Advertisement

ಖಾನಾಪುರ ಶಿಕ್ಷಣ ಇಲಾಖೆಯಲ್ಲಿ ಮರಾಠಿಗೆ ಅಗ್ರಸ್ಥಾನ!

06:03 PM Dec 20, 2021 | Team Udayavani |

ಖಾನಾಪುರ: ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿನ ಶೈಕ್ಷಣಿಕ ತಿಳಿವಳಿಕೆ ಫಲಕಗಳಲ್ಲಿ ಅಧಿಕಾರಿಗಳು ಮರಾಠಿ ಭಾಷೆಗೆ ಅಗ್ರಸ್ಥಾನ ನೀಡಿದ್ದು ಕನ್ನಡ ಶಿಕ್ಷಕರು, ಕನ್ನಡಾಭಿಮಾನಿಗಳು ಹಾಗೂ ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

Advertisement

ಅಧಿವೇಶನಕ್ಕೆ ಆಗಮಿಸಿರುವ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ಪಡೆದುಕೊಳ್ಳುವ ಭರದಲ್ಲಿ ಆಡಳಿತ ಭಾಷೆ ಕನ್ನಡ ಕಡೆಗಣಿಸಲಾಗಿದೆ. ಇದರಿಂದ ಬಿಇಒ ಕಚೇರಿ ಕರ್ನಾಟಕಕಕ್ಕೆ ಸೇರಿಧ್ದೋ ಇಲ್ಲವೇ ಮಹಾರಾಷ್ಟ್ರದಲ್ಲಿ ಇದೆಯೋ ಎನ್ನುವ ಪ್ರಶ್ನೆ ಕೂಡ ಎದುರಾಗಿದೆ. ಕನ್ನಡಕ್ಕೆ ಪ್ರಥಮ ಸ್ಥಾನ ನೀಡದೆ ಮರಾಠಿ ಭಾಷೆಗೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಾದರೂ ಏನಿತ್ತು ಎನ್ನುವ ಪ್ರಶ್ನೆ ಕೂಡ ಎದುರಾಗಿದೆ.

ವಿದ್ಯಾರ್ಥಿಗಳಿಗೆ ವಿಜ್ಞಾನ-ಗಣಿತ ವಿಷಯಗಳ ನಿಯಮಗಳನ್ನು ಸರಳವಾಗಿ ತಿಳಿಸಲು ಸಿದ್ಧಪಡಿಸಿರುವ ಫಲಕಗಳನ್ನು ಕಚೇರಿ ಆವರಣದಲ್ಲಿ ಅಳವಡಿಸಲಾಗಿದೆ. ಕಚೇರಿಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಸರ್ಕಾರ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ, ಹೆಚ್ಚುವರಿ ಆಯುಕ್ತ ಎಸ್‌.ಎಸ್‌ .ಬಿರಾದರ ಭೇಟಿ ನೀಡಿ ಹೋಗಿದ್ದಾರೆ. ಅವರುಕೂಡಕನ್ನಡಕ್ಕೆ ಫಲಕದಲ್ಲಿ ದ್ವೀತಿಯ ಸ್ಥಾನ ನೀಡಿದ್ದನ್ನು ಗಮನಿಸಿದರೂ ಆಕ್ಷೇಪಿಸಿಲ್ಲ. ಸರ್ಕಾರ ಈ ಫಲಕಗಳನ್ನು ಸಿದ್ಧಪಡಿಸಲು ಯಾವುದೇ ಅನುದಾನ ನೀಡಿಲ್ಲ.

ಅಧಿಕಾರಿಗಳು ಅನುದಾನಿತ ಶಾಲಾ ಶಿಕ್ಷಕರ ಸಹಕಾರ ಪಡೆದು ಫಲಕ ಸಿದ್ಧಗೊಳಿಸಿದ್ದಾರೆ. ಆದರೆ ಅಧಿಕಾರಿಗಳು ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರ ಸ್ಥಾನ ನೀಡದಿದ್ದರೆ ಗಡಿಯಲ್ಲಿ ಕನ್ನಡ ಭಾಷೆ ಅವನತಿ ಹೊಂದುವದರಲ್ಲಿ ಯಾವ ಸಂಶಯವೂ ಇಲ್ಲ. ರಾಜಕೀಯ ಒತ್ತಾಸೆಗೆ, ತಮ್ಮ ಖುರ್ಚಿ ಭದ್ರತೆಗೆ ಅಧಿಕಾರಿಗಳು ಕನ್ನಡದ ಬಲಿ ಕೊಡುತ್ತ ಬಂದಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next