Advertisement

Maratha: ಮೀಸಲು ಬಿಕ್ಕಟ್ಟು; ಸಿಎಂ ಶಿಂಧೆಗೆ ಇಕ್ಕಟ್ಟು

12:27 AM Sep 06, 2023 | Team Udayavani |

ಮುಂಬಯಿ: ಮರಾಠ ಮೀಸಲು ಕುರಿತಂತೆ ಮಹಾ ರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರವು ಸಿಎಂ ಏಕನಾಥ ಶಿಂಧೆ ನೇತೃತ್ವದ ಶಿವಸೇನೆ-ಬಿಜೆಪಿ ಮೈತ್ರಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಪ್ರತಿಭಟನಕಾರರ ಮೇಲಿನ ಲಾಠಿ ಚಾರ್ಜ್‌ಗೆ ಡಿಸಿಎಂ, ಗೃಹಸಚಿವ ದೇವೇಂದ್ರ ಫ‌ಡ್ನವೀಸ್‌ರನ್ನು ವಿಪಕ್ಷಗಳು ಗುರಿಯಾ ಗಿಸಿದರೆ, ಇತ್ತ ಶಿಂಧೆ ತಮ್ಮ ಸರಕಾರದ ಮೇಲಿನ ಆರೋಪಗಳನ್ನು ಬದಿಗಿರಿಸಿ, ಪ್ರತಿಭಟನಕಾರರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಸಮಸ್ಯೆ ಶಮನಗೊಳಿಸಲು ಹೆಣ ಗಾ ಡುತ್ತಿದ್ದಾರೆ. ಈ ನಡುವೆ ಇತ್ತೀಚೆಗಷ್ಟೇ ಮೈತ್ರಿಕೂಟಕ್ಕೆ ಸೇರಿದ ಅಜಿತ್‌ ಪವಾರ್‌ ಅವರ ವಿರದ್ಧವೂ ಪ್ರತಿಭಟನೆ ಹೆಸರಿನಲ್ಲೇ ವಿಪಕ್ಷಗಳು ರಾಜಕೀಯ ದಾಳ ಉರುಳಿಸಲು ಮುಂದಾಗಿವೆ.

Advertisement

ಪ್ರತಿಭಟನಕಾರರ ಮೇಲೆ ಪೊಲೀಸರು ನಡೆಸಿದ ಲಾಠಿ ಚಾರ್ಜ್‌ಗೆ ವಿಪಕ್ಷಗಳು ಸರಕಾರವೇ ನೇರ ಹೊಣೆ ಎಂದು ಆರೋಪಿಸಿದ್ದವು. ಈ ಹಿನ್ನೆಲೆಯಲ್ಲಿ ಗೃಹ ಸಚಿವರಾದ ಫ‌ಡ್ನವೀಸ್‌ ಪೊಲೀಸರ ಪರವಾಗಿ ತಾವೇ ಕ್ಷಮೆಯಾಚಿಸಿದರು. ಆದರೂ ವಿವಾದ ಬಗೆಹರಿಯಲು ಬಿಡದ ಎನ್‌ಸಿಪಿ ಹಾಗೂ ಉದ್ಧವ್‌ ಬಣದ ನಾಯಕರು ಫ‌ಡ್ನವೀಸ್‌ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಪೊಲೀಸರು ಲಾಠಿ ಚಾರ್ಜ್‌ ನಡೆಸಲು ಸಚಿವಾಲಯದಿಂದ ಅದೇಶ ಬಂದಿರಲೇಬೇಕು ಅಥವಾ ಉನ್ನತಾಧಿಕಾರಿಗಳ ಆದೇಶವಿಲ್ಲದೇ ಕ್ರಮ ತೆಗದುಕೊಂಡಿದ್ದಾರೆಂದರೆ ಅಲ್ಲಿಗೆ ಗೃಹ ಸಚಿವರಿಗೆ ಆಡಳಿತದ ಮೇಲೆ ಹಿಡಿತವಿಲ್ಲವೆಂದೇ ಅರ್ಥ ಈ ಹಿನ್ನೆಲೆಯಲ್ಲಿ ತಪ್ಪನ್ನು ಒಪ್ಪಿಕೊಂಡು ಫ‌ಡ್ನವೀಸ್‌ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ಇತ್ತ ಅಜಿತ್‌ ಪವಾರ್‌ ಅವರ ಸ್ವಗ್ರಾಮ ಬಾರಾಮತಿಯಲ್ಲಿ ಪ್ರತಿಭಟನೆಕಾರರ ಜಮಾಯಿಸಿ, ಸರಕಾರದಿಂದ ಅಜಿತ್‌ ಹೊರಬರ ಬೇಕೆಂದು ಆಗ್ರಹಿಸಿದ್ದಾರೆ. ಎನ್‌ಸಿಪಿ ನಾಯಕ ಶರದ್‌ ಪವಾರ್‌ ಕೂಡ ಶಾಂತಿಯುತ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್‌ ಮಾಡಿಸಿದ್ದು ತಪ್ಪು ಎಂದು ಸರಕಾರದತ್ತ ಕಲ್ಲು ಎಸೆದಿದ್ದಾರೆ. ಇದೆಲ್ಲದರಿಂದ ಸರಕಾರ ಇಕ್ಕಟ್ಟಿಗೆ ಸಿಲುಕುವಂತಾಗಿದೆ. ಆದಾಗ್ಯೂ, ಬಿಕ್ಕಟ್ಟು ಶಮನ ಗೊಳಿಸಲು ಸಿಎಂ ಶಿಂಧೆ ಮತ್ತೆ ಪ್ರತಿಭಟನಕಾರರ ಬೇಡಿಕೆಯತ್ತ ವಾಲಿದ್ದು, ಮರಾಠ ಮೀಸಲಾತಿ ಸಮಸ್ಯೆ ಶೀಘ್ರ ಪರಿಹರಿಸ ಲಾಗುವುದು, ಈ ಸಂಬಂಧಿಸಿ ಸಮಿತಿಗೆ ಮುಂದಿನ 1 ತಿಂಗಳ ಒಳಗೆ ಶಿಫಾರಸು ನೀಡಲು ಆದೇಶಿಸಲಾಗಿದೆ. ಸರಕಾರ ಕೂಡ ಮರಾಠರ ಮೀಸಲಾತಿ ಬೇಡಿಕೆಯ ಪರವಿದೆ ಎಂದು ಹೇಳಿಕೆ ನೀಡುವ ಮೂಲಕ ಸರಕಾರ ಉಳಿಸಿಕೊಳ್ಳಲು ಮುಂದಡಿ ಇಟ್ಟಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next