Advertisement

ಕರ್ನಾಟಕದಿಂದ ಜನ ತಾಳಿದೆ ಮರಾಠಿ ರಂಗಭೂಮಿ

05:49 PM Dec 25, 2021 | Team Udayavani |

ರಬಕವಿ-ಬನಹಟ್ಟಿ: ಕರ್ನಾಟಕದಿಂದ ಮರಾಠಿ ರಂಗಭೂಮಿ ಹುಟ್ಟಿಕೊಂಡಿದೆ ಎಂದು ಹಿರಿಯ ಸಾಹಿತಿ ಸಿದ್ದರಾಜ ಪೂಜಾರಿ ಹೇಳಿದರು. ನಗರದ ಈಶ್ವರಲಿಂಗ ಮೈದಾನದಲ್ಲಿ ಪಿ.ಬಿ. ಧುತ್ತರಗಿ ರಂಗೋತ್ಸವ-2021 ಉದ್ಘಾಟನೆ, ರಂಗಗೀತೆ, ರಂಗ ಗೌರವ, ವಿಚಾರ ಸಂಕಿರಣ ಹಾಗೂ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ರಂಗಗೀತೆಗಳು ಅಂದು-ಇಂದು ಕುರಿತು ಮಾತನಾಡಿದರು.

Advertisement

ಕನ್ನಡ ರಂಗಭೂಮಿ ಪ್ರೇರಣೆಯಿಂದಲೇ ಮರಾಠಿ ರಂಗಭೂಮಿ ಬೆಳೆದದ್ದು ಐತಿಹಾಸಿಕ ಸಂಗತಿಯಾಗಿದೆ. ಕನ್ನಡದ ರಂಗಗೀತೆಗಳು ಮಾಯವಾಗುತ್ತಿರುವುದು ವಿಷಾದನೀಯ. 1980 ರ ನಂತರ ಬಂದ ಚಲನಚಿತ್ರ ಸಂಗೀತದಿಂದ ರಂಗಗೀತೆಗಳು ಹಿನ್ನೆಲೆಗೆ ಬಂದಿವೆ. ಸಂಗೀತಕ್ಕೆ ವಿಶೇಷ ಸ್ಥಾನವಿದೆ. ಸಂಗೀತದ ಬಗ್ಗೆ ಒಲವು ಕಡಿಮೆ ಆಗಿದೆ. ರಂಗಗೀತೆಗಳು ಬದುಕಲು ಅದನ್ನು ಕೇಳುವವರು ಬೇಕು. ರಂಗಗೀತೆಗಳು ಉಳಿಯುವಂತಾಗಲು ಎಲ್ಲರು ಪ್ರಯತ್ನಿಸಬೇಕು.
ರಂಗಗೀತೆಗಳನ್ನು ಪುನಶ್ಚೇತನಗೊಳಿಸುವುದು ಅವಶ್ಯ. ಆ ಕೆಲಸ ಆಗಬೇಕಿದೆ ಆ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಅವಶ್ಯ ಎಂದರು.

ಸಾಹಿತಿ ಡಾ| ಅಶೋಕ ನರೋಡೆ ಮಾತನಾಡಿ, ನಾಟಕ ಒಂದು ಪರಿಣಾಮಕಾರಿ ಮಾಧ್ಯಮ, ನಾಟಕ ಪ್ರತಿಕ್ಷಣ ಹೊಸದನ್ನು ಸೃಷ್ಟಿಸುತ್ತದೆ. ದುತ್ತರಗಿಯವರನ್ನು ನೆನೆಪಿಸುವುದು ಸಂತಸದ ವಿಷಯ. ರಬಕವಿ-ಬನಹಟ್ಟಿಯಲ್ಲಿ ಸಂಗೀತ, ನಾಟಕ, ಸಾಹಿತ್ಯದ ಕಾರ್ಯಕ್ರಮಗಳ ನಿರಂತರವಾಗಿ ನಡೆಯುತ್ತಿರುವುದು ಸಂತಸ ತಂದಿದೆ ಎಂದರು.

ಹಾರುಗೇರಿಯ ಶರಣ ವಿಚಾರ ವಾಹಿನಿಯ ಅಧ್ಯಕ್ಷ ಆಯ್‌. ಆರ್‌. ಮಠಪತಿ ಕಾರ್ಯಕ್ರಮ ಉದ್ಘಾಟಿಸಿದರು. ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಇಳಕಲ್ಲನ ವಿಶ್ವನಾಥ ವಂಶಾಕೃತಮಠ, ಗುಳೇದಗುಡ್ಡದ ಡಾ| ಸಣ್ಣವೀರಣ್ಣ ದೊಡ್ಡಮನಿ, ಕಾನಿಪ ಅಧ್ಯಕ್ಷ ನೀಲಕಂಠ ದಾತಾರ, ಹಿರಿಯ ಸಾಹಿತಿ ಜಯವಂತ ಕಾಡದೇವರ, ಜಿಲ್ಲಾ ಕಸಾಪ ನೂತನ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿದರು.

ಕವಟಗಿಯ ಸಂಗಮೇಶ ಗುರವ, ಬನಹಟ್ಟಿಯ ಶ್ರೀಶೈಲ ಹಲ್ಯಾಳ, ರಾಮಪುರದ ಅರವಿಂದ ರಾಸೂರ ಹಾಗೂ ರಫೀಕ್‌ ಹನಗಂಡಿಯವರಿಗೆ ರಂಗ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಲ್ಲಿಕಾರ್ಜುನ ಹುಲಗಬಾಳಿ, ಜಿ. ಎಸ್‌. ವಡಗಾಂವಿ, ರಾಜಶೇಖರ ಮಾಲಾಪುರ, ಶ್ರೀಶೈಲ ಧಬಾಡಿ, ಶ್ರೀಪಾದ ಬಾಣಕಾರ, ದಾನಪ್ಪ ಹುಲಜತ್ತಿ, ದ್ರಾಕ್ಷಾಯಣಿ ಮಂಡಿ, ಶ್ರೀಕಾಂತ ಕೆಂದೂಳಿ, ಡಾ. ಡಿ. ಎ. ಬಾಗಲಕೋಟ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next