ಚತ್ತೀಸ್ ಗಢ್/ಬಿಜಾಪುರ್:ಹಲವಾರು ಮಂದಿಯ ಹತ್ಯೆಯ ಹಿಂದಿದ್ದ ಹಿರಿಯ ನಕ್ಸಲ್ ಮುಖಂಡನನ್ನು ಆತನ ಸಹಚರರೇ ಹತ್ಯೆಗೈದಿರುವ ಘಟನೆ ಚತ್ತೀಸ್ ಗಢದ ಬಿಜಾಪುರ್ ಜಿಲ್ಲೆಯಲ್ಲಿ ಶುಕ್ರವಾರ(ಅಕ್ಟೋಬರ್ 2, 2020) ನಡೆದಿರುವುದಾಗಿ ವರದಿ ತಿಳಿಸಿದೆ.
ಪೊಲೀಸರ ಪ್ರಕಾರ, ಈ ನಕ್ಸಲ್ ನಾಯಕನ ತಲೆಗೆ 8 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಅಲ್ಲದೇ ಗಂಗಾಲೂರು ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಹತ್ಯೆಯಲ್ಲಿ ನಕ್ಸಲ್ ಮುಖಂಡ ಆರೋಪಿಯಾಗಿರುವುದಾಗಿ ತಿಳಿಸಿದೆ.
ನಕ್ಸಲ್ ಸಂಘಟನೆಯ ಡಿವಿಷನಲ್ ಕಮಿಟಿಯ ಸದಸ್ಯ ಮೋದಿಯಾಮ್ ವಿಜ್ಜಾ ನಕ್ಸಲ್ ಮುಖಂಡನನ್ನು ಆತನ ಸಹಚರರೇ ಹತ್ಯೆಗೈದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ ಎಂದು ಚತ್ತೀಸ್ ಗಢದ ಬಸ್ತಾರ್ ರೇಂಜ್ ನ ಇನ್ಸ್ ಪೆಕ್ಟರ್ ಜನರಲ್ ಪೊಲೀಸ್ ಪಿ.ಸುಂದರ್ರಾಜ್ ತಿಳಿಸಿದ್ದಾರೆ.
ಇದನ್ನೂ ಓದಿ:“ಅವ್ನು ಬರ್ತಿದ್ದಾನೆ ಕಣ್ರೋ..”ಇಂದಿನಿಂದ ರಾಜಸ್ಥಾನ ರಾಯಲ್ಸ್ ತಂಡ ಸೇರಲಿರುವ ಬೆನ್ ಸ್ಟೋಕ್ಸ್
ಬಿಜಾಪುರ್ ಜಿಲ್ಲೆಯ ಬಸ್ತಾರ್ ಡಿವಿಷನ್ ಪ್ರದೇಶದಲ್ಲಿ ಹಲವಾರು ಜನರನ್ನು ಕೊಂದ ಘಟನೆಯ ಹಿಂದೆ ವಿಜ್ಜಾ ಕೈವಾಡವಿರುವುದಾಗಿ ಇನ್ಸ್ ಪೆಕ್ಟರ್ ಜನರಲ್ ವಿವರಿಸಿದ್ದಾರೆ. ಅಮಾಯಕ ಬುಡಕಟ್ಟು ಜನರ ಮೇಲಿನ ಹಿಂಸಾಚಾರ, ಹತ್ಯೆಯ ವಿಚಾರದಲ್ಲಿ ಸ್ಥಳೀಯ ನಕ್ಸಲೀಯರಿಗೂ, ಹಿರಿಯ ನಕ್ಸಲ್ ಮುಖಂಡರ ನಡುವೆ ಭಿನ್ನಾಭಿಪ್ರಾಯ ಇದ್ದಿರುವುದಾಗಿ ತಿಳಿಸಿದ್ದಾರೆ.