ಮಹಾರಾಷ್ಟ್ರ: ವೇದಿಕೆಯಲ್ಲೇ ಕುಸಿದು ಬಿದ್ದು ಮರಾಠಿ ಸಿನಿಮಾರಂಗ ಹಾಗೂ ಕಿರುತೆರೆ ಲೋಕದ ಹಿರಿಯ ನಟರೊಬ್ಬರು ನಿಧನರಾಗಿದ್ದಾರೆ.
ಭಾನುವಾರದ(ಮೇ.12 ರಂದು) ಹಿರಿಯ ನಟ ಸತೀಶ್ ಜೋಶಿ ನಿಧನ ಹೊಂದಿದ್ದಾರೆ. ಪ್ರತಿಭಾವಂತ ಕಲಾವಿದನ ಹಠಾತ್ ನಿಧನಕ್ಕೆ ಮರಾಠಿ ಸಿನಿಮಾರಂಗ ಆಘಾತಕ್ಕೆ ಒಳಗಾಗಿದೆ.
ಸತೀಶ್ ಜೋಶಿ ಅವರ ನಿಧನದ ಸುದ್ದಿಯನ್ನು ಅವರ ಸ್ನೇಹಿತ ರಾಜೇಶ್ ದೇಶಪಾಂಡೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
“ನಮ್ಮ ಹಿರಿಯ ಸ್ನೇಹಿತ ನಟ ಸತೀಶ್ ಜೋಶಿ ಇಂದು ರಂಗೋತ್ಸವದ ವೇದಿಕೆಯಲ್ಲಿ ನಿಧನರಾದರು. ಅವರು ಮಧ್ಯಂಡಿ ಬ್ರಾಹ್ಮಣ ಸಭಾದ ಗಿರ್ಗಾಂವ್ ಥಿಯೇಟರ್ ಹೋಗಿದ್ದರು. ಅಲ್ಲಿ ಅವರ ಪ್ರದರ್ಶನವೂ ಇತ್ತು. ಅವರ ಪಾತ್ರ ಪ್ರದರ್ಶನದ ವೇಳೆ ಅವರು ವೇದಿಕೆಯಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನುಆಸ್ಪತ್ರೆಗೆ ಸಾಗಿಸಲಾಗಿದ್ದರೂ ಕೆಲವೇ ನಿಮಿಷದ ಒಳಗೆ ಅವರು ಕೊನೆಯುಸಿರೆಳೆದರು” ಎಂದು ರಾಜೇಶ್ ಬರೆದುಕೊಂಡಿದ್ದಾರೆ.
ಮರಾಠಿ ಸಿನಿಮಾರಂಗದ ಖ್ಯಾತ ನಟರಾಗಿ ಗುರುತಿಸಿಕೊಂಡಿದ್ದ ಜೋಶಿ ರಂಗಭೂಮಿ, ಸಿನಿಮಾ ಹಾಗೂ ಕಿರುತೆರೆಯಲ್ಲಿ ದೊಡ್ಡ ಹೆಸರು ಮಾಡಿದ್ದರು.
ಜೀ ಮರಾಠಿಯಲ್ಲಿ ಪ್ರಸಾರ ಕಾಣುತ್ತಿದ್ದ ʼ ಭಾಗ್ಯಲಕ್ಷ್ಮಿʼ ಧಾರಾವಾಹಿಯಲ್ಲಿನ ಅವರ ಅಭಿನಯ ಮಹಾರಾಷ್ಟ್ರದ ಪ್ರತಿ ಮನೆ ಮಂದಿಯ ಪ್ರೀತಿಯನ್ನು ಗಳಿಸಿತ್ತು. ಸಾಹಿತ್ಯ ಸಂಘದ ಸಾಹಿತ್ಯ ಸಂಘದ ʼಮಚ್ಚಕಟಿಕʼ ನಾಟಕದಲ್ಲಿ ಪಾತ್ರವನ್ನು ಮಾಡಿದ್ದಾರೆ.
ಅವರ ಹಠಾತ್ ನಿಧನಕ್ಕೆ ಮರಾಠಿ ಸಿನಿಮಾರಂಗದ ಆಘಾತಕ್ಕೆ ಒಳಗಾಗಿದ್ದು, ಅನೇಕರು ಸಂತಾಪ ಸೂಚಿಸಿದ್ದಾರೆ.