Advertisement

ದುಬೈನಲ್ಲಿ ಕಳುವಾಗಿದ್ದ ಮರಡೋನ ಅವರ 20 ಲಕ್ಷದ ವಾಚ್‌ ಅಸ್ಸಾಮ್‌ನಲ್ಲಿ ಪತ್ತೆ!

08:57 PM Dec 11, 2021 | Team Udayavani |

ಗುವಾಹಟಿ (ಅಸ್ಸಾಮ್‌): ಫ‌ುಟ್‌ಬಾಲ್‌ ಜಗತ್ತಿನ ದಂತಕಥೆ ಡಿಯೆಗೊ ಮರಡೋನ ಅವರ 20 ಲಕ್ಷ ರೂ. ಮೌಲ್ಯದ ಹ್ಯೂಬ್ಲಿಟ್‌ ಕೈಗಡಿಯಾರ ಈ ವರ್ಷ ದುಬೈನಲ್ಲಿ ಕಳುವಾಗಿತ್ತು.

Advertisement

ಶನಿವಾರ ಮುಂಜಾನೆ ಅಸ್ಸಾಮ್‌ನ ಶಿವಸಾಗರ ಜಿಲ್ಲೆಯಲ್ಲಿ ಅದನ್ನು ಮರುವಶ ಮಾಡಿಕೊಳ್ಳಲಾಗಿದೆ! ಹಾಗೆಯೇ ಕಳವು ಮಾಡಿದ ವ್ಯಕ್ತಿ ವಾಜಿದ್‌ ಹುಸೇನ್‌ನನ್ನು ಬಂಧಿಸಲಾಗಿದೆ! ದುಬೈನ ಭದ್ರತಾ ಕಂಪನಿಯೊಂದರಲ್ಲಿ ದಿವಂಗತ ಫ‌ುಟ್ಬಾಲಿಗ ಮರಡೋನಗೆ ಸಂಬಂಧಿಸಿದ ವಸ್ತುಗಳನ್ನೆಲ್ಲ ಸಂಗ್ರಹಿಸಿಡಲಾಗಿದೆ. ಅಲ್ಲೇ ಭದ್ರತಾ ಸಿಬ್ಬಂದಿಯಾಗಿ ವಾಜಿದ್‌ ಕೆಲಸ ಮಾಡುತ್ತಿದ್ದರು.

ಕೆಲವು ದಿನಗಳ ನಂತರ ತಂದೆಗೆ ಅನಾರೋಗ್ಯವೆಂದು ಹೇಳಿ ಭಾರತಕ್ಕೆ ವಾಪಸಾಗಿದ್ದರು. ದುಬೈ ಪೊಲೀಸರಿಗೆ ಅವರ ಮೇಲೊಂದು ಕಣ್ಣಿದ್ದೇ ಇತ್ತು. ಅವರು ಅಸ್ಸಾಮ್‌ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ವಾಜಿದ್‌ನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ : ಕುಂದಾಪುರ : ಅನಾರೋಗ್ಯ ಪೀಡಿತ ಬಾಲಕನ ಚಿಕಿತ್ಸೆಗಾಗಿ ಯಕ್ಷ ವೇಷ ಧರಿಸಿ ಧನ ಸಂಗ್ರಹ

Advertisement

Udayavani is now on Telegram. Click here to join our channel and stay updated with the latest news.

Next