನಮ್ಮ ಅಜ್ಜಿ ಗಾಯತ್ರಿದೇವಿ ಅವರು ಕ್ಯಾನ್ಸರ್‌ನಿಂದ ತೀರಿ ಹೋದರು. ಕಾನ್ಸರ್ ಎಷ್ಟು ಮಾರಕ ಮತ್ತು ಅದರ ಪರಿಣಾಮವೇನು ತಿಳಿದಿದೆ. ಈ ಕ್ಯಾನ್ಸರ್ ಎಲ್ಲರನ್ನು ಒಂದಲ್ಲ ಒಂದು ರೀತಿಯಾಗಿ ಕಾಡಲಿದ್ದು, ಆದರಿಂದ ನಾನು ವೈಯಕ್ತಿಕವಾಗಿ ಆಸಕ್ತಿಯಿಂದ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ.
-ಯದುವೀರ್ ಒಡೆಯರ್, ರಾಜವಂಶಸ್ಥ.