Advertisement

ನಕ್ಷೆ ತಯಾರಿಕಾ ಅಧ್ಯಯನ ಕಾರ್ಟೊಗ್ರಫಿ

10:52 PM Jul 09, 2019 | mahesh |

ಕಾರ್ಟೊಗ್ರಫಿ ಎಂಬುದು ಒಂದು ವಿಜ್ಞಾನವೂ ಹೌದು. ಜತೆಗೆ ಮಾನವನಿಗೆ ಪ್ರಯಾಣದ ಸಂದರ್ಭದಲ್ಲಿ ಸಹಾಯಕ್ಕೆ ಬರುವಂತಹ ನಕ್ಷೆ ತಯಾರಿಕೆಯ ಒಂದು ಕಲೆಯೂ ಹೌದು. ಮ್ಯಾಪ್‌, ಚಾರ್ಟ್‌ಗಳನ್ನೊಳಗೊಂಡ ಅಧ್ಯಯನವನ್ನೂ ಈ ವಿಜ್ಞಾನ ಒಳಗೊಂಡಿದೆ. ಕಾರ್ಟೊಗ್ರಫಿ ಮತ್ತು ಜಿಯೋಗ್ರಫಿ ಪರಸ್ಪರ ಒಂದನ್ನೊಂದು ಬೆಸೆದುಕೊಂಡಿರುವಂತಹ ಅಧ್ಯಯನ ವಿಷಯ.

Advertisement

ಪ್ರಪಂಚದ ಮೂಲೆಮೂಲೆಯಲ್ಲಿರುವ ಐತಿಹಾಸಿಕ ಪ್ರದೇಶಗಳ ಮಾಹಿತಿ, ಹಿನ್ನೆಲೆಗಳ ನ್ನೊಳಗೊಂಡಂತೆ ನಕಾಶೆಯನ್ನು ತಯಾರಿಸುವುದೇ ಈ ಕಾರ್ಟೊಗ್ರಫಿ. ಜಿಯೋಗ್ರಫಿ ಮತ್ತು ಕಾಟೋìಗ್ರಫಿ ಪರಸ್ಪರ ಒಂದನ್ನೊಂದು ಅವಲಂಬಿಸಿರುವ ವಿಜ್ಞಾನ.

ಪ್ರಾಚೀನ ಕಾಲದ ಐತಿಹ್ಯ, ಕುರುಹುಗಳು, ಇತಿಹಾಸದಲ್ಲಿ ಕಳೆದು ಹೋದ ನಗರಗಳು, ಕಟ್ಟಡಗಳು, ನಿಧಿ ನಿಕ್ಷೇಪಗಳು ಇತ್ಯಾದಿಗಳು ಕಾರ್ಟೊಗ್ರಫಿಯ ಅಧ್ಯಯನದ ವಸ್ತು ವಿಷಯಗಳಾಗಿವೆ. ಅವುಗಳಿಂದಲೇ ಆಧುನಿಕ ಕಾರ್ಟೊಗ್ರಫಿ ಅಭಿವೃದ್ಧಿ ಪಡೆದಿದೆ ಎನ್ನುವುದನ್ನೂ ಅಲ್ಲಗಳೆಯುವಂತಿಲ್ಲ. ಗ್ರೀಕ್‌ ಮತ್ತು ರೋಮನ್‌ ದೇಶದ ಪ್ರಜೆಗಳನ್ನೇ ನಾವಿಂದು ಕಾರ್ಟೊಗ್ರಫಿಯ ಪ್ರವರ್ತಕರು ಎಂದು ಗುರುತಿಸುತ್ತೇವೆ. ಎಳವೆಯಲ್ಲಿ ನಾವು ಬಳಕೆ ಮಾಡಿದ ಅಟ್ಲಾಸ್‌ ಕಾರ್ಟೊಗ್ರಫಿಗೆ ಒಂದು ಉತ್ತಮ ಉದಾಹರಣೆ. ಗ್ರೀಕ್‌ ತತ್ವಜ್ಞಾನಿ ಅನಾಕ್ಸಿಮಾಂಡರ್‌ ಮತ್ತು ಬಹುಮುಖ ಪ್ರತಿಭೆ ಟಾಲೆಮಿಯನ್ನು ನಾವಿಲ್ಲಿ ಗುರುತಿಸಿಕೊಳ್ಳಲೆ ಬೇಕು. ಏಕೆಂದರೆ ಈ ಕ್ಷೇತ್ರಕ್ಕೆ ಅವರಿತ್ತ ಕೊಡುಗೆ ಅಪಾರ.

ಕಾರ್ಟೊಗ್ರಫಿ ಅಧ್ಯಯನದಲ್ಲಿ ಎರಡು ವಿಧ
1 ಜನರಲ್‌ ( ಸಾಮಾನ್ಯ) ಕಾರ್ಟೊಗ್ರಫಿ
2 ಥಿಮ್ಯಾಟಿಕ್‌ (ವಿಷಯಾಧಾರಿತ) ಕಾರ್ಟೊಗ್ರಫಿ
ಸಾಮಾನ್ಯ ಕಾರ್ಟೊಗ್ರಫಿ
ಸಾಮಾನ್ಯ ವಿಚಾರಗಳನ್ನೊಳಗೊಂಡ ನಕ್ಷೆಗಳಿಗೆ ಸೀಮಿತವಾದಂತಹ ಅಧ್ಯಯನ. ಸ್ಥಳ, ಉಲ್ಲೇಖಗಳು ಮತ್ತು ವ್ಯವಸ್ಥೆಗೆ ಸಂಬಂಧಿಸಿದಂತಹ ಅಂಶಗಳ ಸುತ್ತ ಅಧ್ಯಯನ ಮಾಡಲಾಗುತ್ತದೆ. ಇದಕ್ಕೆ ಉದಾಹರಣೆ ಯುಎಸ್‌ನ ಭೂವೈಜ್ಞಾನಿಕ ಸಮೀಕ್ಷೆ ತಯಾರಿಸಿದ ಟೆಫೋಗ್ರಾಫಿಕ್‌ ನಕ್ಷೆಗಳು, ಗ್ರೇಟ್‌ ಬ್ರಿಟನ್‌ ತಯಾರಿಸಿದ ಆರ್ಡನೆನ್ಸ್‌ ನಕ್ಷೆಗಳು.

ವಿಷಯಾಧಾರಿತ ಕಾರ್ಟೊಗ್ರಫಿ
ಇದು ನಿರ್ದಿಷ್ಟ ಭೌಗೋಳಿಕ ವಿಷಯಗಳ ಬಗ್ಗೆ ರಚಿತವಾಗುವ ಕಾರ್ಟೊಗ್ರಫಿ. ಹಾಗೆಯೇ ಇದು ನಿರ್ದಿಷ್ಟ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡಿರುವ ಅಧ್ಯಯನವೂ ಹೌದು. ಉದಾಹರಣೆಗೆ ಭಾರತದ ಉತ್ತರ ಪ್ರದೇಶದ ಕೃಷಿಯನ್ನು ಪ್ರದರ್ಶಿಸುವ ಚುಕ್ಕೆಗಳ ನಕ್ಷೆ ಅಥವಾ ಟೆಕ್ಸಾಸ್‌ನ ಕೌಂಟಿಗಳ ಜನಸಂಖ್ಯಾ ಮಾಹಿತಿಯನ್ನು ಪ್ರದರ್ಶಿಸುವ ಮಾದರಿ ನಕ್ಷೆಗಳು.

Advertisement

ಕಾರ್ಟೊಗ್ರಫಿ ಪ್ರೊಜೆಕ್ಷನ್‌ ಎಂದರೇನು?
ನಕ್ಷೆಯ ಪ್ರಕ್ಷೇಪಗಳು ಹೊಂದಿರುವ ವಿವಿಧ ರೀತಿಯ ಸಂಬಂಧ, ಪ್ರದೇಶಗಳ ಆಕಾರದ ನಿಖರತೆಗಳನ್ನು ಒಳಗೊಂಡಿರುವುದೇ ಪ್ರೊಜೆಕ್ಷನ್‌. ಕೇಂದ್ರ ಮೆರಿಡಿಯನ್‌, ಸಮಾನಾಂತರ ರೇಖೆಗಳು, ಕೋನಿಕ್‌ ಪ್ರಕ್ಷೇಪಗಳು, ನೇರ-ಲಂಬ ರೇಖೆಗಳು ಇತ್ಯಾದಿಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸವನ್ನು ಇದು ಮಾಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next