Advertisement
ಯಾವ ಸಂಸ್ಥೆ ಇದು?ಮ್ಯಾಪ್‌ಮೈ ಇಂಡಿಯಾ ಎನ್ನುವುದು 1995ರಲ್ಲಿ ಸ್ಥಾಪನೆಯಾಗಿರುವ ಸಂಸ್ಥೆ ಇದು. ರಾಕೇಶ್ ವರ್ಮಾ ಮತ್ತು ರಶ್ಮಿ ವರ್ಮಾ ಅದನ್ನು ಆರಂಭಿಸಿದ್ದರು. ಅದು ನಿಗದ ರಸ್ತೆ ಅಥವಾ ಸ್ಥಳದ 360 ಡಿಗ್ರಿ ವೀಕ್ಷಣೆ ಮಾಡಲು ಸಾಧ್ಯವಾಗುವಂಥ ಹೊಸ ವ್ಯವಸ್ಥೆ ಅಭಿವೃದ್ಧಿಪಡಿಸಿದೆ ಮತ್ತು ಬುಧವಾರದಿಂದಲೇ ಅದು ಲಭ್ಯವಾಗಿದೆ. ಅದರ ಹೆಗ್ಗಳಿಕೆ ಏನೆಂದರೆ 3ಡಿ ಮೆಟಾವರ್ಸ್ ವ್ಯವಸ್ಥೆಯಲ್ಲಿಯೂ ಕೂಡ ಲಭ್ಯವಾಗಲಿದೆ.
ಸ್ಥಳೀಯವಾಗಿ ಜನಪ್ರಿಯವಾಗಿರುವ ಸ್ಥಳಗಳು, ವಿಳಾಸಗಳನ್ನು ಪತ್ತೆ ಹಚ್ಚಲು ಇದು ನೆರವಾಗಲಿದೆ. ಕಂಪನಿಯ ಸಿಇಒ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ರೋಹನ್ ವರ್ಮಾ ಹೇಳಿಕೊಂಡ ಪ್ರಕಾರ ಸ್ಥಳೀಯ ನಗರಗಳು, ರಸ್ತೆಗಳು, ವಿಳಾಸ ಪತ್ತೆ ಹಚ್ಚಲು ವಿದೇಶಿ ಮ್ಯಾಪ್ ಸೇವಾದಾರರ ಬದಲು ದೇಶಿಯ ತಂತ್ರಜ್ಞಾನದಿಂದ ಕೂಡಿದ ವ್ಯವಸ್ಥೆ ಬಳಕೆ ಮಾಡಬೇಕು ಎಂದಿದ್ದಾರೆ. ಇಸ್ರೋ ತಂತ್ರಜ್ಞಾನ
ಮ್ಯಾಪಲ್ಸ್ ರಿಯಲ್ ವ್ಯೂ ನೀಡಿದ ಹೇಳಿಕೆ ಪ್ರಕಾರ ಇಸ್ರೋದ ಉಪಗ್ರಹ ಚಿಕ್ರ ಮತ್ತು ಭೂಪರಿವೀಕ್ಷಣೆ ಮಾಹಿತಿ ಆಧಾರದಲ್ಲಿ 2ಡಿ ಮ್ಯಾಪ್ ಸೇವೆ ನೀಡಲಾಗುತ್ತದೆ. ಮ್ಯಾಪಲ್ಸ್ ಆ್ಯಪ್ ಅನ್ನು ಆ್ಯಂಡ್ರಾಯ್ಡ ಅಥವಾ ಐಒಎಸ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬೇಕು. 2017ರಲ್ಲೇ ಈ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಲಾಗಿತ್ತು ಎಂದು ಕಂಪನಿ ಹೇಳಿಕೊಂಡಿದೆ.
Related Articles
ರಸ್ತೆಗಳು ಮತ್ತು ವಿಳಾಸಗಳ ಬಗ್ಗೆ ಮ್ಯಾಪ್‌ನಲ್ಲಿ ಮಾಹಿತಿ ವಿನಿಯಮಕ್ಕೆ ಅವಕಾಶ ಇದೆ. ಕಾಂಪ್ಲೆಕ್ಸ್‌ಗಳು, ಬೀಚ್‌ಗಳು, ಪ್ರಮುಖ ಕೇಂದ್ರಗಳು, ವಸತಿ ಪ್ರದೇಶಗಳನ್ನು ಅದರಲ್ಲಿ ಸೇರ್ಪಡೆಗೊಳಿಸಲಾಗಿದೆ.
Advertisement
ಎಲ್ಲಿ ಉಪಯೋಗ?ಪ್ರವಾಸೋದ್ಯಮ, ರಿಯಲ್ ಎಸ್ಟೇಟ್, ಗೇಮಿಂಗ್, ರಕ್ಷಣೆ, ಕಾನೂನು ಮತ್ತು ಸುವ್ಯವಸ್ಥೆ ಜಾರಿ ವ್ಯವಸ್ಥೆ, ವರ್ಚುವಲ್ ರಿಯಾಲಿಟಿ ಬೆಂಗಳೂರಿಗೂ ಬರಲಿದೆ
ಮೊದಲ ಹಂತದಲ್ಲಿ ಬೆಂಗಳೂರು ಸೇರಿದಂತೆ ದೇಶದ 14 ನಗರಗಳಲ್ಲಿ ಇದು ಜಾರಿಯಾಗಲಿದೆ. ಅಹ್ಮದಾಬಾದ್, ಅಜ್ಮೀರ್, ಚಂಡೀಗಡ, ಚೆನ್ನೈ, ದೆಹಲಿ ಎನ್‌ಸಿಆರ್, ಗೋವಾ, ಗ್ರೇಟರ್ ಮುಂಬೈ, ಹೈದರಾಬಾದ್, ಜೈಪುರ್, ಜೋಧ್‌ಪುರ್, ನಾಶಿಕ್, ಪುಣೆಗಳಲ್ಲಿ ಈ ತಂತ್ರಜ್ಞಾನ ಜನಬಳಕೆಗೆ ಸಿಗಲಿದೆ.