Advertisement

3ನೇ ಬಾರಿ ನೇಪಾಳ ಪ್ರಧಾನಿಯಾಗಿ ಪುಷ್ಪ ಕುಮಾರ್‌ ದಹಲ್‌ ನೇಮಕ

01:06 AM Dec 26, 2022 | Team Udayavani |

ಕಾಠ್ಮಂಡು: ನೇಪಾಲದ ಪ್ರಧಾನಮಂತ್ರಿಯಾಗಿ ಸಿಪಿಎನ್‌-ಮಾವೋಯಿಸ್ಟ್‌ ಸೆಂಟರ್‌ನ ಮುಖಂಡ ಪುಷ್ಪ ಕುಮಾರ್‌ ದಹಲ್‌ (ಪ್ರಚಂಡ) ಅವರನ್ನು ನೇಮಿ ಸಲಾಗಿದೆ. ಮೂರನೇ ಬಾರಿಗೆ ಅವರು ಈ ಹುದ್ದೆ ಅಲಂಕರಿಸಲಿದ್ದಾರೆ.

Advertisement

ನೇಪಾಲ ಕಾಂಗ್ರೆಸ್‌ ನೇತೃತ್ವದ ಐದು ಪಕ್ಷಗಳ ಮೈತ್ರಿಕೂಟದಿಂದ ಅವರ ಪಕ್ಷ ಬೆಂಬಲ ವಾಪಸ್‌ ಪಡೆದ ಬಳಿಕ ಈ ಬೆಳವಣಿಗೆ ನಡೆದಿದೆ. ಅವರಿಗೆ ಮಾಜಿ ಪ್ರಧಾನಿ ಕೆ.ಪಿ.ಶರ್ಮಾ ಒಲಿ ನೇತೃತ್ವದ ಸಿಪಿಎನ್‌-ಯುಎಂಎಲ್‌ ಪಕ್ಷದ ಬೆಂಬಲವೂ ಸಿಕ್ಕಿದೆ. ಜತೆಗೆ ರಾಷ್ಟ್ರೀಯ ಸ್ವತಂತ್ರ ಪಾರ್ಟಿ (ಆರ್‌ಎಸ್‌ಪಿ) ಕೂಡ ಬೆಂಬಲ ನೀಡಿದೆ.

275 ಮಂದಿ ಸದಸ್ಯರು ಇರುವ ಸಂಸತ್‌ನಲ್ಲಿ ಪ್ರಚಂಡ ಅವರಿಗೆ ಒಟ್ಟು 165 ಮಂದಿ ಸಂಸದರು ಬೆಂಬಲ ನೀಡಿದ್ದಾರೆ. ಈ ಬಗ್ಗೆ ಸಂಸದರ ಸಹಿ ಇರುವ ಪತ್ರವನ್ನು ರಾಷ್ಟ್ರಪತಿ ವಿದ್ಯಾದೇವಿ ಭಂಡಾರಿ ಅವರಿಗೆ ಕಳುಹಿಸಿಕೊಡಲಾಗಿದೆ. ಪ್ರಚಂಡ ಅವರ ನೇಮಕ ಭಾರತ ಮತ್ತು ನೇಪಾಲ ನಡುವಿನ ಬಾಂಧವ್ಯಕ್ಕೆ ಹೆಚ್ಚು ಉತ್ತೇಜನಕಾರಿಯಾಗಿ ಇರದು ಎಂದು ಹೇಳ ಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next