Advertisement

Maratha; 17 ದಿನದ ನಿರಶನ ಕೈಬಿಟ್ಟ ಮೀಸಲು ಹೋರಾಟಗಾರ

12:25 AM Feb 27, 2024 | Team Udayavani |

ಮುಂಬಯಿ: ಮರಾಠಾ ಮೀಸಲು ಹೋರಾಟಗಾರ ಮನೋಜ್‌ ಜಾರಂಗೆ ಅವರು ತಮ್ಮ 17 ದಿನಗಳ ಅನಿರ್ದಿಷ್ಟಾವಧಿ ನಿರಶನವನ್ನು ಸೋಮವಾರ ಕೊನೆಗೊಳಿಸಿದ್ದಾರೆ. ಮಹಾಸರಕಾರವು ಕುಣಬಿ ಜಾತಿ ಪ್ರಮಾಣಪತ್ರ ವಿತರಣೆ ಆರಂಭಿಸದಿದ್ದರೆ ಹೋರಾಟ ಮುಂದುವರಿಸುವುದಾಗಿಯೂ ಘೋಷಿಸಿದ್ದಾರೆ.

Advertisement

ಬೀಡ್‌ ಜಿಲ್ಲೆಯಲ್ಲಿ ಜಾರಂಗೆ ಅವರ ಬೆಂಬಲಿಗರು ಸೋಮವಾರ ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿದ್ದಲ್ಲದೇ, ಎರಡು ಕಡೆ ರಸ್ತೆ ತಡೆ ನಡೆಸಿದ್ದ ಹಿನ್ನೆಲೆಯಲ್ಲಿ ಜಾರಂಗೆ ವಿರುದ್ಧ 2 ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದರು. ಇದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಇದಕ್ಕೂ ಮುನ್ನ, ಜಾರಂಗೆ ನಿರಶನ ನಡೆಸುತ್ತಿದ್ದ ಜಲಾ° ಜಿಲ್ಲೆಯ ಅಂಬದ್‌ ತಾಲೂಕಿನಲ್ಲಿ ಸರಕಾರ ಕರ್ಫ್ಯೂ ಜಾರಿ ಮಾಡಿತ್ತು. ಜಲಾ°, ಸಂಭಾಜಿನಗರ, ಬೀಡ್‌ ಜಿಲ್ಲೆಗಳಲ್ಲಿ ಅಂತರ್ಜಾಲ ಸ್ಥಗಿತಗೊಳಿಸಿ, ಗಡಿಗಳನ್ನು ಮುಚ್ಚಲಾಗಿತ್ತು. ಕಾನೂನು ಸುವ್ಯವಸ್ಥೆ ಜಾರಿ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next