Advertisement

ಗಮನ ಸೆಳೆದ ಮರಾಠಿ ಚಿತ್ರನಟಿ ಸಂಸ್ಕೃತಿ ನೃತ್ಯ ಪ್ರದರ್ಶನ

05:17 PM Jul 12, 2022 | Team Udayavani |

ಸೊಲ್ಲಾಪುರ: ಅಕ್ಕಲಕೋಟ ನಗರದ ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳದ 35ನೇ ವಾರ್ಷಿಕೋತ್ಸವ ಹಾಗೂ ಶ್ರೀ ಗುರುಪೂರ್ಣಿಮೆ ಉತ್ಸವ ಅಂಗವಾಗಿ ಆಯೋಜಿಸಿದ ಧರ್ಮ ಸಂಕೀರ್ತನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮರಾಠಿ ಚಿತ್ರನಟಿ ಸಂಸ್ಕೃತಿ ಬಾಲಗುಡೆ ಅವರ ಭಕ್ತಿರಂಗ ಕಾರ್ಯಕ್ರಮ ನೋಡುಗರ ಗಮನ ಸೆಳೆಯಿತು.

Advertisement

ಅನ್ನಛತ್ರ ಮಂಡಳದ ಸಂಸ್ಥಾಪಕ ಅಧ್ಯಕ್ಷ ಜನ್ಮೇಜಯರಾಜೆ ಭೋಸ್ಲೆ ಅವರ ಮಾರ್ಗದರ್ಶನದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಸ್ಕೃತಿ ಬಾಳ್ಗುಡೆ ಮತ್ತು ಸಹ ಕಲಾವಿದರು “ಭಕ್ತಿರಂಗ’ ಪ್ರಸ್ತುತಪಡಿಸಿದರು.

ಮಾಜಿ ನಗರಸೇವಕ ಅಷ್ಪಾಕ್‌ ಬಾಳೊರ್ಗಿ, ಚಪ್ಪಳಗಾಂವ ಗ್ರಾಪಂ ಅಧ್ಯಕ್ಷ ಉಮೇಶ ಪಾಟೀಲ, ಆರ್‌.ಎಸ್‌.ಪಿ. ಪಕ್ಷಿಮ ಮಹಾರಾಷ್ಟ್ರ ಅಧ್ಯಕ್ಷ ಸುನೀಲ್‌ ಬಂಡಗಾರ್‌, ಆರ್‌ಪಿಐ ಆಠವಲೆ ಬಳಗ ತಾಲೂಕಾ ಅಧ್ಯಕ್ಷ ಅವಿನಾಶ ಮಡಿಖಾಂಬೆ, ಕರ್ಮಳಾ ಪಂಚಾಯತ್‌ ಸಮಿತಿ ಮಾಜಿ ಅಧ್ಯಕ್ಷ ಭಾರತ ಶಿಂಧೆ, ಅನ್ನಛತ್ರ ಮಂಡಳದ ಅಮೋಲರಾಜೆ ಭೋಸ್ಲೆ, ಶ್ರೀ ವಟವೃಕ್ಷ ಸ್ವಾಮಿ ಮಹಾರಾಜ ದೇವಸ್ಥಾನದ ಅಧ್ಯಕ್ಷ ಮಹೇಶ ಇಂಗಳೆ ಭಾಗವಹಿಸಿದ್ದರು. ಖ್ಯಾತ ಮರಾಠಿ ನಟಿ ಸಂಸ್ಕೃತಿ ಬಾಲಗುಡೆ ಮತ್ತು ಸಹ ನಟರಾದ ಕೀರ್ತಿ ಖಲಾಟೆ, ಅಶುತೋಷ್‌ ಪಾಟೀಲ್‌, ಬಾಲಾಜಿ ಗೌಡಗಿರಿ, ರೋಹಿತ್‌, ಕುನಾಲ್‌ ಸಿಂಗ್‌, ಬಾಲಕೃಷ್ಣ ನೆಹರ್ಕರ್‌, ಸಮರ್ಥ ಬಾಲಗುಡೆ, ಸಂಜೀವಿನಿ ಬಾಲಗುಡೆ ಅವರು ಗಣೇಶ್‌ ವಂದನ, ಜೋಗ್ವಾ, ಪುಷ್ಪ ಅವರ ನೃತ್ಯ ಕಾರ್ಯಕ್ರಮಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next