Advertisement

5-6 ರಂದು ಮಾರಮ್ಮ ದೇವಿ ದೇಗುಲ ಲೋಕಾರ್ಪಣೆ

04:53 PM Dec 03, 2019 | Suhan S |

ಭರಮಸಾಗರ: ಚಿತ್ರದುರ್ಗ ತಾಲೂಕಿನ ಐನಹಳ್ಳಿ ಕುರುಬರಹಟ್ಟಿ ಗ್ರಾಮದಲ್ಲಿ ಡಿ. 5 ಮತ್ತು 6 ರಂದು ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಮಾರಮ್ಮ ದೇವಿಯ ದೇಗುಲ ಲೋಕಾರ್ಪಣೆ ಮತ್ತು ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ನಡೆಯಲಿದೆ.

Advertisement

ಡಿ. 5 ರಂದು ಬೆಳಿಗ್ಗೆ 5 ರಿಂದ 10:30 ರವರೆಗೆ ಗಂಗಾಪೂಜೆ, ಪುಣ್ಯಾಹ, ರಕ್ಷಾಬಂಧನ, ಸರ್ವದೇವತೆಗಳ ಅವಾಹನೆ, ಕಳಸಾರೋಹಣ, ಹೋಮಾದಿಗಳು,ಮಹಾಮಂಗಳಾರತಿ ನಡೆಯಲಿದೆ. ಸಂಜೆ 6:30ಕ್ಕೆ ಹೋಮಗಳು, ವಾಸಾದಿಗಳು, ಮಹಾ ಮಂಗಳಾರತಿ ಮತ್ತು ರಾತ್ರಿ 10:30ಕ್ಕೆ ಪ್ರತಿಷ್ಠಾಪನಾ ಪೂರ್ವ ಸಿದ್ಧತೆ ಕಾರ್ಯಗಳಿವೆ.

ಡಿ. 6 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ನಿರಂಜನಾನಂದಪುರಿ ಸ್ವಾಮೀಜಿ ಹಾಗೂ ಹೊಸದುರ್ಗ ಕನಕ ಗುರುಪೀಠದ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಸಾನ್ನಿಧ್ಯವಹಿಸುವರು.

ಮುಖ್ಯ ಅತಿಥಿಗಳಾಗಿ ಶಾಸಕಜಿ.ಎಚ್‌. ತಿಪ್ಪಾರೆಡ್ಡಿ, ಸಂಸದ ಎ. ನಾರಾಯಣಸ್ವಾಮಿ, ಜಿಪಂ ಸದಸ್ಯ ಕೃಷ್ಣಮೂರ್ತಿ, ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌, ತಾಪಂ ಸದಸ್ಯ ಪರಮೇಶ್‌,ಗ್ರಾಪಂ ಅಧ್ಯಕ್ಷ ಚಂದ್ರಶೇಖರಪ್ಪ, ಸದಸ್ಯರಾದ ಉಮೇಶ್‌, ವೆಂಕಟೇಶ್‌, ಶಿವಮ್ಮ ಪಾಲ್ಗೊಳ್ಳುವರು. ಇದಕ್ಕೂ ಮುನ್ನ ರತ್ನ ನಿಕ್ಷೇಪಾ ಪೀಠಬಂಧ, ಪ್ರಾಣ ಪ್ರತಿಷ್ಠಾಪನೆ, ನೇತ್ರೋನಿಲನ, ಬಿಂಬ ದರ್ಶನ, ಕದಳಿ ಛೇದನ, ಪ್ರತಿಷ್ಠಾ ಹೋಮಾದಿಗಳು, ಪೂರ್ಣಾಹುತಿ, ಬಲಿಹರಣ, ಅಷ್ಟದಿಗಧನ, ಚಿತ್ರಾರತಿ,ಕುಂಭಾಭಿಷೇಕ, ಪಂಚಾಮೃತಾಭಿಷೇಕ, ಮಹಾಪೂಜೆ,ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next