Advertisement
ದೇಗುಲದ ಆನುವಂಶೀಯ ಮೊಕ್ತೇಸರ ಸಿ. ಸದಾಶಿವ ಶೆಟ್ಟಿ ಹಾಗೂ ಚಿತ್ತೂರು ಗುಡಿಕೇರಿ ಮನೆಯವರು ಸಂಕಲ್ಪದಲ್ಲಿ ಪಾಲ್ಗೊಂಡರು. ಮುಖ್ಯ ಅರ್ಚಕ ವಿಘ್ನೇಶ್ವರ ಮಂಜರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು. ಕುಂದಾಪುರ ಹಾಗೂ ಉಡುಪಿ ತಾಲೂಕುಗಳಿಂದ ಆಗಮಿಸಿದ 40,000ಕ್ಕೂ ಅಧಿಕ ಭಕ್ತರು ಪಾಲ್ಗೊಂಡರು.
ಭಕ್ತರು ಬುಟ್ಟಿಯಲ್ಲಿ ಸೇವಂತಿಗೆ ಹಾಗೂ ಸಿಂಗಾರವನ್ನು ತಲೆಯಲ್ಲಿ ಹೊತ್ತು ಶ್ರೀ ದೇವರಿಗೆ ಸಮರ್ಪಿಸುತ್ತಿದ್ದುದು ಗಮನಾರ್ಹ ವಾಗಿತ್ತು. ದೇಗುಲ ದಿಂದ 4 ಕಿ.ಮೀ. ದೂರದವರೆಗೆ ಭಕ್ತರು ಸರತಿಯಲ್ಲಿ ಮುಂಜಾನೆಯಿಂದಲೇ ಸೇವೆಗಾಗಿ ಕಾದು ನಿಂತಿದ್ದರು.
ಮಾರಣಕಟ್ಟೆಯ ಮಕರ ಸಂಕ್ರಮಣ ಉತ್ಸವವು ಜ.14ರಿಂದ ಜ. 16ರ ವರೆಗೆ ನಡೆಯಲಿದ್ದು, ಜ.15ರಂದು ಮಂಡಲ ಸೇವೆ ಜರಗಲಿದೆ. ಸಂಕ್ರಮಣದ ಮಹಾಪೂಜೆಯಲ್ಲಿ ಆಡಳಿತ ಮೊಕ್ತೇಸರ ಸಿ. ಸದಾಶಿವ ಶೆಟ್ಟಿ, ಶಾಸಕ ಕೆ. ಗೋಪಾಲ ಪೂಜಾರಿ, ಉದ್ಯಮಿ ಕೃಷ್ಣಮೂರ್ತಿ ಮಂಜ, ಕೊಲ್ಲೂರು ದೇಗುಲದ ಮಾಜಿ ಆಡಳಿತ ಧರ್ಮದರ್ಶಿ ಬಿ.ಎಂ. ಸುಕುಮಾರ ಶೆಟ್ಟಿ, ವಂಡಬಳ್ಳಿ ಜಯರಾಮ ಶೆಟ್ಟಿ, ಸಿ. ರಘುರಾಮ ಶೆಟ್ಟಿ, ಸಿ. ದಿನಕರ ಶೆಟ್ಟಿ, ಸಿ. ಜಯಂತ ಶೆಟ್ಟಿ, ಸಿ. ಶಂಕರ ಶೆಟ್ಟಿ, ನ್ಯಾಯವಾದಿ ಸರ್ವೋತ್ತಮ ಶೆಟ್ಟಿ, ಗೋವರ್ಧನ ಶೆಟ್ಟಿ, ಸುರೇಂದ್ರ ಶೆಟ್ಟಿ, ಮಾಜಿ ಮೊಕ್ತೇಸರ ಮಂಜಯ್ಯ ಶೆಟ್ಟಿ, ಎನ್. ಶಿವರಾಮ ಶೆಟ್ಟಿ, ಕೆ. ಶಂಕರ ಶೆಟ್ಟಿ, ನಾರಾಯಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.